ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬಾದಾಮಿಯಲ್ಲಿ ಗುಂಪು ಘರ್ಷಣೆ, ನಿಷೇಧಾಜ್ಞೆ, ಶಾಲೆಗೆ ರಜೆ

|
Google Oneindia Kannada News

ಬಾಗಲಕೋಟೆ, ಜುಲೈ 07; ಬಾದಾಮಿ ತಾಲೂಕಿನಲ್ಲಿ ಜುಲೈ 8ರ ರಾತ್ರಿ ಎಂಟು ಗಂಟೆಯ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗುರುವಾರ ಕೆರೂರಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ತಾಲೂಕಿನ ಕೆರೂರು ಬಸ್ ನಿಲ್ದಾಣದಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಹಿನ್ನಲೆಯಲ್ಲಿ ಬುಧವಾ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಬಾಗಲಕೋಟೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಆದೇಶ ಹೊರಡಿಸಿದ್ದಾರೆ.

Breaking: ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಚಾಕು ಇರಿತBreaking: ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಚಾಕು ಇರಿತ

ಕೆರೂರು ಬಸ್ ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಸಂಜೆ ಗಲಾಟೆ ನಡೆದಿತ್ತು. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅರುಣ್, ಲಕ್ಷ್ಮಣ್ ಎಂಬುವವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಾಗಲಕೋಟೆ: ಈ ಊರಿನ ದೇವರಿಗೆ ಮದ್ಯವೇ ನೈವೇದ್ಯ,ತೀರ್ಥ-ಪ್ರಸಾದವೂ ಸಾರಾಯಿ ಬಾಗಲಕೋಟೆ: ಈ ಊರಿನ ದೇವರಿಗೆ ಮದ್ಯವೇ ನೈವೇದ್ಯ,ತೀರ್ಥ-ಪ್ರಸಾದವೂ ಸಾರಾಯಿ

Communal Clash in Kerur: Section 144 till July 8, Holiday for Schools on July 7

ಗಾಯಗೊಂಡಿರುವ ಅರುಣ್ ಹಿಂದೂ ಜಾಗರಣಾ ವೇದಿಕೆ ಕಾರ್ಯದರ್ಶಿಯಾಗಿದ್ದಾರೆ. ಬಾಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗಲಾಟೆ ಬಳಿಕ ಕೆರೂರು ಬಸ್ ನಿಲ್ದಾಣದ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ಮುಡಿಗೆ 'ಲಕ್ಷ್ಯ' ಪ್ರಶಸ್ತಿ ಗರಿಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ಮುಡಿಗೆ 'ಲಕ್ಷ್ಯ' ಪ್ರಶಸ್ತಿ ಗರಿ

ಮಾರುಕಟ್ಟೆ ಪ್ರದೇಶದಲ್ಲಿ ಬೈಕ್ ಮತ್ತು ಎರಡು ತಳ್ಳುಗಾಡಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಮತ್ತು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್, ಸಿಪಿಐ ಭೀಮಣ್ಣ ಸ್ಥಳಕ್ಕೆ ಭೇಟಿ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮತ್ತು ಶಾಲಾ, ಕಾಲೇಜುಗಳಿಗೆ ಗುರುವಾರ ಕೆರೂರಿನಲ್ಲಿ ರಜೆ ಘೋಷಣೆ ಮಾಡಲಾಗಿದೆ.

10 ಜನರ ಬಂಧನ; ಬುಧವಾರ ಸಂಜೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಬಳಿಕ ಇನ್ನಷ್ಟು ಜನರನ್ನು ಬಂಧಿಸುವ ನಿರೀಕ್ಷೆ ಇದೆ. ಘರ್ಷಣೆ ಬಳಿಕ ಬೈಕ್‌ಗಳನ್ನು ಜಖಂಗೊಳಿಸಿದ್ದು, ತಳ್ಳುಗಾಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಗಲಭೆಯಲ್ಲಿ ಇನ್ನೂ ಹಲವಾರು ಜನರು ಪಾಲ್ಗೊಂಡಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರೆದಿದೆ.

Recommended Video

ಚಿರಂಜೀವಿ‌ ಹೆಸರು ಬದಲಾಯಿಸುವುದರಿಂದ ಹಣೆಬರಹ ಬದಲಾಗುತ್ತಾ? ನೆಟ್ಟಿಗರ ಕಾಮೆಂಟ್ ಏನು? | OneIndia Kannada

English summary
Bagalkot deputy commissioner P. Sunil Kumar imposed section 144 till July at Badami after communal clash in Kerur. Holiday announced for the Schools on July 7th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X