ಶಿವಯೋಗ ಮಂದಿರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬಾಗಲಕೋಟೆ, ಮೇ 05: ಬಾದಾಮಿ ಸಮೀಪದ ಶಿವಯೋಗ ಮಂದಿರಕ್ಕೆ ಇಂದು ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗೈಕ್ಯ ಹಾನಗಲ್ ಕುಮಾರ ಸ್ವಾಮೀಜಿ ಹಾಗೂ ಸದಾಶಿವ ಸ್ವಾಮೀಜಿ ಅವರ ಗದ್ದುಗೆಗಳ ದರ್ಶನ ಪಡೆದರು.
ಶಿವಯೋಗ ಮಂದಿರದ ಧರ್ಮದರ್ಶಿ, ಕಾಂಗ್ರೆಸ್ ಮುಖಂಡ ಎಂ.ಬಿ.ಹಂಗರಗಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಗದ್ದುಗೆಯ ಆರತಿ ತಟ್ಟೆಗೆ 2,000 ಹಾಕಿದ ಸಿದ್ದರಾಮಯ್ಯ, ವಿಭೂತಿ ಹಚ್ಚಿಕೊಂಡು ಅಲ್ಲಿಯೇ ಇದ್ದ ಮಠದ ವಟುಗಳೊಂದಿಗೆ ಮಾತನಾಡಿದರು.
ಗದ್ದುಗೆ ದರ್ಶನದ ಬಳಿಕ ಶಿವಯೋಗ ಮಂದಿರದ ವಟುಗಳು ಸಿಎಂಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಸಿ.ಎಂ.ಜೊತೆ ಇದ್ದರು.

ಈ ವೇಳೆ ಶಿವಯೋಗ ಮಂದಿರದ ಅಧ್ಯಕ್ಷ ಡಾ.ಸಂಗನಬಸವ ಸ್ವಾಮಿಗಳು ಇರಲಿಲ್ಲ. ಶ್ರೀಗಳಿಗೆ ಗದಗ ಜಿಲ್ಲೆಯ ಇಟಗಿಯಲ್ಲಿ ಇಂದು ತುಲಾಭಾರ ಹಮ್ಮಿಕೊಂಡಿದ್ದ ಕಾರಣ ಅಲ್ಲಿಗೆ ತೆರಳಿದ್ದರು.












Click it and Unblock the Notifications