ಜಮೀರ್ ಅಹ್ಮದ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಬಳ್ಳಾರಿ ಪೊಲೀಸ್
Recommended Video
ಬಳ್ಳಾರಿ, ಜನವರಿ 12: ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರು ಕೆಲ ದಿನಗಳ ಹಿಂದೆ ಪೌರತ್ವ ಕಾಯ್ದೆಯ ವಿಚಾರವಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದರು, ಆದ ಕಾರಣ ನಾಳೆ ಕಾಂಗ್ರೆಸ್ ನ ಜಮೀರ್ ಅಹ್ಮದ್ ಖಾನ್ ಅವರು ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ ಅವರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದರು.
ಈ ಬಗ್ಗೆ ಮಾತನಾಡಿರುವ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ""ಇಂದು ನಡೆಯುವ ಜಮೀರ್ ಅಹ್ಮದ್ ಅವರ ಪ್ರತಿಭಟನೆಗೆ ಅನುಮತಿ ನೀಡಿಲ್ಲಾ ಎಂದು ಹೇಳಿದ್ದಾರೆ. ಕಾನೂನು ಮೀರಿ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ'' ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಪ್ರತಿಭಟನೆ ಮಾಡುವ ಮುನ್ನ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು , ಆದರೆ ಈವರೆಗೂ ಜಮೀರ್ ಅಹ್ಮದ್ ಕಡೆಯವರು ಅನುಮತಿ ಪಡೆದುಕೊಂಡಿಲ್ಲಾ, ಕೇವಲ ಎಸ್‌ಪಿ ಕಚೇರಿಗೆ ಬಂದು ಮನವಿ ಪತ್ರ ನೀಡಿದ್ದಾರೆ. ಅವರು ನೀಡಿದ ಮನವಿ ಪತ್ರಕ್ಕೆ ನಮ್ಮ ಕಚೇರಿಯಿಂದ ಸೀಲ್ ಹಾಕಿಕೊಟ್ಟಿದ್ದಾರೆ ಅಷ್ಟೇ. ಹಾಗೆಂದ ಮಾತ್ರಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ ಎಂದು ಅರ್ಥ ಅಲ್ಲ ಎಂದು ಎಸ್ಪಿ ಹೇಳಿದರು.

ಇದೇ ಸಂದರ್ಭದಲ್ಲಿ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಾಕಾರಿಯಾಗಿ ಮಾತನಾಡಿದ ಹಿನ್ನೆಲೆ ಅವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಅಲ್ಲದೇ ಪ್ರಕರಣ ತನಿಖೆ ನಡೆಯುತ್ತಿದೆ, ಇನ್ನು ಅವರನ್ನು ಬಂಧಿಸಬೇಕೋ, ಬೇಡವೋ ಎಂಬುದು ತನಿಖಾ ಅಧಿಕಾರಿಯ ವಿವೇಚನೆಗೆ ಬಿಟ್ಟಿದ್ದು. ಹೀಗಾಗಿ ಇನ್ನು ಯಾಕೆ ಬಂಧಿಸಿಲ್ಲಾ ಎನ್ನುವುದಕ್ಕೆ ಉತ್ತರ ಕೊಡಲು ಆಗುವುದಿಲ್ಲ. ಅಲ್ಲದೇ ಪ್ರಕರಣ ಸಂಬಂಧ ಹೆಚ್ಚಿನ ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗಿದೆ. ಆದಷ್ಟು ಬೇಗ ಚಾರ್ಜ್ ಸೀಟ್ ಸಲ್ಲಿಸಲಾಗುವುದು ಎಂದರು.
ಬಳ್ಳಾರಿಯಲ್ಲಿ ಇಂದು ಮಾತನಾಡಿದ ಸೋಮಶೇಖರ್ ರೆಡ್ಡಿ, ""ಜಮೀರ್ ಅಹ್ಮದ್ ಒಬ್ಬ ಪ್ರಚಾರ ಪ್ರಿಯ. ಹೀಗಾಗಿ ನಾಳೆ ನಮ್ಮ ಮನೆಗೆ ಬರುತ್ತೇನೆ ಎಂದಿದ್ದಾರೆ. ಬೇಕಿದ್ದರೆ ಜಮೀರ್ ಅಹ್ಮದ್ ಬಳ್ಳಾರಿಗೆ ಬರಲಿ ಅದಕ್ಕೆ ನಾ ಬೇಡ ಅನ್ನಲ್ಲ ಎಂದರು.

ಅಲ್ಲದೇ ನಾ ಮೊನ್ನೆ ಮಾತನಾಡಿದ್ದು ದೇಶ ದ್ರೋಹಿಗಳಿಗೆ, ನನ್ನ ದೇಶದ ಆಸ್ತಿ ಪಾಸ್ತಿ ಹಾನಿ ಮಾಡುತಿದ್ದಾರೆ, ಈ ದೇಶದ ಪ್ರಜೆ ಆಗಿ ನನಗೆ ನೋವಾಗುತ್ತದೆ. ಆ ನೋವು ಸಹಿಸದೆ ಹಾಗೆ ಹೇಳಿದ್ದೇನೆ. ಆದರೆ ನನ್ನ ಆ ಹೇಳಿಕೆಯನ್ನು ಕಾಂಗ್ರೆಸ್ ಈಗ ಬಳಸಿಕೊಳ್ಳುತ್ತಿದೆ ಎಂದರು.












Click it and Unblock the Notifications