ಜೆಡಿಎಸ್ ಚಿಹ್ನೆಯಲ್ಲಿರುವ ಮಹಿಳೆಯ ಚಿತ್ರ ತೆಗೆಯಿರಿ: ಈಶ್ವರಪ್ಪ
ಬಾಗಲಕೋಟೆ, ಮಾರ್ಚ್ 09: ಸುಮಲತಾ ಅಂಬರೀಶ್ ಅವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ ಸಚಿವ ರೇವಣ್ಣ ಅವರು ಇಡೀಯ ಮಹಿಳಾ ಕುಲಕ್ಕೆ ಅಪಮಾನ ಎಸಗಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರು ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಜೆಡಿಎಸ್ ಚಿಹ್ನೆಯಲ್ಲಿರುವ ಮಹಿಳೆಯ ಚಿತ್ರವನ್ನು ತೆಗೆಯಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ಸುಮಲತಾ ಕಣ್ಣೀರು ಹಾಕಿರುವುದನ್ನು ಇಡೀ ರಾಜ್ಯ ನೋಡಿದೆ, ರೇವಣ್ಣ ಶೀಘ್ರವೇ ಬಹಿರಂಗವಾಗಿ ಕ್ಷಮೆ ಕೇಳಬೇಕು. ತಮ್ಮ ಪಕ್ಷದ ಚಿಹ್ನೆಯಲ್ಲಿ ಮಹಿಳೆಯ ಚಿತ್ರ ಹೊಂದಿರುವುದಕ್ಕೆ ಇವರು ಅರ್ಹರಲ್ಲ ಎಂದು ತೀಕ್ಷ್ಣ ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಈಶ್ವರಪ್ಪ, ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತನಂತರ ಅವರಿಗೆ, ತಿಲಕ, ಬಳೆ, ಸೀರೆ ಎಲ್ಲೆಲ್ಲೂ ಬಿಜೆಪಿ ಕಾಣುತ್ತಿದೆ, ಅದಕ್ಕೆ ಅವರಿಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ತಕತ್ತಿದ್ದರೆ ಬಾದಾಮಿಯಲ್ಲಿ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಸ್ಪರ್ಧಿಸಲಿ, ಒಂದು ವೇಳೆ ಅವರೇನಾದರೂ ಗೆದ್ದಲ್ಲಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದರು.












Click it and Unblock the Notifications