ಬಳ್ಳಾರಿ: ಭೀಕರ ರಸ್ತೆ ಅಪಘಾತ ಐವರು ಸ್ಥಳದಲ್ಲೇ ಸಾವು
ಬಳ್ಳಾರಿ, ಜೂನ್ 15: ಜಿಲ್ಲೆಯ ಕೂಳೂರು ಕ್ರಾಸ್ ಬಳಿ ಇಂದು ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಿರಗುಪ್ಪದಿಂದ ಬಳ್ಳಾರಿ ಕಡೆಗೆ ಬರುತ್ತಿದ್ದ ಕಾರು ಮತ್ತು ಬಳ್ಳಾರಿಯಿಂದ ಸಿರಗುಪ್ಪ ಕಡೆಗೆ ಹೋಗುತ್ತಿದ್ದ ಈಶಾನ್ಯ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.
KA 19 P 6852 ಸಂಖ್ಯೆಯ ಇಂಡಿಕಾ ಕಾರಿನಲ್ಲಿದ್ದ 7 ವರ್ಷದ ಬಾಲಕ, ಇಬ್ಬರು ಯುವಕರು, ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಒಬ್ಬರನ್ನು ಬಳ್ಳಾರಿಯ ದಾದಾ ಖಲಂದರ್ ಎಂದು ಗುರುತಿಸಲಾಗಿದ್ದು ಇನ್ನುಳಿದವರ ಗುರುತು ಪತ್ತೆಯಾಗಿಲ್ಲ, ಕುರುಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಸ್‌ಪಿ ಅರುಣ್ ರಂಗರಾಜನ್ ಅವರು ಭೇಟಿ ನೀಡಿದ್ದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !