ನಾಗನೂರು ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಾಳೆ ಸಿದ್ದು ನ್ಯಾಮಗೌಡ ಅಂತ್ಯಕ್ರಿಯೆ
ಜಮಖಂಡಿ, ಮೇ 28 : ರೈತರಿಗಾಗಿ ಬ್ಯಾರೇಜ್ ಕಟ್ಟಿ ದೇಶದಲ್ಲಿಯೇ ಗಮನ ಸೆಳೆದಿದ್ದ, 'ಬ್ಯಾರೇಜ್ ಹಿರೋ' ಎಂದು ಈ ಭಾಗದಲ್ಲಿ ಖ್ಯಾತಿಯಾಗಿದ್ದ ಜಮಖಂಡಿ ಮತಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡರು ಇಂದು ಬೆಳಗಿನ ಜಾವ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು.
ಸಿದ್ದು ನ್ಯಾಮಗೌಡರಿಗೆ ಆನಂದ ನ್ಯಾಮಗೌಡ, ಬಸವರಾಜ ನ್ಯಾಮಗೌಡ ಎಂಬ ಇಬ್ಬರು ಪುತ್ರರು. ಶ್ವೇತಾ , ಸುಜಾತಾ, ಶೋಭಾ ಎಂಬ ಮೂವರು ಪುತ್ರಿಯರು ಇದ್ದಾರೆ. ಓರ್ವ ಪುತ್ರಿ ಸಿಂಗಾಪುರದಲ್ಲಿದ್ದಾರೆ. ಇನ್ನಿಬ್ಬರು ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಇದೀಗ ವಿದೇಶದಿಂದ ಪುತ್ರಿಯರು, ಅಳಿಯಂದಿರು ಜಮಖಂಡಿಗೆ ಆಗಮಿಸುತ್ತಿದ್ದಾರೆ.
ಕಾರು ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಸಿದ್ದು ನ್ಯಾಮಗೌಡ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಶಾಸಕರ ಕುಟುಂಬಸ್ಥರು, ಸಮಾಜದ ಮುಖಂಡರು ತಿಳಿಸಿದ್ದಾರೆ.

ಸಿದ್ದು ನ್ಯಾಮಗೌಡ ಒಡೆತನದ ಜಮಖಂಡಿ ತಾಲೂಕಿನ ನಾಗನೂರು ಗ್ರಾಮದಲ್ಲಿರುವ ಶುಗರ್ಸ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ನಾಳೆ ಬೆಳಗ್ಗೆ 9 ಗಂಟೆವರೆಗೂ ತಾಲೂಕು ಕ್ರೀಡಾಂಗಣದಲ್ಲಿ ಸಿದ್ದು ನ್ಯಾಮಗೌಡ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ನಂತರ ವೀರಶೈವ ಲಿಂಗಾಯತ ಪದ್ಧತಿಯಂತೆ ಅಂತ್ಯಕ್ರಿಯೆ ನಡೆಯುವುದು.












Click it and Unblock the Notifications