ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾದ ಆನಂದ್ ನ್ಯಾಮಗೌಡ ಹೇಳಿಕೆ

Recommended Video

      ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ | Oneindia Kannada

      ಬಾಗಲಕೋಟೆ, ನವೆಂಬರ್ 14 : ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ನವೆಂಬರ್ 3ರಂದು ನಡೆದ ಉಪ ಚುನಾವಣೆಯಲ್ಲಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

      ಬುಧವಾರ ಜಮಖಂಡಿಯ ಅಲ್ಪಸಂಖ್ಯಾತ ಸಮುದಾಯದ ವತಿಯಿಂದ ಆನಂದ್ ನ್ಯಾಮಗೌಡ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಭಾಷಣ ಮಾಡುವ ಭರದಲ್ಲಿ ಶಾಸಕರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

      ಆನಂದ್ ನ್ಯಾಮಗೌಡ ಅವರು ನವೆಂಬರ್ 3ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರನ್ನು 39,480 ಮತಗಳ ಅಂತರದಿಂದ ಸೋಲಿಸಿದ್ದಾರೆ. ಚುನಾವಣೆ ಗೆಲುವಿನ ಬಳಿಕ ಜಾತಿಯ ಮಾತುಗಳನ್ನು ಆಡಿದ್ದಾರೆ.

      ಶಾಸಕ ಆನಂದ್ ನ್ಯಾಮಗೌಡ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬ್ರಾಹ್ಮಣ ಸಮುದಾಯದ ಮುಖಂಡರು ಶಾಸಕರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಕಾಂತ್ ಕುಲಕರ್ಣಿ ಅವರು ಸಹ ಹೇಳಿಕೆಯನ್ನು ಖಂಡಿಸಿದ್ದಾರೆ....

      ಆನಂದ್ ನ್ಯಾಮಗೌಡ ಹೇಳಿದ್ದೇನು?

      ಆನಂದ್ ನ್ಯಾಮಗೌಡ ಹೇಳಿದ್ದೇನು?

      ಸಮಾರಂಭದಲ್ಲಿ ಮಾತನಾಡಿದ ಆನಂದ್ ನ್ಯಾಮಗೌಡ ಅವರು, '1990ರಲ್ಲಿ ನಮ್ಮ ತಂದೆ ಸಿದ್ದು ನ್ಯಾಮಗೌಡ ಅವರು ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ದೇಶಕ್ಕೆ ಚಿರಪರಿಚಿತರಾಗಿದ್ದರು. ಸದ್ಯ, ನಾನೂ ಬ್ರಾಹ್ಮಣ ವ್ಯಕ್ತಿಯನ್ನ ಸೋಲಿಸಿದ್ದೇನೆ' ಎಂದು ಹೇಳಿದರು.

      ಶ್ರೀಕಾಂತ್ ಕುಲಕರ್ಣಿ ಸ್ಪರ್ಧೆ

      ಶ್ರೀಕಾಂತ್ ಕುಲಕರ್ಣಿ ಸ್ಪರ್ಧೆ

      ಸಿದ್ದು ನ್ಯಾಮಗೌಡ ಅವರ ನಿಧನದಿಂದಾಗಿ ಜಮಖಂಡಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿತ್ತು. ನವೆಂಬರ್ 3ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ, ಬಿಜೆಪಿ ಅಭ್ಯರ್ಥಿಯಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶ್ರೀಕಾಂತ್ ಕುಲಕರ್ಣಿ ಅವರು ಸ್ಪರ್ಧೆ ಮಾಡಿದ್ದರು.

      ಬ್ರಾಹ್ಮಣ ಸಮುದಾಯದ ಆಕ್ರೋಶ

      ಬ್ರಾಹ್ಮಣ ಸಮುದಾಯದ ಆಕ್ರೋಶ

      ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಸಮುದಾಯದ ಮುಖಂಡರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ಸಮಾರಂಭದಲ್ಲಿ ಈ ರೀತಿ ಮಾತನಾಡುವ ಮೂಲಕ ಸಮಯದಾಯವನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

      ಮೊದಲು ಕ್ಷಮೆ ಕೇಳಲಿ

      ಮೊದಲು ಕ್ಷಮೆ ಕೇಳಲಿ

      ಶಾಸಕ ಆನಂದ್ ನ್ಯಾಮಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಶ್ರೀಕಾಂತ್ ಕುಲಕರ್ಣಿ ಅವರು, 'ಈ ಸೊಕ್ಕು, ದರ್ಪ ಬಹಳ ದಿನ ಉಳಿಯುವುದಿಲ್ಲ. ಆನಂದ್ ನ್ಯಾಮಗೌಡ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ ಎಂಬುದನ್ನು ಮರೆಯಬಾರದು. ಅವರಿಗೆ ಗೆಲುವಿನ ಸೊಕ್ಕು ಬಂದಿದೆ. ಸಜ್ಜನಿಕೆ ಇದ್ದರೆ ಮೊದಲು ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು' ಎಂದು ಆಗ್ರಹಿಸಿದ್ದಾರೆ.

      ಪಡೆದ ಮತಗಳು

      ಪಡೆದ ಮತಗಳು

      ಜಮಖಂಡಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಆನಂದ್ ನ್ಯಾಮಗೌಡ ಅವರು 97017 ಮತಗಳನ್ನು ಪಡೆದು 39,480 ಮತಗಳ ಅಂತರದಿಂದ ಜಯಗಳಿಸಿದ್ದರು. ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರು 57,537 ಮತಗಳನ್ನು ಪಡೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+