• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾದಾಮಿ ಸ್ನೇಹಿತರಿಂದ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ: 4 ಗಂಟೆ ಚಾರ್ಜ್‌ಗೆ 90 ಕಿ.ಮೀ ಪ್ರಯಾಣ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್‌ 17: ಸಾಧಿಸೋಕೆ ಏನೂ ಅಡ್ಡಿ ಅಲ್ಲ, ಸಾಧಿಸಬೇಕು ಎನ್ನುವುದು ಮನಸ್ಸಲ್ಲಿದ್ರೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಈ ಇಬ್ಬರು ಸ್ನೇಹಿತರು ಮಾಡಿ ತೋರಿಸಿದ್ದಾರೆ. ಬಾದಾಮಿಯ ಮಂಜುನಾಥ ಜಲಗೇರಿ ಹಾಗೂ ಮಹಮ್ಮದ್ ಇಕ್ಬಾಲ್ ಎಂಬ ಇಬ್ಬರು ಸ್ನೇಹಿತರು ಬ್ಯಾಟರಿ ಚಾಲಿತ ಬೈಕ್ ಒಂದನ್ನು ಆವಿಷ್ಕರಿಸಿದ್ದಾರೆ.

ಈಗೆಲ್ಲ ಪೆಟ್ರೋಲ್‌ ರೇಟ್ ದಿನದಿಂದ ದಿನಕ್ಕೆ ಏರುತ್ತಿದೆ. ಸದ್ಯ ಪೆಟ್ರೋಲ್ ಬೆಲೆ ಲೀಟರ್‌ 100 ರೂ ದಾಟಿದೆ. ಹೀಗಾಗಿ ಬೈಕ್ ಸೇರಿದಂತೆ ವಾಹನ ಸವಾರರಿಗೆ ತಮ್ಮ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಿಸೋದೆ ಒಂದು ಸರ್ಕಸ್ ಆಗಿ ಬಿಟ್ಟಿದೆ. ಆದರೆ, ಬಾದಾಮಿಯ ಮಂಜುನಾಥ ಜಲಗೇರಿ ಹಾಗೂ ಮಹಮ್ಮದ್ ಇಕ್ಬಾಲ್ ಎನ್ನುವವರು ಪೆಟ್ರೋಲ್ ರೇಟ್‌ನಿಂದ ಬೇಸತ್ತು ತಮ್ಮದೇ ಆದ ಒಂದು ಬೈಕ್ ಅನ್ನು ತಯಾರಿಸಿಕೊಂಡಿದ್ದಾರೆ. ಇದಕ್ಕೆ ಪೆಟ್ರೋಲ್ ಬೇಡ, ಯಾವುದೇ ಇಂಧನವೂ ಬೇಕಾಗಿಲ್ಲ. ಇದಕ್ಕೆ ನೀವು ಮೂರು ಗಂಟೆ ಚಾರ್ಜ್ ಮಾಡಿದರೆ ಸಾಕು ಸರಾಸರಿ 90 ಕಿಮೀ ದೂರ ಕ್ರಮಿಸಿಬಹುದು. ಅಂತಹ ಒಂದು ಅದ್ಭುತ ಬೈಕ್ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.

ಬಾಗಲಕೋಟೆ: ಓದಿದ್ದು ಇಂಜಿನಿಯರಿಂಗ್‌, ಕೃಷಿಯಲ್ಲಿಅದ್ಭುತ ಸಾಧನೆಬಾಗಲಕೋಟೆ: ಓದಿದ್ದು ಇಂಜಿನಿಯರಿಂಗ್‌, ಕೃಷಿಯಲ್ಲಿಅದ್ಭುತ ಸಾಧನೆ

ಮೊದಲು ಒಂದೇ ಬೈಕ್ ಸಿದ್ಧಪಡಿಸಿದ್ದ ಇಬ್ಬರೂ ಸ್ನೇಹಿತರು, ಅದನ್ನ ಬಾದಾಮಿ ಸಿಟಿಯಲ್ಲಿ ಹೆಚ್ಚಾಗಿ ಬಳಸಿದ್ದರು. ಇದನ್ನ ನೋಡಿದ ಹಲವರು ಈ ಬೈಕ್ ಮೇಲೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಅಲ್ಲದೆ ಈಗಾಗಲೇ ಇಬ್ಬರು ರೈತರಿಗೆ ಈ ವಿಶೇಷ ಬೈಕ್‌ಗಳನ್ನು ತಯಾರಿ ಮಾಡಿಕೊಟ್ಟಿದೆ. ಬೈಕ್ ಖರೀದಿಸಿದಿರುವ ರೈತರು ಮನೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದಾರಂತೆ.

 ಲಾಕ್‌ಡೌನ್‌ ವೇಳೆ ಬೈಕ್ ತಯಾರಿ

ಲಾಕ್‌ಡೌನ್‌ ವೇಳೆ ಬೈಕ್ ತಯಾರಿ

ಕೊರೊನಾ ಟೈಮ್ ನಲ್ಲಿ ಎಲ್ಲರಿಗೂ ಒಂದಿಲ್ಲೊಂದು ಕಷ್ಟ ಎದುರಾಗಿತ್ತು. ಅದರಂತೆ ಪ್ರಿಟಿಂಗ್ ಪ್ರೆಸ್ ಇಟ್ಟಿದ್ದ ಮಂಜುನಾಥ ಹಾಗೂ ತನ್ನದೆ ಎಲೆಕ್ಟ್ರಾನಿಕ್‌ ಶಾಪ್ ಇಟ್ಟುಕೊಂಡಿದ್ದ ಮಹಮ್ಮದ್ ಇಕ್ಬಾಲ್‌ಗೆ ಲಾಕ್ ಡೌನ್ ವೇಳೆ ಯಾವುದೇ ಉದ್ಯೋಗ ಸಿಕ್ಕಿರಲಿಲ್ಲ. ಅಲ್ಲದೇ ಪೆಟ್ರೋಲ್ ರೇಟ್ ಕೂಡಾ ಅದೇ ಟೈಮ್‌ನಲ್ಲಿ ಭಾರೀ ಏರಿಕೆ ಆಗಿತ್ತು. ಹೀಗಾಗಿ ವಈ ಇಬ್ಬರೂ ಸ್ನೇಹಿತರು ಎಲೆಕ್ಟ್ರಿಕ್ ಬೈಕ್ ತಯಾರಿಸಿದ್ದಾರೆ. ಅದು ಯಶಸ್ವಿಯಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

ಬಾಗಲಕೋಟೆ: ಕೃಷಿಯಲ್ಲಿ ಕುಬೇರನಾದ ರೈತ ಮಲ್ಲಪ್ಪ ಮೇಟಿ!ಬಾಗಲಕೋಟೆ: ಕೃಷಿಯಲ್ಲಿ ಕುಬೇರನಾದ ರೈತ ಮಲ್ಲಪ್ಪ ಮೇಟಿ!

 4 ಗಂಟೆ ಚಾರ್ಜ್‌ಗೆ 90 ಕಿಮೀ ಪ್ರಯಾಣ

4 ಗಂಟೆ ಚಾರ್ಜ್‌ಗೆ 90 ಕಿಮೀ ಪ್ರಯಾಣ

ಇಕ್ಬಾಲ್ ಹಾಗೂ ಮಂಜುನಾಥ ಎಂಬುವರು ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ. ಹೀಗೆ ವಿಶೇಷವಾಗಿ ತಯಾರಾಗಿರುವ ಬೈಕ್ ಗೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ. ಈ ಬೈಕ್ ಗೆ ಕೇವಲ ಬ್ಯಾಟರಿ ಅಷ್ಟೇ ಸಾಕು. ಅದು 4 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸಾಕು 90 ಕಿ.ಮೀ ವರೆಗೆ ಸಂಚಾರ ಮಾಡುತ್ತದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ 90 ಕಿ.ಮೀ ಸಂಚರಿಸಬಹುದಾಗಿದೆ. ಇದು ಇಂತಹ ದುಬಾರಿ ಪೆಟ್ರೋಲ್, ಡಿಸೇಲ್ ಬೆಲೆಯ ಕಾಲದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.

 ಒಟ್ಟು 3 ಬೈಕ್‌ ತಯಾರಿ

ಒಟ್ಟು 3 ಬೈಕ್‌ ತಯಾರಿ

ಮಂಜುನಾಥ ಹಾಗೂ ಇಕ್ಬಾಲ್ ಅವರು ಸುಮಾರು 3-4 ತಿಂಗಳ ಕಾಲ ಸಮಯ ತೆಗೆದುಕೊಂಡು ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ.‌ ಈ ಬೈಕ್ ಗೆ ಲಿಥಿಯಮ್‌ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದೇ ಬ್ಯಾಟರಿಗಳ‌ ಮೂಲಕ ಬೈಕ್ ಸಂಚಾರ ಮಾಡುತ್ತದೆ. ಈ ಬೈಕ್ ಕೇವಲ ಸಿಟಿಯಲ್ಲಿ ಓಡಾಡುವುದಕ್ಕೆ ಬಳಸಬಹುದಾಗಿದೆ. ಅಂಗಡಿ, ಮನೆ, ಮಾರುಕಟ್ಟೆ ಸೇರಿ ಸ್ಥಳೀಯ ಓಡಾಟಕ್ಕೆ ಹೆಚ್ಚು ಅನುಕೂಲಕರವಾಗಿದೆ. ಒಟ್ಟು 40-50 ಸಾವಿರ ರೂಪಾಯಿ ಖರ್ಚಿನಲ್ಲಿ ಈ ಬೈಕ್ ರೂಪಗೊಂಡಿದೆ. ಈ ಬೈಕ್ ಪರಿಸರ ಸ್ನೇಹಿಯಾಗಿದೆ. ವೇಗಮಿತಿ 30 ಕಿ.ಮೀ ಇರುವುದರಿಂದ ಬೈಕ್ ಗೆ ಯಾವುದೇ ನೋಂದಣಿ ಅಥವಾ ಪರವಾನಗಿ ಅವಶ್ಯಕತೆಯಿಲ್ಲ ಎನ್ನುತ್ತಾರೆ ತಯಾರಕರು. ಈ ಸ್ನೇಹಿತರಿಂದ ಒಟ್ಟು 3 ಬೈಕ್ ತಯಾರಾಗಿದೆ.

 ವಯೋವೃದ್ಧರಿಗೆ ಲೈಟ್‌ ವೇಟ್ ಬೈಕ್

ವಯೋವೃದ್ಧರಿಗೆ ಲೈಟ್‌ ವೇಟ್ ಬೈಕ್

ಇದೇ ಜೋಡಿ ವಯೋವೃದ್ಧರಿಗಾಗಿ ಮತ್ತೊಂದು ವಿಶೇಷ ಬೈಕ್ ತಯಾರು ಮಾಡಿದ್ದಾರೆ. ವಯೋವೃದ್ಧರಿಗೆ ಅನುಕೂಲವಾಗಲೆಂದು ಲೈಟ್ ವೇಟ್ ಬೈಕ್ ಸಹ ಹೊರ ತಂದಿದ್ದಾರೆ. ಲಿಥಿಯಂ ಬ್ಯಾಟರಿ ಆಳವಡಿಸಿರುವ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು 75ನೇ ಸ್ವಾತಂತ್ರ್ಯೋತ್ಸವದ ವೇಳೆ ಲಾಂಚ್‌ ಮಾಡಿದ್ದಾರೆ. 2 ಗಂಟೆ ಚಾರ್ಜ್ ಮಾಡಿದರೆ 30-40 km ದೂರ ಹೋಗುತ್ತದೆ. ಲಾಂಚ್ ಮಾಡಿದ ದಿನವೇ ಎರಡು ಗಾಡಿ ಆರ್ಡರ್ ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಖಾಲಿ ಕುಳಿತ ಇಬ್ಬರೂ ಸ್ನೇಹಿತರು ಸೇರಿ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಎಲೆಕ್ಟ್ರಿಕ್ ಬೈಕ್ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗ್ತಿದೆ.

English summary
Two Friends the name of Manjunath jalageri and Muhammad iqbal invented an electric bike in Badami, Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X