ಕುಮಾರಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು
ಬಾಗಲಕೋಟೆ, ಮೇ 23: ಎಚ್.ಡಿ.ಕುಮಾರಸ್ವಾಮಿ ಅವರು ಇಂದು ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ಕುಮಾರಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.
ಅಷ್ಟೇ ಅಲ್ಲ ರಾಜು ಶೆಲ್ಲಿಕೇರಿ ಎಂಬ ಅಭಿಮಾನಿ 10 ಕೆಜಿ ಉಪ್ಪಿಟ್ಟು, 10 ಕೆಜಿ ಶಿರಾ ವಿತರಣೆ ಮಾಡಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಒಂದು ತಿಂಗಳವರೆಗೆ ಪಾದರಕ್ಷೆ ಧರಿಸದೇ ಹರಕೆ ಹೊತ್ತಿದ್ದ ರಾಜು ಇಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಹೇಳಲೇಬೇಕಾದ ವಿಚಾರವೆಂದರೆ ರಾಜು, ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿ. ಬಾಗಲಕೋಟೆಗೆ ಅಥವಾ ನೆರೆಯ ಜಿಲ್ಲೆಯ ಸುತ್ತಮತ್ತ ಕುಮಾರಸ್ವಾಮಿ ಬಂದಿದ್ದಾರೆ ಎಂಬ ಸುದ್ದಿ ಬಂದರೆ ಅಲ್ಲಿಗೆ ಹೋಗಿ ಬರುವುದು ಇವನ ಚಾಳಿ. ಅವರ ಬಗ್ಗೆ ಅಷ್ಟೇ ಪ್ರೇಮ ಕೂಡ.

ಎಚ್ ಡಿಕೆ ಬಗ್ಗೆ ಎಷ್ಟು ಪ್ರೀತಿ ಹೊಂದಿದ್ದಾರೆ ಅಂದರೆ ಎದೆಯ ಎಡಭಾಗದಲ್ಲಿ ಕುಮಾರಸ್ವಾಮಿಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಅಗುವವರೆಗೂ ಕಳೆದ ಒಂದು ತಿಂಗಳಿಂದ ಬೇಸಿಗೆ ಕಾಲದಲ್ಲಿ ಬರಿಗಾಲಿನಲ್ಲಿ ಸಂಚರಿಸುತ್ತಿದ್ದ ರಾಜು ಇಂದು ಕುಮಾರಸ್ವಾಮಿ ಸಿಎಂ ಆದ ಬಳಿಕ ಕಾಲಿನಲ್ಲಿ ಪಾದರಕ್ಷೆ ಧರಿಸಿದರು.












Click it and Unblock the Notifications