ಬಳ್ಳಾರಿ ಹಲ್ಲೆ ಪ್ರಕರಣ: ಫಕೀರಪ್ಪ ಕುಟುಂಬಕ್ಕೆ ಜಾಮೀನು

ಬಳ್ಳಾರಿ, ಡಿ.21: ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಅವರ ಪತ್ನಿ, ಮೂವರು ಪುತ್ರಿಯರಿಗೆ ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತಾತ್ಕಾಲಿಕ ಮಧ್ಯಂತರ ಜಾಮೀನು ನೀಡಿದೆ.

ಇದೀಗ (ಸಮಯ.6.10) ಬಂದ ಸುದ್ದಿ : ಸಣ್ಣಫಕೀರಪ್ಪ ಅವರ ಪುತ್ರ ಮುತ್ತು ಸೇರಿದಂತೆ 6 ಜನರಿಗೆ ಜಾಮೀನು ಮಂಜೂರಾಗಿದೆ.ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಲ್ ಬಜಾರ್ ಪೊಲೀಸರು ಮತ್ತೆ ಮೂವರನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಒಟ್ಟಾರೆ 26 ಜನರ ಮೇಲೆ ಕೇಸು ದಾಖಲಿಸಲಾಗಿದೆ.

ಶ್ರೀಲಕ್ಷ್ಮಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸರು ಸಣ್ಣಫಕ್ಕೀರಪ್ಪ ಅವರ ಪತ್ನಿ ರುದ್ರಮ್ಮ, ಪುತ್ರಿಯರಾದ ಉಮಾ, ದೀಪಾ ಮತ್ತು ಪದ್ಮಾವತಿ ಮೇಲೆ ದೂರು ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು.

Assault case : BJP Raichur MP Sanna Fakirappa's kins gets bail

ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಜಿಲ್ಲಾ ಪ್ರಧಾನ ನ್ಯಾಯಾಧೀಶ ವಿಶ್ವೇಶ್ವರ ಭಟ್, 4 ಜನರಿಗೆ ತಾತ್ಕಾಲಿಕ ಮಧ್ಯಂತರ ಜಾಮೀನು ನೀಡಿದ್ದಾರೆ. ಇನ್ನು ಬಂಧಿತರಾಗಿರುವ ಸಣ್ಣಫಕ್ಕೀರಪ್ಪ ಪುತ್ರ ಮುತ್ತು, ಇತರ 5 ಜನರ ಜಾಮೀನು ಡಿ.21ರಂದು ಅರ್ಜಿ ವಿಚಾರಣೆಗೆ ಬರಲಿದೆ.

'ಸಂಸದ ಸಣ್ಣಫಕ್ಕೀರಪ್ಪ ಅವರ ಪುತ್ರ ಮುತ್ತು ಹಾಗೂ ಆತನ ಗೆಳೆಯರು ಕಾಲೇಜ್‌ಗೆ ಬಂದು ನನ್ನ ಎತ್ತಿಕೊಂಡು ಹೋಗಿ ಹಲ್ಲೆ ನಡೆಸಿದ್ದರು. ನಾವು ಹೇಳಿದಂತೆ ಮಾಡುವಂತೆ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಕೆ ಹಾಕಿದ್ದರು. ನಂತರ ನಾನು ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನಗೆ ಮರಳಿದ್ದೆ. ಪುನಃ ನನ್ನನ್ನು ಬೆದರಿಸಿ ಆ ಯುವತಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅಂತ ಹೇಳುವಂತೆ ಒತ್ತಡ ಹಾಕಿದ್ದರು. ಜೀವ ಭಯದಿಂದ ಯುವತಿ ವಿರುದ್ಧ ವೇಶ್ಯಾವಾಟಿಕೆ ಆರೋಪ ಮಾಡಿದ್ದೆ ಎಂದು ಹಲ್ಲೆಗೊಳಗಾಗಿದ್ದ ಯುವಕ ಎಂ.ಅತಹಾರ್ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಸಂಸದನ ಪುತ್ರ ಸೇರಿ 6 ಮಂದಿ ಬಂಧನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+