ಬಳ್ಳಾರಿ ಬಳಿ KSRTC ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ, ಚಾಲಕರಿಬ್ಬರೂ ಸಾವು, 30 ಮಂದಿಗೆ ಗಂಭೀರ ಗಾಯ
ಬಳ್ಳಾರಿ, ಮೇ, 22: ಬಳ್ಳಾರಿ ಜಿಲ್ಲೆಯ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ಈ ವೇಳೆ ಲಾರಿ ಹಾಗೂ ಬಸ್ ಚಾಲಕರು ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬಳ್ಳಾರಿ ಸಮೀಪದ ಸೋಮಸಮುದ್ರ ಗ್ರಾಮದ ಹೊರವಲಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಈ ದೃಶ್ಯವನ್ನು ಕಂಡ ಕಂಡ ಸ್ಥಳೀಯರು ದಿಗ್ಭ್ರಾಂತರಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್ ಮತ್ತು ಲಾರಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಈ ಭೀಕರ ಅಪಘಾತದಲ್ಲಿ ಸರ್ಕಾರಿ ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮನವಿ
ರಕ್ತದಾನ ಮಹಾದಾನ ಎಂಬುವಂತ ಮಹತ್ವದ ಮಾತು. ಆದರೆ ಈಗ ಅದೆಷ್ಟೋ ರಕ್ತದಾನದ ಶಿಬಿರಗಳು ಮರೆಯಾಗುತ್ತಿದ್ದು, ರೋಗಿಗಳಿಗೆ ಸಮರ್ಪಕವಾಗಿ ರಕ್ತ ಸಿಗದೇ ಇರುವ ಹಿನ್ನೆಲೆಯಲ್ಲಿ ರಕ್ತದ ಅಭಾವ ಹೆಚ್ಚಿದೆ. ಹಾಗೆಯೆ ವಿಧಾನಸಭಾ ಚುನಾವಣೆ ಹಿನ್ನೆಲೆ ರಕ್ತ ದಾನ ಶಿಬಿರಗಳು ನಡೆದಯದ ಕಾರಣ ಜಿಲ್ಲೆಯಲ್ಲಿ ರಕ್ತದ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ರೋಗಿಗಳು ಪರದಾಡುವಂತಾಗಿದೆ.
ಇನ್ನೂ ಜಿಲ್ಲೆಯಲ್ಲಿ ರೋಗಿಯ ಸಿಬ್ಬಂದಿಗಳು ರಕ್ತ ಹುಡಕಾಟದಲ್ಲಿ ಅಲೆದಾಡಿ ಹೈರಾಣಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಒಟ್ಟು 12 ರಕ್ತ ನಿಧಿ ಕೇಂದ್ರಗಳಿವೆ. ಇದೀಗ ರಕ್ತ ನೀಡುವ ದಾನಿಗಳು ಮುಂದೆ ಬಾರದ ಕಾರಣ ಎಲ್ಲಾ ಕಡೆಯೂ ಸಹ ರಕ್ತ ಸಿಗುತ್ತಿಲ್ಲ. ರಕ್ತ ಬೇಡಿ ಬಂದವರಿಗೆ ಇಲ್ಲ ಎಂದು ಉತ್ತರಿಸಲಾಗದೆ ರಕ್ತ ನಿಧಿ ಕೇಂದ್ರಗಳ ಸಿಬ್ಬಂದಿ ಪೇಚಿಗೆ ಸಿಲುಕುತ್ತಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲ ರಕ್ತ ನಿಧಿ ಕೇಂದ್ರಗಳು ನಿರಂತರವಾಗಿ ರಕ್ತದಾನ ಶಿಬಿರ ನಡೆಸುತ್ತಿದ್ದರು. ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳು, ಜನಪ್ರತಿನಿಗಳು, ಗಣ್ಯರು ಸಹ ಹಾಗೂ ಸಂಘಟನೆಗಳು ಸಹ ರಕ್ತದಾನ ಶಿಬಿರ ಆಯೋಜಸುತ್ತಿದ್ದರು. ಚುನಾವಣೆ ಕಾರಣ ಸ್ಥಗಿತವಾಗಿದ್ದು, ರಕ್ತ ಸಿಗದೆ ರೋಗಿಗಳು ಸಿಬ್ಬಂದಿ ಬೇರೆ ಬೇರೆ ಜಿಲ್ಲೆಗೆ ಮೊರೆ ಹೋಗುವಂತಾಗಿದೆ.
ಕಿಮ್ಸ್ ಆಸ್ಪತ್ರೆ ಸೇರಿದಂತೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಸಹ 12 ರಕ್ತನಿಧಿ ಕೇಂದ್ರಗಳಿಗೆ ಅವಲಂಬಿತವಾಗಿವೆ. ಕಿಮ್ಸ್ ಆಸ್ಪತ್ರೆಗೆ ಉತ್ತರ ಕರ್ನಾಟಕ ಭಾಗದ 7-8 ಜಿಲ್ಲೆಗಳ ಜನರು ಚಿಕಿತ್ಸೆಗೆ ಆಗಮಿಸುತ್ತಾರೆ.
ತಲಸ್ಸೇಮಿಯಾ, ಡಯಾಲಿಸಿಸ್, ಹೆರಿಗೆ, ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದೆ. ಈ ಉದ್ದೇಶಕ್ಕೆ ರಕ್ತ ಶೇಖರಣೆ ಮತ್ತು ಸ್ವಯಂ ಪ್ರೇರಿತ ರಕ್ತ ದಾನ ಶಿಬಿರಗಳನ್ನು ಈ ಕೇಂದ್ರಗಳು ಆಯೋಜಿಸುತ್ತವೆ. ಆದರೆ, ಈ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಅವರಿಗೆಲ್ಲರಿಗೂ ರಕ್ತ ಪೂರೈಸುವುದು ಕಷ್ಟವಾಗಿದೆ. ಇನ್ನು ಕಿಮ್ಸ್‌ನ ರಕ್ತನಿಧಿ ಭಂಡಾರವು ಜಿಲ್ಲೆಯ ಪ್ರಮುಖ ರಕ್ತನಿಧಿ ಸಂಗ್ರಹ ಕೇಂದ್ರಗಳಲ್ಲಿ ಒಂದಾಗಿದೆ.
ಈ ಕೇಂದ್ರದಿಂದ ನಿತ್ಯ ಐದರಿಂದ ಆರು ಜನ ತಲಸ್ಸೇಮಿಯಾ ಪೀಡಿತ ಮಕ್ಕಳಿಗೆ ಹಾಗೂ 12ರಿಂದ 20 ಜನ ಗರ್ಭಿಣಿಯರಿಗೆ (ಹೆರಿಗೆ ಸಂದರ್ಭದಲ್ಲಿ) ರಕ್ತದ ಅವಶ್ಯಕತೆ ಇದೆ ಎಂದು ಕಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ. ಆದರೇ ದುಡ್ಡು ಕೊಟ್ಟರು ರಕ್ತ ಸಿಗುತ್ತಿಲ್ಲ. ಹಣ ಕೊಟ್ಟರು ಸಹ ತುರ್ತು ರೋಗಿಗಳಿಗೆ ಅವಶ್ಯಕವಾದ ರಕ್ತ ಸಿಗುತ್ತಿಲ್ಲ.
ಅದರಲ್ಲಿಯೂ ಹೊಲಿಕೆಯಾಗುವ ರಕ್ತ ಸಿಗುವುದು ಇನ್ನೂ ಅಪರೂಪ ಆಗಿದೆ. ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತದಾನಿ ಕರೆಯ್ದೊದು ರಕ್ತ ಕೊಡುವುದರ ಜೊತೆ ಹಣ ನೀಡಿ ರಕ್ತ ಪಡೆಯುವ ಪರಿಸ್ಥಿತಿ ಎದುರಾಗಿದೆ. ಒಂದು ಯುನಿಟ್ ರಕ್ತ ರಕ್ತ ದಾನಕ್ಕೆ 1,000-1,500 ರೂಪಾಯಿ ನೀಡಬೇಕಿದೆ. ಇನ್ನು ರೋಗಿಗಳಿಗೆ ರಕ್ತ ಬೇಕಾದರೆ ಕೆಲವು ಕಡೆ ಒಂದು ದಿನ ಮುಂಚಿತವಾಗಿ ಹೇಳಿ ಬುಕ್ ಮಾಡುವುದು ಅನಿರ್ವಾವಾಗಿಬಿಟ್ಟಿದೆ.












Click it and Unblock the Notifications