ಹೊಸಪೇಟೆಯಲ್ಲಿ ಆಪ್ ಅಭ್ಯರ್ಥಿ ಬಿರುಸಿನ ಪ್ರಚಾರ
ಬಳ್ಳಾರಿ,
ಮಾ. 29 : ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಪೈಪೋಟಿ ನೀಡುವಂತೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶಿವಕುಮಾರ್ ಮಾಳಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಹೊಸಪೇಟೆಯಲ್ಲಿ ಪಾದಯಾತ್ರೆ ಮೂಲಕ ಅವರು ಮತಯಾಚನೆ ಮಾಡಿದರು. id="toptextpromo"> id='are-slot-1' class='oiad oi-axt oiadv'>ಶನಿವಾರ
ಶಿವಕುಮಾರ್ ಮಾಳಗಿ ಭೀಮ್ ವೃತ್ತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರದಲ್ಲಿನ ಪಾದಯಾತ್ರೆಯನ್ನು ಆರಂಭಿಸಿದರು. ಬಳ್ಳಾರಿ ರಸ್ತೆಯ ಗಾಂಧಿ ವೃತ್ತದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರದಲ್ಲಿ ಪಾದಯಾತ್ರೆ ನಡೆಸಿದರು. ಚಿತ್ರಗಳಲ್ಲಿ ಆಮ್ ಆದ್ಮಿ ಪಾದಯಾತ್ರೆ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ] id='are-slot-2' class='oiad oi-axt oiadv'>
ಆಪ್ ಅಭ್ಯರ್ಥಿಯ ಬಿರುಸಿನ ಪ್ರಚಾರ
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶಿವಕುಮಾರ್ ಮಾಳಗಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಂತೆ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಹೋಸಪೇಟೆಯಲ್ಲಿ ಮತಬೇಟೆ
ಶನಿವಾರ ಶಿವಕುಮಾರ್ ಮಾಳಗಿ ಹೊಸಪೇಟೆ ತಾಲೂಕಿನಲ್ಲಿ ಪಾದಯಾತ್ರೆ ನಡೆಸುವ ಮೂಲಕ ಮತ ಯಾಚನೆ ಮಾಡಿದರು.

ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ
ಹೊಸಪೇಟೆಯಲ್ಲಿ ಪ್ರಚಾರ ಆರಂಭಿಸಿದ ಶಿವಕುಮಾರ್ ಮಾಳಗಿ ಭೀಮ್ ವೃತ್ತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ತಮ್ಮ ಪ್ರಚಾರ ಆರಂಭಿಸಿದರು.

ನಗರದಲ್ಲಿ ಪಾದಯಾತ್ರೆ
ಭೀಮ್ ವೃತ್ತದಿಂದ ಪಾದಯಾತ್ರೆ ಆರಂಭಿಸಿದ ಶಿವಕುಮಾರ್ ಬಳ್ಳಾರಿ ರಸ್ತೆಯ ಗಾಂಧೀ ವೃತ್ತದ ಮೂಲಕ ಹೊಸಪೇಟೆಯ ಪ್ರಧಾನ ರಸ್ತೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.

ಭ್ರಷ್ಟಚಾರವೇ ಪ್ರಚಾರದ ಅಸ್ತ್ರ
ಬಿಎಸ್ಆರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿರುವ ಬಿ.ಶ್ರೀರಾಮುಲು ಅವರು ಪ್ರಾಕೃತಿಕ ಸಂಪನ್ಮೂಲಗಳನ್ನು ಲೂಟಿ ಹೊಡೆದು ಸರ್ಕಾರಕ್ಕೆ ಅನ್ಯಾಯ ಮಾಡಿದ್ದಾರೆ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಶಿವಕುಮಾರ್ ಪ್ರಚಾರ ನಡೆಸುತ್ತಿದ್ದಾರೆ.












Click it and Unblock the Notifications