• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಲೋಕಸಭಾ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಗೆ ದೊಡ್ಡ ಸವಾಲು

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಅಕ್ಟೋಬರ್. 06: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಅಲ್ಪಾವಧಿ ಅವಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತ ಬಿಜೆಪಿ - ಕಾಂಗ್ರೆಸ್ ಅಭ್ಯರ್ಥಿಗಳು ಯಾರು? ಎನ್ನುವ ಯಕ್ಷಪ್ರಶ್ನೆ ಅನೇಕರನ್ನು ತೀವ್ರವಾಗಿ ಕಾಡುತ್ತಿದೆ.

ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಬಿ. ಶ್ರೀರಾಮುಲು ರಾಜೀನಾಮೆ ನೀಡಿರುವ ಲೋಕಸಭಾ ಸ್ಥಾನಕ್ಕೆ ಬಿ. ಶ್ರೀರಾಮುಲು ಸೋದರಳಿಯ, ಕಂಪ್ಲಿಯ ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಅವರನ್ನು ಓಲೈಸಿ ಕಣಕ್ಕಿಳಿಸಲು ಪಕ್ಷದ ವರಿಷ್ಠರು ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದಾರೆ.

ಲೋಕಸಭೆ ಚುನಾವಣೆ 2019 : ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅನೇಕರು ಸ್ಪರ್ಧೆಯಲ್ಲಿ ಇದ್ದರೂ, ಮಹಿಳಾ ಅಭ್ಯರ್ಥಿಯಾಗಿ ಕಮಲಾ ಮರಿಸ್ವಾಮಿ ಅವರು ಮುಂಚೂಣಿಯಲ್ಲಿದ್ದಾರೆ. ಆದರೆ, ಅತ್ಯಲ್ಪ ಅವಧಿ ಇರುವ ಕಾರಣ, ಉಪ ಚುನಾವಣೆಯ ಫಲಿತಾಂಶವನ್ನು ಬದಿಗೊತ್ತಿ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಲು ಅವಕಾಶ ನೀಡುವ ವಿಶ್ವಾಸ, ಭರವಸೆ ನೀಡಿದಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಬಿ. ರಾಂಪ್ರಸಾದ್ ಅವರು ಬಿ. ಶ್ರೀರಾಮುಲು ವಿರುದ್ಧ ಎರಡು ಬಾರಿ ಬಳ್ಳಾರಿ ಗ್ರಾಮೀಣ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ತೀವ್ರ ಪೈಪೋಟಿ ನೀಡಿ, ಸೋಲನುಭವಿಸಿದ್ದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಸೇರಿ, ಜಿಲ್ಲೆಯ ಮಾಜಿ ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ, ಸಂತೋಷ್ ಎಸ್. ಲಾಡ್, ಹಿರಿಯ ರಾಜಕಾರಣಿಗಾಳದ ಎನ್. ಸೂರ್ಯನಾರಾಯಣರೆಡ್ಡಿ, ಕೆ.ಸಿ. ಕೊಂಡಯ್ಯ, ರಾಜ್ಯಸಭಾ ಸದಸ್ಯ ನಾಸೀರ್ ಅಹ್ಮದ್, ಶಾಸಕರಾದ ಇ. ತುಕಾರಾಂ, ಬಿ. ನಾಗೇಂದ್ರ ಸೇರಿದಂತೆ ಅನೇಕ ರಾಜಕಾರಣಿಗಳ ಜೊತೆ ಉತ್ತಮ ಸ್ನೇಹಸಂಬಂಧ ಹೊಂದಿದ್ದು, ಟಿಕೇಟ್ ಆಕಾಂಕ್ಷಿ ಆಗಿದ್ದಾರೆ.

ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲೂ ಕೂಡ ಸ್ಪರ್ಧಾಳುಗಳ ಪೈಕಿ ಬಳ್ಳಾರಿ ಜಿಲ್ಲೆಯಿಂದ ಏಐಸಿಸಿಗೆ ಶಿಫಾರಸ್ಸು ಆಗಿರುವ ಮೂವರು ಹೆಸರುಗಳ ಪಟ್ಟಿಯಲ್ಲಿ ಬಿ. ರಾಂಪ್ರಸಾದ್ ಅವರ ಹೆಸರೂ ಸೇರಿರುವ ಹಿನ್ನಲೆಯಲ್ಲಿ ಇವರ ಸ್ಪರ್ಧೆಯನ್ನೇ ವರಿಷ್ಟರು ಅಂತಿಮಗೊಳಿಸುವ ಸಾಧ್ಯತೆಗಳಿವೆ ಎನ್ನುವುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.

ಉಪಚುನಾವಣೆ: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿ.ವೈ ರಾಘವೇಂದ್ರ ಸ್ಪರ್ಧೆ ಖಚಿತ

ಏನೇ ಆಗಲಿ, ಅತ್ಯಲ್ಪಾವಧಿಗಾಗಿ ನಡೆಯುತ್ತಿರುವ ಲೋಕಸಭಾ ಉಪಚುನಾವಣೆಯಲ್ಲಿ ಸಂಪನ್ಮೂಲಗಳ ಕ್ರೋಢೀಕರಣ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ.

ಉಪಚುನಾವಣೆ: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿ.ವೈ ರಾಘವೇಂದ್ರ ಸ್ಪರ್ಧೆ ಖಚಿತ

ದಿನೇ ದಿನೆ ಹೆಚ್ಚುತ್ತಿರುವ ಬೇಸಿಗೆಯ ಬಿಸಿಯ ಮಧ್ಯೆ, ಚುನಾವಣೆಯನ್ನು ಎದುರಿಸುವುದು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ಮೊಸರಲ್ಲಿ ಕಲ್ಲು ಹುಡುಕಿದಂತೆ ಆಗಿದೆ.

English summary
Bellary Lok Sabha by-election is a big challenge for the BJP and the Congress. Read a short article on this topic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X