Muharram: ಅಗ್ನಿಕುಂಡದಲ್ಲಿ ನಮಾಜ್ ಮಾಡಿದ ಹಿಂದೂ ಯುವಕ
ಬಾಗಲಕೋಟೆ ಜುಲೈ 18: ಕಳೆದ ದಿನ ಮುಸ್ಲಿಂ ಹಬ್ಬ ಮೊಹರಂ ಅನ್ನು ಆಚರಿಸಲಾಯಿತು. ಈ ಹಬ್ಬದ ಆಚರಣೆಯಲ್ಲಿ ಎಲ್ಲಾ ಧರ್ಮದವರು ಭಾಗವಹಿಸುತ್ತಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೀರಲಕೊಪ್ಪ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಮೊಗರಂ ಹಬ್ಬದಲ್ಲಿ ಹಿಂದೂ ಯುವಕನೊಬ್ಬ ಅಗ್ನಿಕುಂಡದಲ್ಲಿ ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸಂಭ್ರಮ-ದು:ಖ, ಸೋಲು-ಗೆಲುವಿನ, ನೋವು-ನಲಿವಿನ ಮಿಳಿತವೇ ಮೊಹರಂ ಆಗಿದೆ. ಇದು ಅಲ್ಲಾಹನ ತಿಂಗಳು ಎನ್ನುವುದು ಪ್ರವಾದಿ ಪೈಗಂಬರರ ನುಡಿ ಆಗಿದೆ. ಕಳೆದ ದಿನ ದೇಶದಲ್ಲೆಡೆ ಮೊಹರಂ ಆಚರಿಸಲಾಯಿತು. ಈ ಹಬ್ಬದಲ್ಲಿ ಜಾತಿ, ಧರ್ಮ ಮರೆತು ಎಲ್ಲಾ ಧರ್ಮದವರು ಒಂದಾಗಿ ಒಗ್ಗೂಡುತ್ತಾರೆ. ಆಚರಣೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮೊಹರಂ ಹಬ್ಬದಲ್ಲಿ ದೇವರ ಮೆರವಣಿಗೆ ಮಾಡಲಾಗುತ್ತದೆ. ಆಚರಣೆ ಪ್ರಯುಕ್ತ ಹುಸೇನ್ ಹುಸೇನ್ ಮೌಲಾ ದರ್ಗಾದ ಎದುರು ಬೃಹತ್ ಅಗ್ನಿಕುಂಡವನ್ನು ಹಾಕಲಾಗಿತ್ತು.

ಈ ವೇಳೆ ಫಕೀರಪ್ಪ ಕುರಿ ಎಂಬ ಹಿಂದೂ ಯುವಕ ಅಗ್ನಿಕುಂಡ ಪ್ರವೇಶಿಸಿ ಕಂಬಳಿ ಹಾಸಿ ದೇವರನ್ನು ನಮಸ್ಕರಿಸಿದ್ದಾನೆ. ಮೂರು ಬಾರಿ ಯುವಕ ಮಂಡಿಯೂರಿ ಪ್ರಾರ್ಥಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಶುರಾ ದಿನವು ಇಸ್ಲಾಂನಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ವಿಶೇಷವಾಗಿ ಶಿಯಾ ಮುಸ್ಲಿಮರು ಕರ್ಬಲಾದಲ್ಲಿ ಇಮಾಮ್ ಹುಸೇನ್ ಅವರ ಹುತಾತ್ಮತೆಯನ್ನು ಗುರುತಿಸುತ್ತಾರೆ. ಇದು ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧದ ಯುದ್ಧವನ್ನು ಸಂಕೇತಿಸುತ್ತದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹುಸೇನ್, ಯಜೀದ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಬಲವಾಗಿ ನಿಂತರು. ಇದು ತ್ಯಾಗ, ನಂಬಿಕೆ ಮತ್ತು ನೈತಿಕ ಸಮಗ್ರತೆಯ ವಿಷಯಗಳೊಂದಿಗೆ ಪ್ರತಿಧ್ವನಿಸುತ್ತದೆ.

ಬಳ್ಳಾರಿಯಲ್ಲಿ ಮೊಹರಂ ಆಚರಣೆ ವೇಳೆ ಶೆಡ್ ಕುಸಿತ:
ಮುಸ್ಲಿಮರ ಪವಿತ್ರ ಆಚರಣೆಗಳಲ್ಲಿ ಒಂದಾದ ಮೊಹರಂ ಹಬ್ಬ ಎಲ್ಲಡೆ ನಡೆದಿದೆ. ಈ ವೇಳೆ ಬಳ್ಳಾರಿಯಲ್ಲಿ ಅವಘಡವೊಂದು ನಡೆದು ಹೋಗಿದೆ. ಮೋಹರಂ ಆಚರಣೆ ವೇಳೆ ತಗಡಿನ ಶೆಡ್ ಕುಸಿದು ಬಿದ್ದಿದೆ. ಅಷ್ಟೇ ಅಲ್ಲದೇ, ಕುಸಿದು ಕೆಳಕ್ಕೆ ಬೀಳೋ ವೇಳೆ ಜನರ ಮೇಲೆ ಬಿದ್ದಿದೆ. ಈ ವೇಳೆ ನೂರಾಋಉ ಮಂದಿ ಒಬ್ಬರ ಮೇಲ್ಲೊಬ್ಬರು ಬಿದ್ದಿದ್ದಾರೆ.
ಬಳ್ಳಾರಿ ಹೊರವಲಯದ ಹಳೇ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೋಹರಂ ಆಚರಣೆಯನ್ನು ನೋಡುತ್ತಿದ್ದ ಜನರು ಶೆಡ್ ಸಮೇತ ಕುಸಿದು ಬಿದ್ದಿದ್ದಾರೆ. ಶೆಡ್ ಮೇಲೆ ಜನರೆಲ್ಲ ಹತ್ತಿಕೊಂಡು ನೋಡುತ್ತಿದ್ದರು. ಈ ವೇಳೆ ಏಕಾಏಕಿ ಶೆಡ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಜನ ಪಾರಾಗಿದ್ದಾರೆ.












Click it and Unblock the Notifications