ಜಿಂದಾಲ್‌ಗೆ ಭೂಮಿ: ಕೈ ಶಾಸಕ ಆನಂದ್ ಸಿಂಗ್ ಪ್ರತಿಭಟನೆಯ ಎಚ್ಚರಿಕೆ
ಬಳ್ಳಾರಿ, ಜೂನ್ 20: ಜಿಂದಾಲ್ ಸಂಸ್ಥೆಗೆ ಭೂಮಿಯನ್ನು ಶುದ್ಧಕ್ರಯ ಮಾಡಿಕೊಡುವ ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಗುಡುಗಿದ್ದಾರೆ.
ಜಿಂದಾಲ್‌ಗೆ ಭೂಮಿಯನ್ನು ಮಾರುವ ನಿರ್ಧಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ಯಾವುದೇ ಕಾರಣಕ್ಕೂ ಭೂಮಿ ನೀಡಬಾರದು, ಲೀಸ್ ಕರಾರನ್ನು ಹಾಗೆಯೇ ಮುಂದುವರೆಸಬೇಕು ಎಂದು ಅವರು ಹೇಳಿದರು.
ಹಾಗೊಂದು ವೇಳೆ ಸರ್ಕಾರವು ಜಿಂದಾಲ್‌ಗೆ ಭೂಮಿ ಮಾರಿದ್ದೇ ಆದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು, ಬಳ್ಳಾರಿಯಿಂದ ಪಾದಯಾತ್ರೆ ಮಾಡಲಾಗುವುದು ಎಂದು ಆನಂದ್ ಸಿಂಗ್ ಎಚ್ಚರಿಕೆ ನೀಡಿದರು.

ಜಿಂದಾಲ್ ವಿಚಾರದಲ್ಲಿ ಜಿಲ್ಲೆಯ ಒಂದತ್ತೂ ಶಾಸಕರು ಪಕ್ಷಾತೀತರಾಗಿ ಒಟ್ಟಾಗಬೇಕು ಎಂದು ಕರೆ ನೀಡಿದ ಆನಂದ್ ಸಿಂಗ್, ಜಿಂದಾಲ್‌ಗೆ ಭೂಮಿ ನೀಡುವ ವಿಚಾರದ ಪರವಾಗಿ ನಿಂತಿರುವ ಸಚಿವ ತುಕಾರಾಂ ಅವರಿಗೆ ಎಚ್ಚರಿಕೆಯನ್ನೂ ನೀಡಿದರು.
ತುಕಾರಾಂ ಅವರು ಕಾನೂನು ಪ್ರಕಾರ ಭೂಮಿ ನೀಡುವುದಾಗಿ ಮಾಧ್ಯಮಗಳಿಗೆ ಹೇಳುತ್ತಿದ್ದಾರೆ. ಆದರೆ ಅವರು ಮಾಡುತ್ತಿರುವ ಈ ತಪ್ಪಿಗೆ ಕ್ಷೇತ್ರದ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿಯು ರಿಪಬ್ಲಿಕ್ ಬಳ್ಳಾರಿ ಆಪ್ ಜಿಂದಾಲ್ ಆಗಿ ಬಿಟ್ಟಿದೆ. ಹಣದಿಂದ ಎಲ್ಲವನ್ನೂ ಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು ಎಂದುಕೊಂಡುಬಿಟ್ಟಿದ್ದಾರೆ ಎಂದು ಆನಂದ್ ಸಿಂಗ್ ವಾಗ್ದಾಳಿ ನಡೆಸಿದರು.












Click it and Unblock the Notifications