Actor Darshan: ಕೊನೆಗೂ ದರ್ಶನ್‌ರ ಬಹುದಿನಗಳ ಬೇಡಿಕೆ ಈಡೇರಿಸಿದ ಜೈಲು ಅಧಿಕಾರಿಗಳು

ನಟ ದರ್ಶನ್‌ಗೆ ಜಾಮೀನು ಸಿಗುತ್ತದೆ ಎಂದು ಹೆಲಿಕ್ಯಾಪ್ಟರ್ ಬುಕ್ ಮಾಡಿಕೊಂಡು ಕಾಯುತ್ತಿದ್ದವರಿಗೆ ಕೋರ್ಟ್ ನಿರಾಸೆ ಮಾಡಿದೆ. ದರ್ಶನ್‌ ಜಾಮೀನು ಅರ್ಜಿ ತಿರಸ್ಕಾರ ಮಾಡಿದ್ದು, ಅಭಿಮಾನಿಗಳು, ಕುಟುಂಬದವರಿಗೆ ಶಾಕ್ ಕೊಟ್ಟಿದೆ. ಬಳ್ಳಾರಿ ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿದ್ದ ದರ್ಶನ್‌ಗೆ ಬೆನ್ನು ನೋವು ತೀವ್ರವಾಗಿದ್ದು, ವೈದ್ಯರ ತಪಾಸಣೆ ಬಳಿಕ, ಅವರ ಬಹುದಿನಗಳ ಬೇಡಿಕೆಯನ್ನು ಜೈಲು ಅಧಿಕಾರಿಗಳು ಈಡೇರಿಸಿದ್ದಾರೆ.

ದರ್ಶನ್‌ಗೆ ಬೆನ್ನು ನೋವು ಹೆಚ್ಚಾದ ಬೆನ್ನಲ್ಲೇ ತಪಾಸಣೆ ಮಾಡಿದ್ದ ವೈದ್ಯರು, ದರ್ಶನ್‌ಗೆ ಮೆಡಿಕಲ್ ಬೆಡ್, ದಿಂಬು ಕೊಡುವಂತೆ ವರದಿಯಲ್ಲಿ ತಿಳಿಸಿದ್ದರು. ವೈದ್ಯರ ವರದಿ ಬಳಿಕ ಜೈಲು ಅಧಿಕಾರಿಗಳು ದರ್ಶನ್‌ಗೆ ಕೊನೆಗೂ ಮೆಡಿಕಲ್ ಬೆಡ್ ಮತ್ತು ದಿಂಬಿನ ವ್ಯವಸ್ಥೆ ಮಾಡಿದ್ದಾರೆ. ಬುಧವಾರ ಜೈಲಿಗೆ ಹಾಸಿಗೆ ಮತ್ತು ದಿಂಬನ್ನು ತರಿಸಿದ್ದು, ದರ್ಶನ್‌ಗೆ ಕೊಡಲಾಗಿದೆ.

Ballari Jail Officers Finally Provide Medical Bed and Pillow to Actor Darshan

ದರ್ಶನ್‌ ಪರಪ್ಪನ ಅಗ್ರಹಾರ ಸೇರಿದ ದಿನದಿಂದಲೂ ಹಾಸಿಗೆ, ದಿಂಬು ಮತ್ತು ಮನೆಯೂಟ ಕೊಡಬೇಕೆಂದು ಮನವಿ ಮಾಡಿದ್ದರು. ಮನೆ ಊಟ ಕೊಡಲು ಸಾಧ್ಯವಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ ಬಳಿಕ, ಕೋರ್ಟ್ ಕೂಡ ಮನೆ ಊಟ ನೀಡಲು ಆಗಲ್ಲ, ದರ್ಶನ್‌ ಕೂಡ ಸಾಮಾನ್ಯ ವಿಚಾರಣಾಧೀನ ಖೈದಿಯಂತೆ ಇರಬೇಕು ಎಂದಿತ್ತು.

ಬೆನ್ನು ನೋವು ಇರುವ ಕಾರಣ ಹಾಸಿಗೆ, ದಿಂಬು ಕೊಡುವಂತೆ ಕೇಳಿದ್ದರು ಜೈಲು ಅಧಿಕಾರಿಗಳು ಕೊಡಲು ನಿರಾಕರಿಸಿದ್ದರು. ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಆರೋಪ ಕೇಳಿಬಂದ ಬೆನ್ನಲ್ಲೇ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಬಳ್ಳಾರಿ ಜೈಲಿನಲ್ಲಿ ದರ್ಶನ್‌ರನ್ನು ಸಾಮಾನ್ಯ ವಿಚಾರಣಾಧಿನ ಖೈದಿಯಂತೆ ನಡೆಸಿಕೊಳ್ಳಲಾಗುತ್ತಿದೆ.

ಚಿಕಿತ್ಸೆ ಪಡೆಯಲು ನಿರಾಕರಿಸಿದ್ದ ದರ್ಶನ್‌

ದರ್ಶನ್‌ಗೆ ಯಾವುದೇ ಐಷಾರಾಮಿ ಸೌಲಭ್ಯ ಕೊಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದರು. ದರ್ಶನ್ ಪರ ವಕೀಲರು ಮತ್ತು ಕುಟುಂಬದವರು ಹಲವು ಬಾರಿ ದರ್ಶನ್‌ಗೆ ಬೆಡ್, ದಿಂಬು ಕೊಡುವಂತೆ ಮನವಿ ಮಾಡಿದ್ದರೂ, ಜೈಲು ಅಧಿಕಾರಿಗಳು ಅದಕ್ಕೆ ನಿರಾಕರಿಸಿದ್ದರು. ಅನಿವಾರ್ಯವಾಗಿ ಚಾಪೆ ಮೇಲೆ ಮಲಗುತ್ತಿದ್ದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿತ್ತು.

ವೈದ್ಯರ ತಪಾಸಣೆ ಮಾಡಿದ ಬಳಿಕ ಬಳ್ಳಾರಿಯಲ್ಲಿ ಎಕ್ಸ್‌ರೇ, ಸ್ಕ್ಯಾನಿಂಗ್ ಮಾಡಿಸುವಂತೆ ಕೇಳಿದ್ದರು ಅದಕ್ಕೆ ದರ್ಶನ್ ಒಪ್ಪಿರಲಿಲ್ಲ, ತಾನು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದು ಹೇಳಿದ್ದರು. ಇದರಿಂದ ದರ್ಶನ್‌ಗೆ ನೋವು ನಿವಾರಕ ಮಾತ್ರೆಗಳನ್ನು ನೀಡಲಾಗಿತ್ತು. ನೋವು ಹೆಚ್ಚಾದ ಬೆನ್ನಲ್ಲೇ ನ್ಯೂರೋಸರ್ಜನ್‌ ಕೂಡ ದರ್ಶನ್‌ರ ಆರೋಗ್ಯ ಸ್ಥಿತಿಯನ್ನು ತಪಾಸಣೆ ಮಾಡಿ ವರದಿ ನೀಡಿದ್ದರು.

ವೈದ್ಯರ ವರದಿಯಲ್ಲಿ ದರ್ಶನ್‌ಗೆ ಮೆಡಿಕಲ್ ಬೆಡ್ ಮತ್ತು ದಿಂಬು ಕೊಡಬೇಕು ಎಂದು ಸೂಚನೆ ಕೊಟ್ಟಿದ್ದರು. ವೈದ್ಯರ ಸೂಚನೆ ಬಳಿಕ ಜೈಲಾಧಿಕಾರಿಗಳು ದರ್ಶನ್‌ಗೆ ಹಾಸಿಗೆ ಮತ್ತು ದಿಂಬನ್ನು ನೀಡಿದ್ದಾರೆ.

ಸಿಟಿ ಸಿವಿಲ್ ಮತ್ತು ಸೆಷನ್ಸ್‌ ಕೋರ್ಟ್‌ನಲ್ಲಿ ನಟ ದರ್ಶನ್ ಅರ್ಜಿ ವಜಾಗೊಂಡ ಬೆನ್ನಲ್ಲೇ ದರ್ಶನ್‌ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಕ್ಟೋಬರ್ 22ರಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೈಕೋರ್ಟ್‌ನಲ್ಲಾದರೂ ದರ್ಶನ್‌ಗೆ ಜಾಮೀನು ಸಿಗಲಿ ಎಂದು ಅಭಿಮಾನಿಗಳು, ಕುಟುಂಬದವರು ಪ್ರಾರ್ಥನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+