ಆಧುನಿಕತೆಯ ತೆವಲಿನಲ್ಲಿ ಹೆತ್ತ ಮಗುವನ್ನೇ ಕೊಂದ

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಏಳು ವರ್ಷದ ಮುಗ್ಧ ಬಾಲಕಿಯೊಬ್ಬಳು ಶವವು ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಸಮೀಪ ಪತ್ತೆಯಾಗುವ ಮೂಲಕ live in relationship ಪಾಪದ ಕೂಸಿನ ಹತ್ಯೆ ಪ್ರಕರಣ ಬಯಲಾಗಿದೆ.
ಏನಾಗಿತ್ತೆಂದರೆ ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿ 34 ವರ್ಷದ ನಾಗರಾಜ್ ಮತ್ತು ಮಹಿಳೆಯೊಬ್ಬರು (ಸವಿತಾ) live in relationship ಶೈಲಿಯಲ್ಲಿ ಜೀವನ ನಡೆಸುತ್ತಿದ್ದರು. ಅವರಿಗೆ ದೀಪಿಕಾ ಎಂಬ 7 ವರ್ಷದ ಮಗುವೂ ಇತ್ತು.
ಈ ಮಗು ಏಪ್ರಿಲ್ ಮೊದಲ ವಾರದಲ್ಲಿ ನಾಪತ್ತೆಯಾಗಿದ್ದಳು. ಆತಂಕಕ್ಕೆ ಬಿದ್ದ ದೀಪಿಕಾಳ ತಾಯಿ ಏ.7ರಂದು ಮಗು ಕಾಣೆಯಾಗಿರುವ ಬಗ್ಗೆ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತಕ್ಷಣ ತನಿಖೆ ಕೈಗೆತ್ತಿಕೊಂಡಿದ್ದರು.
ಅಷ್ಟರಲ್ಲೇ ಹಗರಿಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಬಾಲಕಿಯ ಶವ ಸಿಕ್ಕಿರುವ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಇಲ್ಲಿನ ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ, ಬೆಂಗಳೂರಿನಿಂದ ನಾಪತ್ತೆಯಾಗಿರುವ ದೀಪಿಕಾಳದ್ದೇ ಆ ಶವ ಎಂಬುದಾಗಿ ತಿಳಿದುಬಂದಿದೆ.
ಲಿವ್ ಇನ್ ಸಂಬಂಧದ ಪಾಪದ ಕೂಸು ದೀಪಿಕಾ:
ಕುಟುಂಬದ ಹಿನ್ನೆಲೆ ಹೀಗಿದೆ- ಸವಿತಾ ಕುಟುಂಬ ಆಂಧ್ರದಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿತ್ತು. ನಗರದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸವಿತಾ, ಕೌಟುಂಬಿಕ ಕಲಹದಿಂದ ಪತಿಯನ್ನು ತೊರೆದು ಮಗನ ಜತೆ ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿ ವಾಸವಿದ್ದರು. ಆ ವೇಳೆ ನೆರೆಮನೆಯಲ್ಲಿ ವಾಸವಿದ್ದ ಹಗರಿಬೊಮ್ಮನಹಳ್ಳಿ ತಾಲೂಕಿನ ನಾಗರಾಜನ ಪರಿಚಯವಾಗಿದೆ.
ಪಾಪಿ ನಾಗರಾಜ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಮುಂದೆ ಸವಿತಾ-ನಾಗರಾಜ ಹತ್ತಿರವಾಗಿದ್ದಾರೆ. ಕಾಲಾಂತರದಲ್ಲಿ ಅವರಿಬ್ಬರ ಮಧ್ಯೆ ಪ್ರೇಮ ಹುಟ್ಟುಕೊಂಡಿದೆ. ಇಬ್ಬರೂ ಒಂದೇ ಮನೆಯಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗದೆಯೇ ಲಿವ್ ಇನ್ ಸಂಬಂಧ ಆರಂಭಿಸಿದ್ದಾರೆ. ಆ ಸಹ ಜೀವನಕ್ಕೆ ಒಂದು ಮಗುವೂ ಆಗಿದೆ. ಸವಿತಾ, ಆಕೆಯ ಮಗ, ಮಗಳು ದೀಪಿಕಾ ಮತ್ತು ನಾಗರಾಜ ಒಟ್ಟಿಗೇ ಇದ್ದರು. ಈ ಮಧ್ಯೆ ನಾಗರಾಜ ಹಾಗೂ ಸವಿತಾ ಸಂಬಂಧದ ಬಗ್ಗೆ ಗೊತ್ತಿಲ್ಲದೆ, ಆತನ ಪೋಷಕರು ಊರಿನಲ್ಲಿ ಮದುವೆ ನಿಶ್ಚಯ ಮಾಡಿ, ಮೇನಲ್ಲಿ ಮದುವೆ ನಿಗದಿ ಮಾಡಿದ್ದರು.
ಮತ್ತೂ ಒಂದು ಮದುವೆ ಆಸೆಗೆ ಬಿದ್ದ ನಾಗರಾಜನಿಗೆ ಲಿವ್ ಇನ್ ಸಂಬಂಧ ಮತ್ತು ಅದರಿಂದ ಹುಟ್ಟಿದ ಮಗಳು ತನ್ನ ಮದುವೆಗೆ ಅಡ್ಡಬರಬಹುದು ಎಂಬ ವಿಚಾರ ತಲೆ ಕೆಡಿಸಿದೆ. ತನಗೆ ಈಗಾಗಲೇ ಒಂದು ಮಗು ಇರುವ ಬಗ್ಗೆ ಗೊತ್ತಾದರೆ ಕುಟುಂಬದಲ್ಲಿ ಅವಮಾನಕ್ಕೊಳಗಾಗಬೇಕಾಗುತ್ತದೆ ಎಂದು ಮಗಳನ್ನು ಕೊಲೆ ಮಾಡಿ, ಸವಿತಾಳಿಂದಲೂ ದೂರವಾಗಲು ನಾಗರಾಜ ನಿರ್ಧರಿಸುತ್ತಾನೆ. ಮತ್ತು ಅದನ್ನು ಕಾರ್ಯರೂಪಕ್ಕೆ ತಂದು ಮಗಳನ್ನು ಸಾಯಿಸಿಬಿಡುತ್ತಾನೆ.
ಮಾರ್ಚ್ 30ರಂದು ಪುತ್ರಿ ದೀಪಿಕಾಳನ್ನು ಕಾರಿನಲ್ಲಿ ಹಗರಿಬೊಮ್ಮನಹಳ್ಳಿ ವರೆಗೂ ಕರೆದೊಯ್ದ ನಾಗರಾಜ, ಸಕ್ಕರೆಹಳ್ಳಿ ಮುಖ್ಯರಸ್ತೆಯಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದ. ನಂತರ ಭಯಗೊಂಡು ಕಾರಿನಲ್ಲೇ ನಿದ್ರೆ ಮಾತ್ರೆ ಸೇವಿಸಿ ತಾನೂ ಆತ್ಮಹತ್ಯೆಗೂ ಯತ್ನಿಸಿದ್ದ. ಸ್ಥಳೀಯರು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದರು. ಇತ್ತ, ಹಗರಿಬೊಮ್ಮನಹಳ್ಳಿ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.
ಇತ್ತ ಸಕ್ಕರೆಹಳ್ಳಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಅದು ಪೊಲೀಸರು ಮೂಲಕ ನಾಗರಾಜನ ಕಿವಿಗೂ ಬಿತ್ತು, ಆಗ ಮತ್ತಷ್ಟು ಗಾಬರಿಗೊಂಡು ಆಸ್ಪತ್ರೆಯಿಂದ ನಾಪತ್ತೆಯಾದ. ಅದರಿಂದ ಮೃತ ಬಾಲಕಿ ಹಾಗೂ ನಾಗರಾಜನಿಗೂ ಸಂಬಂಧವಿರುವ ಬಗ್ಗೆ ಅನುಮಾನಗೊಂಡು ಹಗರಿಬೊಮ್ಮನಹಳ್ಳಿ ಪೊಲೀಸರು, ನಾಗರಾಜನನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications