ಅನೈತಿಕ ಸಂಬಂಧ ಬಯಲು; ಸಿನಿಮಾ ಮಾದರಿಯಲ್ಲೆ ಗಂಡನನ್ನೇ ಕೊಂದ ಕಿರಾತಕಿ ಪತ್ನಿ
ಬಾಗಲಕೋಟೆ, ಜುಲೈ 19: ಬೈಕ್ ಹಾಗೂ ಕಾರ್ ನಡುವಿನ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ. ಮೇಲುನೋಟಕ್ಕೆ ಅದೊಂದು ಅಪಘಾತ ಎಂದೇ ಪರಿಗಣಿಸಲಾಗಿತ್ತು. ಆದರೆ ಘಟನೆ ನಡೆದು 17 ದಿನಗಳ ಬಳಿಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಅದು ಆಕ್ಸಿಡೆಂಟ್ ಅಲ್ಲ, ಅದೊಂದು ಪ್ರೀ ಫ್ಲ್ಯಾನ್ಡ್ ಮರ್ಡರ್ ಎನ್ನುವುದು ಇದೀಗ ಬಹಿರಂಗಗೊಂಡಿದೆ.
ಜುಲೈ 2 ಮಧ್ಯರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಪ್ರವೀಣ್ ಸೇಬಣ್ಣವರ(30) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಮೇಲುನೋಟಕ್ಕೆ ಎಲ್ಲರೂ ಇದು ಒಂದು ಹಿಟ್ ಆ್ಯಂಡ್ ರನ್ ಕೇಸ್ ಎಂದೇ ಭಾವಿಸಿದ್ದರು. ಆದರೆ ಪೊಲೀಸರು ಅನುಮಾನದ ಮೇರೆಗೆ ಸಮಗ್ರ ತನಿಖೆ ನಡೆಸಿ ಅಸಲಿ ಸತ್ಯವನ್ನು ಹೊರ ತೆಗೆದಿದ್ದಾರೆ. ಸುಮಾರು 15 ದಿನಗಳ ವಿಚಾರಣೆ ಕೈಗೊಂಡ ಅಮೀನಗಡ ಪೊಲೀಸರು ಇದು ಆಕ್ಸಿಡೆಂಟ್ ಅಲ್ಲ. ಇದೊಂದು ಪ್ರೀ ಫ್ಲ್ಯಾನಡ್ ಮರ್ಡರ್ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಮೃತ ಬಾಗಲಕೋಟೆಯ ಗದ್ದನಕೇರಿ ನಿವಾಸಿ ಪ್ರವೀಣ್ ಹಾಗೂ ರಾಯಚೂರು ಜಿಲ್ಲೆಯ ಸಿರವಾರದ ನಿವಾಸಿಯಾಗಿದ್ದ ನಿತ್ಯಾ 11 ವರ್ಷದ ವಿವಾಹವಾಗಿದ್ದರು. ಇಬ್ಬರಿಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಮಗ ವಿಜಯಪುರದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇನ್ನು ಮಗಳು ನಿತ್ಯಾ ಹಾಗೂ ಪ್ರವೀಣ್ ಜೊತೆಗೆ ವಾಸವಿದ್ದಳು. ಕಳೆದ ಮೂರು ತಿಂಗಳ ಹಿಂದೆ ನಿತ್ಯಾ ಹಾಗೂ ಪ್ರವೀಣ್ ಸಿರಾವರಕ್ಕೆ ಶಿಪ್ಟ್ ಆಗಿ ಅಲ್ಲೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ನಿತ್ಯಾಳಿಗೆ ಸಿರವಾರದಲ್ಲಿ ಬೈಕ್ ಗ್ಯಾರೇಜ್ ನಡೆಸುತ್ತಿದ್ದ ರಾಘವೇಂದ್ರ ಎಂಬುವವನ ಪರಿಚಯವಾಗಿದೆ. ನಿತ್ಯಾ ತನ್ನ ಸ್ಕೂಟಿ ರಿಪೇರಿ ಮಾಡಿಸಲು ಹೋದಾಗ ಇಬ್ಬರ ನಡುವೆ ಪರಿಚಯವಾಗಿ, ಮೊಬೈಲ್ ಸಂಖ್ಯೆಗಳು ಬದವಲಾವಣೆಗಳಾದ ನಂತರ ಪ್ರೇಮಕ್ಕೆ, ನಂತರ ಅಕ್ರಮ ಸಂಬಂಧಕ್ಕೆ ತಿರುಗಿರುತ್ತದೆ.

ಅಕ್ರಮ ಸಂಬಂಧ ಮುಂದುವರಿಸಲು ಕೊಲೆ ಸಂಚು
ಇನ್ನು ಪ್ರವೀಣ್ ಕೊಲೆಗೆ ಆತನ ಪತ್ನಿ ನಿತ್ಯಾಳ ಅಕ್ರಮ ಸಂಬಂಧವೇ ಕಾರಣ ಅಂತಾ ತಿಳಿದು ಬಂದಿದೆ. ಪ್ರವೀಣ್ ಪತ್ನಿ ನಿತ್ಯಾ , ರಾಘವೇಂದ್ರ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು ಎನ್ನಲಾಗುತ್ತಿದೆ. ಇವರಿಬ್ಬರ ಅಕ್ರಮ ಸಂಬಂಧಕ್ಕೆ ಪ್ರವೀಣ್ ಅಡ್ಡಿಯಾಗಿದ್ದ. ಹೀಗಾಗಿ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿರುವ ಪ್ರವೀಣನನ್ನು ಕೊಲೆ ಮಾಡಿದರೆ ತಮ್ಮ ಹಾದಿ ಸುಲಭ ಆಗುತ್ತದೆ ಎಂದು ಯೋಜನೆ ರೂಪಿಸಿದ್ದಾರೆ. ಕೊಲೆಯಾದ ದಿನ ನಿತ್ಯಾ ಹಾಗೂ ರಾಘವೇಂದ್ರ ಇಬ್ಬರೂ ಕಾರಿನಲ್ಲಿಯೇ ಇದ್ದರು. ಅಪಘಾತ ಮಾಡಿ ಮುಚ್ಚಾಕಿದ್ರೆ ಯಾರಿಗೂ ಏನೂ ಗೊತ್ತಾಗಲ್ಲ ಎನ್ನುವ ದುರುದ್ದೇಶದಿಂದ ಈ ರೀತಿಯಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ

ಮೊಬೈಲ್ ಪರೀಕ್ಷಿಸಿದಾಗ ರಾಸಲೀಲೆ ಬಯಲು
ನಿತ್ಯಾ ತಾನೂ ಬೇರೊಬ್ಬನ ಜೊತೆಗೆ ಅನೈತಿಕ ಸಂಬಂದ ಹೊಂದಿದ್ದರೂ ಗಂಡನಿಗೆ ಯಾವ ವಿಷಯವನ್ನು ತಿಳಿಯದಂತೆ ನೋಡಿಕೊಂಡಿದ್ದಳು. ಆದರೆ ಪ್ರವೀಣ್ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಅನೈತಿಕ ಸಂಬಂಧ ಇರುವುದು ತಿಳಿಯುತ್ತದೆ. ಈ ಸಂಬಂಧ ಹೆಂಡತಿ ಜೊತೆಗೆ ಜಗಳ ಮಾಡಿ ಮಗಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ರಾಯಚೂರು ಜಿಲ್ಲೆಯ ಸಿರವಾರದಿಂದ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕಡೆ ಹೊರಡುತ್ತಾನೆ. ಈ ವೇಳೆ ತಮ್ಮ ವಿಷಯ ಗೊತ್ತಾಗಿರುವ ಬಗ್ಗೆ ರಾಘವೇಂದ್ರನಿಗೆ ನಿತ್ಯಾ ಮಾಹಿತಿ ನೀಡಿ, ಪತಿಯ ಕೊಲೆಗೆ ಸ್ಕೆಚ್ ಹಾಕುತ್ತಾರೆ. ಆದರೆ ಈ ಘಟನೆ ಅಪಘಾತದಂತೆ ಇರಬೇಕೆಂದು ಇಬ್ಬರು ತೀರ್ಮಾನಿಸಿಕೊಂಡಿರುತ್ತಾರೆ.

ಮಗುವಿದ್ದರಿಂದ ತಡರಾತ್ರಿವರೆಗೆ ಕಾದಿದ್ದ ಕೊಲೆಪಾತಕರು
ಬೈಕ್‌ನಲ್ಲಿ ಹೊರಟ ಪ್ರವೀಣನನ್ನ ಮುದಗಲ್ ಹತ್ತಿರ ಬರುತ್ತಿದ್ದಂತೆ ಡಿಕ್ಕಿ ಹೊಡೆದು ಕೊಲ್ಲಲು ರಾಘವೇಂದ್ರ ಫ್ಲ್ಯಾನ್ ಮಾಡಿದ್ದಾನೆ. ಆದರೆ ಆತನ ಜೊತೆಯಲ್ಲಿ ಮಗಳಿದ್ದ ಕಾರಣ ಇಲ್ಲಿ ಬೇಡ ಅಂತಾ ನಿತ್ಯಾ, ರಾಘವೇಂದ್ರನಿಗೆ ಹೇಳಿದ್ದಾಳೆ. ಇನ್ನು ಪ್ರವೀಣ್ ಮನೆಗೆ ಹೋಗುವ ಮುನ್ನ ತನ್ನ ತಾಯಿಗೆ ಹುನಗುಂದಕ್ಕೆ ಬರಲು ಹೇಳಿದ್ದು, ಅಲ್ಲಿ ಮಗಳನ್ನು ತಾಯಿಗೆ ನೀಡಿ ಬೇರೊಂದು ಕಾರು ಮಾಡಿ ಮನೆಗೆ ಕಳುಹಿಸಿ ತಾನು ಕುಡಿಯುವುದಕ್ಕೆ ತೆರೆಳುತ್ತಾನೆ. ಇತ್ತ ಪ್ರವೀಣ್ ಎಲ್ಲಾ ಚಲನವಲನವನ್ನು ನಿತ್ಯಾ ಹಾಗೂ ರಾಘವೇಂದ್ರ ಕಾರಿನಲ್ಲಿ ಹಿಂಬಾಲಿಸುತ್ತಲೇ ವಾಚ್ ಮಾಡುತ್ತಿರುತ್ತಾರೆ. ರಾತ್ರಿ 10:45ರ ವೇಳೆಗೆ ಹುನಗುಂದ ಬಾರ್ ನಿಂದ ಪ್ರವೀಣ್ ಹೊರ ಬರುತ್ತಿದ್ದಂತೆ ಪಾಲೋ ಮಾಡಿಕೊಂಡು ಬಂದ ರಾಘವೇಂದ್ರ ಕಮತಗಿ ಕ್ರಾಸ್ ಬಳಿ ಬರುತ್ತಿದ್ದಂತೆ ಗುದ್ದಿ ಪರಾರಿಯಾಗುತ್ತಾರೆ.

ಗಾಯಗೊಂಡಿದ್ದವನಿಗೆ ಮತ್ತೆ ವಾಪಸ್ ಬಂದು ಡಿಕ್ಕಿ
ಮೊದಲಿಗೆ ಪ್ರವೀಣ್ ಬೈಕ್ ಗೆ ಕಾರು ಡಿಕ್ಕಿ ಹೊಡೆದ ರಾಘವೇಂದ್ರ ಪರಾರಿಯಾಗಿರುತ್ತಾನೆ. ಈ ವೇಳೆ ಕೊಲೆ ಪ್ಲಾನ್ ಎಂದು ತಿಳಿಯದ ಪ್ರವೀಣ್ ತನ್ನ ಹೆಂಡತಿಗೆ ಫೋನ್ ಮಾಡಿ ಆಕ್ಸಿಡೆಂಟ್ ಆಗಿರುವ ಬಗ್ಗೆ ಮಾಹಿತಿ ನೀಡುತ್ತಾನೆ. ನನಗೆ ಆಕ್ಸಿಡೆಂಟ್ ಆಗಿದೆ, ಬಹಳ ದಾಹ ಆಗುತ್ತಿದೆ ನೀರು ಕುಡಿಬೇಕು ಅಂತಾ ಹೇಳಿಕೊಂಡಿದ್ದಾನೆ. ಈ ವಿಷಯ ಕೇಳಿ ಆಘಾತಕ್ಕೊಳಗಾದ ನಿತ್ಯಾ ತನ್ನ ಪತಿ ಸತ್ತಿಲ್ಲ ಎಂದು ರಾಘವೇಂದ್ರನಿಗೆ ಹೇಳಿದ್ದಾಳೆ. ಬಳಿಕ ಕಾರನ್ನು ವಾಪಸ್ ತಿರುಗಿಸಿಕೊಂಡು ರಾಘವೇಂದ್ರ , ಬೈಕ್‌ನಿಂದ ಬಿದ್ದಿದ್ದ ಪ್ರವೀಣ್ ನಡೆದುಕೊಂಡು ಹೋಗುವಾಗ ಮತ್ತೊಮ್ಮೆ ಕಾರಿನಿಂದ ಡಿಕ್ಕಿ ಹೊಡಿದಿದ್ದಾನೆ. ಬಳಿಕ ಆತ ಸತ್ತಿರುವುದನ್ನು ಖಚಿತಪಡಿಸಿಕೊಂಡು ಸ್ಥಳದಿಂದ ಜಾಗ ಕಾಲಿ ಮಾಡಿದ್ದಾರೆ.
ನಂತರ ಡಿಕ್ಕಿ ಹೊಡೆದ ಕಾರನ್ನು ಆರೋಪಿಗಳು ಲಿಂಗಸಗೂರಿನಲ್ಲಿ ರಿಪೇರಿ ಮಾಡಿಸಿಕೊಂಡು ಮರಳಿರುತ್ತಾರೆ. ನಿತ್ಯ ತನಗೇನು ತಿಳಿಯದ ಹಾಗೆ ಗಂಡನ ಮನೆಯಲ್ಲಿಯೇ ಇರುತ್ತಾಳೆ. ಅಪಘಾತದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಅಮೀನಗಡ ಪೊಲೀಸರಿಗೆ ಅಪಘಾತದ ಬಗ್ಗೆ ಸಂಶಯ ಮೂಡುತ್ತದೆ. ಯಾಕಂದ್ರೆ ಗಾಯಗೊಂಡ ಪ್ರವೀಣ್ ಮೈಮೇಲೆ ಅನುಮಾನಸ್ಪದ ಗಾಯಗಳಾಗಿರುತ್ತವೆ. ನಂತರ ಪ್ರವೀಣ್ ಹೆಂಡತಿ ನಿತ್ಯಾಳ ಕಾಲ್ ಟ್ರೇಸ್‌ಔಟ್ ಮಾಡಿದ ಪೊಲೀಸರಿಗೆ ಕೊಲೆ ಎಂಬ ಅನುಮಾನ ಮೂಡುತ್ತದೆ. ನಿತ್ಯಾಳನ್ನು ಕರೆತಂದು ವಿಚಾರಣೆ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ.
ಇನ್ನು ಆಕ್ಸಿಡೆಂಟ್ ಮಾಡುವುದಕ್ಕೆ ಬಳಸಲಾಗಿದ್ದ ಕಾರನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟಾರೆ ಅಪಘಾತ ಪ್ರಕರಣ ಎಂದು ಬಿಂಬಿಸಲಾಗಿದ್ದ ಪ್ರಕರಣವನ್ನು ಕೊಲೆ ಎಂದು ಪತ್ತೆ ಹಚ್ಚಿದ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ. ಆದರೆ ಸೊಸೆಯೇ ಮಗನನ್ನು ಕೊಲೆ ಮಾಡಿಸಿರುವುದು ಪ್ರವೀಣ್ ಕುಟುಂಬಸ್ಥರಲ್ಲಿ ದಿಗ್ಭ್ರಮೆ ಮೂಡಿಸಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications