ಬಳ್ಳಾರಿ ಬಿಜೆಪಿ ಸಂಸದನ ಪುತ್ರನ ಮೇಲೆ ಪ್ರೇಮ ವಂಚನೆ ಆರೋಪ: ಎಫ್ಐಆರ್ ದಾಖಲು!

ಬಳ್ಳಾರಿ ನವೆಂಬರ್ 17: ಬಳ್ಳಾರಿ ಬಿಜೆಪಿ ಸಂಸದನ ಪುತ್ರನ ಮೇಲೆ ಪ್ರೇಮ ವಂಚನೆ ಆರೋಪ ಕೇಳಿ ಬಂದಿದೆ. ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ಅವರ ಮೇಲೆ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕದ ಬಳಿಕ ಮೋಸ ಮಾಡಿದ ಆರೋಪ ಕೇಳಿ ಬಂದಿದೆ.

ರಂಗನಾಥ್ ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸ್ವತ: ಯುವತಿ ದೂರು ದಾಖಲಿಸಿದ್ದಾಳೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ರಂಗನಾಥ್ ಹೇಳಿರುವುದಾಗಿ ಬೆಂಗಳೂರು ಮೂಲದ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

Allegation of love fraud against BJP MPs son from Ballari: FIR filed

ಯುವತಿ ದೂರಿನನ್ವಯ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಂದೂವರೆ ವರ್ಷದ ಹಿಂದೆ ರಂಗನಾಥ್ ಪಾರ್ಟಿವೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದರಂತೆ. ಬಳಿಕ ಮೈಸೂರಿನ ಹೋಟೆಲ್‌ನಲ್ಲಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಇಬ್ಬರಿಗೂ ನೋಟೀಸ್ ನೀಡಿ ವಿಚಾರಣೆ ಹಾಜರಾಗುವಂತೆ ತಿಳಿಸಿದೆ. ಯುವತಿಗೆ ಸೂಕ್ತ ದಾಖಲಾತಿಗಳೊಂದಿಗೆ ಬರುವಂತೆ ತಿಳಿಸಿದರೆ ಇತ್ತು ರಂಗನಾಥ್ ಅವರಿಗೂ ವಿಚಾರಣೆ ಹಾಜರಾಗುವಂತೆ ಸೂಚಿಲಾಗಿದೆ.

ಮಾತ್ರವಲ್ಲದೆ ವಿಜಯನಗರ ಪೊಲೀಸ್ ಠಾಣೆಯಲ್ಲೂ ರಂಗನಾಥ ಕೂಡ ಯುವತಿ ವಿರುದ್ಧ ದೂರು ದಾಖಲಿಸಿದ್ದಾರೆ.

ಯುವತಿ ದೂರಿನಲ್ಲಿ ಏನಿದೆ?

2022ರಲ್ಲಿ ರಂಗನಾಥ್ ವೈಡಿ ಎಂಬುವವರು ನನ್ನ ಸ್ನೇಹಿತರ ಮೂಲಕ ಪರಿಚಯವಾಗಿದ್ದು, ಆಗಾಗ ನನಗೆ ಫೋನ್ ಮಾಡಿ ಮಾತನಾಡುತ್ತಿದ್ದರು, ಸ್ವಲ್ಪ ದಿನಗಳ ನಂತರ ರಂಗನಾಥರವರು ನನಗೆ ಕರೆ ಮಾಡಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಾನು ಮೈಸೂರಿನ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ಕೈ ತುಂಬ ಸಂಬಳ ಬರುತ್ತಿದೆ, ನೀನು ನನ್ನನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ನಂಬಿಸಿರುತ್ತಾರೆ.

ನಂತರ ರಂಗನಾಥ್‌ರವರು 2023 ಜನವರಿ 23ರಂದು ನನಗೆ ಬೆಂಗಳೂರಿನಲ್ಲಿ ಕೆಲಸವಿದೆ ನಾನು ಬರುತ್ತಿದ್ದೇನೆ ಎಂದು ಹೇಳಿ 2023ರ ಜನವರಿ 24ರಂದು ಬೆಂಗಳೂರಿನ ಕೊಡಿಗೆ ಹಳ್ಳಿಯ ಸ್ವಾತಿ ಹೋಟೆಲ್‌ಗೆ ಬಂದು ನನ್ನನ್ನು ಹೋಟೆಲ್‌ಗೆ ಕರೆಸಿಕೊಂಡು, ನಂತರ ಅಲ್ಲಿಂದ ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋಗಿ, ಅಲ್ಲಿ ಲಲಿತ್ ಮಹಲ್ ಪ್ಯಾಲೇಸ್ ಎಂಬ ಹೋಟೆಲ್‌ಗೆ ಕರೆದುಕೊಂಡು ಹೋಗಿ, ಈಗ ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ, ಇವತ್ತು ಇಲ್ಲಿಯೇ ಇದ್ದು ಬೆಳಿಗ್ಗೆ ನಮ್ಮ ಮನೆಗೆ ಹೋಗೋಣ ಎಮದು ಹೇಳಿ, ರಾತ್ರಿ ನಾನು ರಂಗನಾಥ್ ರವರೊಂದಿಗೆ ಇರುವಾಗ ರಂಗನಾಥ್ ಮದ್ಯ ಸೇವನೆ ಮಾಡಿ, ನಾನು ನಿನ್ನನ್ನು ಮದುವೆಯಾಗುತ್ತೇನೆಂದು ಹೇಲಿ, ನಂಬಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿರುತ್ಥಾರೆ. ಮರುದಿನ ನನ್ನನ್ನು ಬೆಂಗಳೂರಿಗೆ ಕಳಿಸಿಕೊಟ್ಟಿರುತ್ತಾನೆ...

ಆದರೆ ಇತ್ತೀಚೆಗೆ ರಂಗನಾಥ್ ಮೊದಲಿನ ಹಾಗೇ ನನ್ನನ್ನೊಂದಿಗೆ ಮಾತನಾಡದೇ, ನಿರ್ಲಕ್ಷ್ಯ ಮಾಡಿ ಈಗ ಮದುವೆ ಮಾಡಿಕೊಳ್ಳದೇ, ಮೋಸ ಮಾಡಿರುತ್ತಾನೆ. ನಾನು ರಂಗನಾಥ್‌ರವರನ್ನು ಮದುವೆಯಾಗು ಎಂದು ಕೇಳಿದರೆ ಕೊಲೆ ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ರಂಗನಾಥ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+