ಕೊಡಗಿನ ಸಂತ್ರಸ್ತರಿಗೆ ಕೈಲಾದಷ್ಟು ನೆರವು ನೀಡುತ್ತೇನೆ: ಪುನೀತ್ ರಾಜ್ ಕುಮಾರ್

ಬಾಗಲಕೋಟೆ, ಆಗಸ್ಟ್.20: ಕೊಡಗಿನಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಕುರಿತು ಬೇಸರ ವ್ಯಕ್ತಪಡಿಸಿರುವ ನಟ ಪುನೀತ್ ರಾಜ್ ಕುಮಾರ್ "ನನ್ನ ಕೈಲಾದಷ್ಟು ನೆರವು ನೀಡುತ್ತೇನೆ" ಎಂದು ತಿಳಿಸಿದ್ದಾರೆ.

ಬಾಗಲಕೋಟೆಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಇಂದು ಸೋಮವಾರ ಜರುಗಿದ ಕನ್ನಡ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ಎಲ್ಲರೂ ಅವರವರ ಶಕ್ತಾನುಸಾರ ಸಹಾಯ ಮಾಡಿದಾಗ ಕೊಡಗಿನ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.

ಪುನೀತ್ ರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳಿಗೆ ಶುಭ ಹಾರೈಸಿದರು. ಅಪೇಕ್ಷಾ ಹಾಗೂ ಪವನ್ ಒಡೆಯರ್ ಕುಟುಂಬದವರು ಸೇರಿದಂತೆ ಆಪ್ತರು ಮಾತ್ರ ಮದುವೆ ಆಗಮಿಸಿದ್ದರು. ಪವನ್ ಒಡೆಯರ್ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರೆ, ಕಾಫಿ ತೋಟದಲ್ಲಿ ನಟಿ ಅಪೇಕ್ಷಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದವಾಗಿರುವ ಪವನ್ ಒಡೆಯರ್ ಬಾಗಲಕೋಟೆಯ ನಟಿ ಅಪೇಕ್ಷಾ ಅವರ ಕೈ ಹಿಡಿದಿದ್ದಾರೆ.

ಹೊಸ ಜೀವನಕ್ಕೆ ಅಡಿಯಿಟ್ಟ ಪವನ್ ಒಡೆಯರ್ ದಂಪತಿಗೆ ಶುಭ ಕೋರಿದ ಪುನೀತ್

Puneet Rajkumar Says I will help Kodagu people

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ನಟ ಪುನೀತ್ ರಾಜಕುಮಾರ್ ನವದಂಪತಿಗಳಿಗೆ ಶುಭ ಹಾರೈಸಿ ಅಕ್ಷತೆ ಹಾಕಿ ಶುಭ ಹಾರೈಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+