ಬಾಗಲಕೋಟೆ : ಪ್ರೀತಿಸಿ ಮದುವೆಯಾದ ಜೋಡಿಗೆ ಪ್ರಾಣ ಭೀತಿ

ಬಾಗಲಕೋಟೆ, ಆಗಸ್ಟ್ 27 : ಆ ಜೋಡಿಗಳು ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದವರನ್ನು ಎದುರುಹಾಕಿಕೊಂಡು ವಿವಾಹವಾಗಿದ್ದು. ಆದರೆ, ಈಗ ದಂಪತಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ನವ ಜೋಡಿಗಳು ಜೀವ ಉಳಿಸಿಕೊಳ್ಳಲು ಊರೂರು ಅಲೆಯುತ್ತಿದ್ದಾರೆ.

ವಿಜಯಪುರ ಮೂಲದ ಮಮತಾ ಬಿದರಿ ಮತ್ತು ಪರುಶರಾಮ ರಾಠೋಡ ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿಗಳು. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಬಾಗಲಕೋಟೆಯ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ಆದರೆ, ಮಮತಾ ಬಿದರಿ ಅವರ ಮನೆಯವರು ಪ್ರಭಾವಿಯಾಗಿದ್ದು, ದಂಪತಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಮನೆಯವರ ವಿರೋಧದ ನಡುವೆ ಮಮತಾ ವಿವಾಹವಾಗಿರುವುದು ಇದಕ್ಕೆ ಕಾರಣವಾಗಿದೆ. ಆದರೆ, ಪರುಶರಾಮ ಅವರ ಕುಟುಂಬದಲ್ಲಿ ವಿವಾಹಕ್ಕೆ ಒಪ್ಪಿಗೆ ಇದೆ.

Newly married Bagalkot couple alleges threat to life

ಮಮತಾ ಅವರ ತಂದೆಗೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ. ನಿಮ್ಮನ್ನು ಹತ್ಯೆ ಮಾಡುತ್ತೇವೆ ಎದು ಮಮತಾ ತಂದೆ ಅವರ ಕಡೆಯಿಂದ ಬೆದರಿಕೆ ಬಂದಿದೆ ಎಂದು ಪರುಶರಾಮ ಅವರು ಆರೋಪಿಸಿದ್ದಾರೆ. ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

'ನಮ್ಮ ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಇದೆ. ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಟ್ಟುಬಿಡಿ. ನಾವು ಚೆನ್ನಾಗಿ ಜೀವನ ಸಾಗಿಸುತ್ತೆವೆ. ನಮಗೆ ತೊಂದರೆ ಕೊಡಬೇಡಿ' ಎಂದು ಪರುಶರಾಮ ಅವರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ ಸುಖ ಜೀವನದ ಕನಸು ಕಂಡಿದ್ದರು. ಆದರೆ, ಈಗ ಜೀವ ಬೆದರಿಕೆ ಬಂದಿದ್ದರಿಂದ ಊರೂರು ತಿರುಗುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಪರಿಚಯಸ್ಥರ ಬಳಿ ಕೇಳುತ್ತಿದ್ದಾರೆ. ನವ ಜೋಡಿಗಳಿಗೆ ಪೊಲೀಸರು ರಕ್ಷಣೆ ನೀಡಲಿದ್ದಾರೆಯೇ?.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+