ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪ್ತನನ್ನು ಮನೆಗೆ ಬಿಡಲು ಹೋಗಿ ಸಾವಿನ ಮನೆ ಸೇರಿದರೆ ಸಿದ್ದು ನ್ಯಾಮಗೌಡ?

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

Recommended Video

ಸಿದ್ದು ನ್ಯಾಮಗೌಡ ಹೀಗೆ ಮಾಡದೇ ಇರ್ತಿದ್ರೆ ಇವತ್ತು ಬದುಕಿರುತ್ತಿದ್ರು | Oneindia Kannada

ಬಾಗಲಕೋಟೆ, ಮೇ. 28 : ರೈತರಿಗಾಗಿ ಬ್ಯಾರೇಜ್ ಕಟ್ಟಿ ದೇಶದ ಗಮನ ಸೆಳೆದಿದ್ದ, ಈ ಭಾಗದಲ್ಲಿ ಬ್ಯಾರೇಜ್ ಹಿರೋ ಎಂದೇ ಖ್ಯಾತಿಯಾಗಿದ್ದ ಜಮಖಂಡಿ‌ ಮತಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡರು ಇಂದು ಬೆಳಗಿನ ಜಾವ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು.

ಆದರೆ ಅವರು ಸಾವನ್ನಪ್ಪಿದ ರೀತಿ ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ, ಅಷ್ಟೇ ಏಕೆ ಇಡೀ ಜಮಖಂಡಿ ಕ್ಷೇತ್ರದ ಮತದಾರರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಮರಣರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಮರಣ

ಬಹುಶಃ ಅವರು ತಮ್ಮ ಆಪ್ತ ಡಾ.ಅಬ್ದುಲ್‌ ರಶೀದ್ ಸಾಲಾರ (73) ಅವರನ್ನು ಬಾಗಲಕೋಟೆಗೆ ಬಿಡದೆ, ನೇರವಾಗಿ ಜಮಖಂಡಿಗೆ ಹೋಗಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಅನಿಸುತ್ತದೆ.

Siddu B Nyamagouda did not die if they did not go to Bagalkot.

ನೋಡಿ, ವಿಧಿ ಬರಹ ಅನ್ನುವುದು ಇದಕ್ಕೇ ಇರಬೇಕು. ಸಿದ್ದು ನ್ಯಾಮಗೌಡ ಅವರಿಗೆ ಬಹಳ ಆಪ್ತರಾಗಿರುವ ಬಾಗಲಕೋಟೆ ನಿವಾಸಿ ಸಾಲಾರ ಅವರನ್ನು ಬಾಗಲಕೋಟೆಗೆ ಬಿಟ್ಟು ನಂತರ ಜಮಖಂಡಿಗೆ ಹೋಗುವುದಾಗಿ ಮೊದಲೇ ಯೋಜನೆ ಹಾಕಿಕೊಂಡಿದ್ದ ಅವರಿಗೆ ತಾಲೂಕಿನ ತುಳಸಿಗೇರಿ ಸಮೀಪ ಜವರಾಯ ಕಾದು ಕೂತಿದ್ದ ಎಂಬ ಚಿಕ್ಕ ಸುಳಿವು ಇರಲಿಲ್ಲ.

ಲೋಕಾಪುರ ಮಾರ್ಗವಾಗಿ ಬಾಗಲಕೋಟೆಗೆ ಹೋಗುವ ಪ್ಲಾನ್ ಬದಲಾಗಿದ್ದರೆ ಅವರು ಸಾವಿನ ದವಡೆಯಿಂದ ಪಾರಾಗಿರುತ್ತಿದ್ದರೇನೋ?

ಆದರೆ ಬಾಗಲಕೋಟೆಗೆ ಬರುವ ವೇಳೆ ತುಳಸಿಗೇರಿ ಗ್ರಾಮದ ಬಳಿ ಎದುರಿನಿಂದ ಬರುತ್ತಿದ್ದ ಲಾರಿ ತಪ್ಪಿಸಲು ಹೋಗಿ ಕಾರು ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದು ದೊಡ್ಡ ಅನಾಹುತವೇ ಸಂಭವಿಸಿದೆ.

ರಾಮಕೃಷ್ಣ ಹೆಗಡೆ ಅವರಿಗೇ ಮಣ್ಣು ಮುಕ್ಕಿಸಿದ್ದ ಸಿದ್ದು ನ್ಯಾಮಗೌಡರಾಮಕೃಷ್ಣ ಹೆಗಡೆ ಅವರಿಗೇ ಮಣ್ಣು ಮುಕ್ಕಿಸಿದ್ದ ಸಿದ್ದು ನ್ಯಾಮಗೌಡ

ಅವರ ಆಪ್ತ ಅಬ್ದುಲ್‌ ರಶೀದ್ ಸಾಲಾರ ಅವರು ಈ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೇ ಹೇಳುವ ಪ್ರಕಾರ ಸಿದ್ದು ನ್ಯಾಮಗೌಡ ಅವರು ಬದುಕಿದ್ದರೆ ಸಚಿವ ಸ್ಥಾನ ಸಿಗುತ್ತಿದ್ದದ್ದು ಗ್ಯಾರಂಟಿ.

ಕಾಂಗ್ರೆಸ್ ಹೈಕಮಾಂಡ್ ಗುಲಾಮ್ ನಬಿ ಆಜಾದ್ ಅವರನ್ನು ನ್ಯಾಮಗೌಡ ಮತ್ತು ಆಪ್ತರು ಭೇಟಿ ಮಾಡಿದಾಗ ಸಚಿವ ಸ್ಥಾನದ ಭರವಸೆ ನೀಡಿದ್ದರಂತೆ.

English summary
Former Union Minister and newly-elected Karnataka Congress MLA Siddu B Nyamagouda passed away in a road accident.They did not die if they did not go to Bagalkot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X