ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ರಾಜಕೀಯದಿಂದ ಬಿಎಸ್‌ವೈ ದೂರ : ವಿಜಯೇಂದ್ರ ಸ್ಪಷ್ಟನೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜುಲೈ 25 : "ನಮ್ಮ ತಂದೆ ಯಡಿಯೂರಪ್ಪನವರು ಈಗಾಗಲೇ ಚುನಾವಣಾ ರಾಜಕಾರಣದಿಂದ ಹೊರಗುಳಿಯುತ್ತಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕಾಗಿಯೇ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನನ್ನ ಹೆಸರನ್ನು ಹೇಳಿದ್ದಾರೆ" ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
"ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ, ನೀವು ಯಾರಾದರೂ ಸ್ಪರ್ಧಿಸುತ್ತೀರಾ? ಎಂದು ಶಿಕಾರಿಪುರದ ಬಿಜೆಪಿ ಮುಖಂಡರನ್ನು ಕೇಳಿದರು. ಅದಕ್ಕೆ ಕ್ಷೇತ್ರದ ಜನತೆ ನೀವೇ ನಿಲ್ಲಬೇಕು, ಇಲ್ಲ ಅಂದರೆ ನಿಮ್ಮ ಮಗನನ್ನಾದರೂ ನಿಲ್ಲಿಸಿ ಎಂದು ಕೇಳಿಕೊಂಡಿದ್ದಕ್ಕೆ ನಮ್ಮ ತಂದೆಯವರು ನನ್ನ ಹೆಸರನ್ನು ಸೂಚಿಸಿದರು" ಎಂದರು.

 ಶಿಕಾರಿಪುರದಲ್ಲಿ ಸ್ಪರ್ಧೆಗೆ ಬಿಜಿಪಿಯಲ್ಲೇ ವಿರೋಧ? ವಿಜಯೇಂದ್ರ ಉತ್ತರವೇನು? ಶಿಕಾರಿಪುರದಲ್ಲಿ ಸ್ಪರ್ಧೆಗೆ ಬಿಜಿಪಿಯಲ್ಲೇ ವಿರೋಧ? ವಿಜಯೇಂದ್ರ ಉತ್ತರವೇನು?

"ಆದರೆ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯಾಗಬೇಕಾದರೂ ಅಂತಿಮವಾಗಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಬೇಕು, ಇದನ್ನೂ ಕೂಡ ಅವರೂ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ ನಾನು ಚುನಾವಣೆಗೆ ನಿಲ್ಲಬೇಕಾ, ಬೇಡವಾ, ಎಲ್ಲಿಂದ ನಿಲ್ಲಬೇಕು ಎನ್ನುವುದನ್ನು ಪಕ್ಷ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ, ಅದನ್ನು ನಾನು ಪಾಲಿಸುತ್ತೇನೆ" ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಮರಿ ಯಡಿಯೂರಪ್ಪ ಎಂಬ ತಮ್ಮ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, "ರಾಜಕಾರಣ ಅಂದರೆ ತಂತಿ ಮೇಲೆ ನಡೆದ ಹಾಗೆ, ಮುಂದೆ ಬರುವ ದಿನಗಳಲ್ಲಿ ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು, ಚದುರಂಗದಾಟ ಕೂಡ ಗೊತ್ತಿರಬೇಕು. ಈ ಹಿನ್ನೆಲೆಯಲ್ಲಿ ಆ ಮಾತನ್ನು ಹೇಳಿದ್ದೇನೆ" ಎಂದು ಸ್ಪಷ್ಟಪಡಿಸಿದರು.

ಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ನೀಡಲು ಕಾರಣರಾದ ನಾಲ್ವರ ಹೆಸರು ಬಹಿರಂಗಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ನೀಡಲು ಕಾರಣರಾದ ನಾಲ್ವರ ಹೆಸರು ಬಹಿರಂಗ

"ಕಾಂಗ್ರೆಸ್‌ ಪಕ್ಷದಲ್ಲಿನ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿರುವುದರ ಬಗ್ಗೆ ಮಾತನಾಡಿ, ವಿರೋಧ ಪಕ್ಷದವರು ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ. ಅದೊಂದು ಬೀದಿನಾಟಕ ಆಗಿ ಪರಿವರ್ತನೆಯಾಗಿದೆ . ವಿರೋಧ ಪಕ್ಷದ ನಡುವಳಿಕೆಗಳು, ಅದರಲ್ಲೂ ಕಾಂಗ್ರೆಸ್ ಪಕ್ಷದ ಕಿತ್ತಾಟವನ್ನು ರಾಜ್ಯದ ಜನ ನೋಡುತ್ತಿದ್ದು, ಹಾಸ್ಯ ಮಾಡಿ ನಗುತ್ತಿದ್ದಾರೆ" ಎಂದು ವಿಜಯೇಂದ್ರ ಲೇವಡಿ ಮಾಡಿದರು.

 ತಂದೆಯ ಮಾರ್ಗದಲ್ಲಿ ಬೊಮ್ಮಾಯಿ

ತಂದೆಯ ಮಾರ್ಗದಲ್ಲಿ ಬೊಮ್ಮಾಯಿ

"ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಯಡಿಯೂರಪ್ಪ ಹೇಗೆ ಬಡವರ ಬಗ್ಗೆ ರೈತರ ಬಗ್ಗೆ ತುಳಿತಕ್ಕೆ ಒಳಗಾದವನ್ನು ಹೇಗೆ ಸಮನಾಗಿ ತೆಗೆದುಕೊಂಡು ಹೋಗುತ್ತಿದ್ದರೋ, ಅದೇ ರೀತಿ ಬೊಮ್ಮಾಯಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ" ಎಂದು ವಿಜಯೇಂದ್ರ ಹೇಳಿದರು.

 ಬಿಜೆಪಿ ಒಗ್ಗಟ್ಟಿನ ಪಕ್ಷ, ವ್ಯಕ್ತಿಪೂಜೆ ಇಲ್ಲ

ಬಿಜೆಪಿ ಒಗ್ಗಟ್ಟಿನ ಪಕ್ಷ, ವ್ಯಕ್ತಿಪೂಜೆ ಇಲ್ಲ

"ಹಳೇ ಮೈಸೂರು ಭಾಗದಲ್ಲಿ ಸ್ಪರ್ಧಿಸುವ ಬಗ್ಗೆ ಕಾರ್ಯಕರ್ತರು ಒತ್ತಾಯ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಒಬ್ಬ ವ್ಯಕ್ತಿ ಯಾವುದೇ ಒಂದು ಭಾಗದಲ್ಲಿ ಸ್ಪರ್ಧೆ ಮಾಡುವುದರಿಂದ ಲಾಭವಾಗುತ್ತದೆ, ನಷ್ಟವಾಗುತ್ತದೆ ಪ್ರಶ್ನೆಯಲ್ಲ, ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪಕ್ಷ, ಇಲ್ಲಿ ವ್ಯಕ್ತಿ ಪೂಜೆ ನಡೆಯಲ್ಲ, ಎಲ್ಲರೂ ಒಗ್ಗಟ್ಟಾಗಿ, ಹಿರಿಯರ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ ಶ್ರಮಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವುದೇ ಎಲ್ಲರ ಗುರಿ" ಎಂದರು.

 ಬೇರೆ ಪಕ್ಷಗಳಿಗಿಂತ ಬಿಜೆಪಿ ಮೇಲೆ ಜನತೆ ಒಲವು

ಬೇರೆ ಪಕ್ಷಗಳಿಗಿಂತ ಬಿಜೆಪಿ ಮೇಲೆ ಜನತೆ ಒಲವು

ಕುಮಾರಸ್ವಾಮಿ ಪಂಚರತ್ನ ಯೋಜನೆ ಯಾತ್ರೆ ಬಗ್ಗೆ ವ್ಯಂಗ್ಯ ಮಾಡಿದ ವಿಜಯೇಂದ್ರ, "ಪಾಪ ಚುನಾವಣೆ ಬಂದಾಗ ಎಲ್ಲ ರಾಜಕೀಯ ಪಕ್ಷದವರು ಅವರದ್ದೇ ಆದ ತಂತ್ರಗಳನ್ನು ಮಾಡುತ್ತಾರೆ, ರಾಜ್ಯದ ಜನರಂತೂ ಬಹಳ ಪ್ರಜ್ಞಾವಂತರಿದ್ದಾರೆ‌‌. ಯಾರನ್ನು ಆಯ್ಕೆ ಮಾಡಿದರೆ ರಾಜ್ಯದ ಅಭಿವೃದ್ಧಿ ಆಗುತ್ತದೆ ಎನ್ನುವುದನ್ನು ತಿಳಿದಿದ್ದಾರೆ. ದೇಶದ ಜನ ನರೇಂದ್ರ ಮೋದಿಜಿಯಂತಹ ದೃಢ ನಾಯಕತ್ವದ ಬಗ್ಗೆ ವಿಶ್ವಾಸವಿಟ್ಟುಕೊಂಡಿದೆ, ಕರ್ನಾಟಕದಲ್ಲೂ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರದಲ್ಲಿರಬೇಕು ಎಂಬುದು ಜನರ ಆಸೆ. ಚುನಾವಣೆ ಬಂದಂತಹ ಸಂದರ್ಭದಲ್ಲಿ ತಂತ್ರ -ಕುತಂತ್ರ ಸಹಜ, ಆದರೆ ಬಿಜೆಪಿ ಗೆಲುವು ಖಚಿತ" ಎಂದು ಹೇಳಿದರು.

 ಸಿದ್ದರಾಮಯ್ಯ ನಿಂತರೂ ಬಿಜೆಪಿಗೆ ಗೆಲುವು

ಸಿದ್ದರಾಮಯ್ಯ ನಿಂತರೂ ಬಿಜೆಪಿಗೆ ಗೆಲುವು

ಇಳಕಲ್‌ಗೆ ಹೋಗುವಾಗ ದಾರಿ ಮಧ್ಯೆ ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದ ಜೊತೆಗೆ ಮಾತನಾಡುವ ವೇಳೆ, " ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಜಯಬೇರಿ ಬಾರಿಸಲಿದೆ, ಕುಷ್ಟಗಿ ವಿಧಾನ ಸಭಾ ಕ್ಷೇತ್ರದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ, ಇಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಮಾಡಿದರೂ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದ ಫಲಿತಾಂಶದಲ್ಲಿ ಏನೋ ಹೆಚ್ಚು ಕಡಿಮೆ ಆಯ್ತು, ಈ ಬಾರಿ ಹಾಗಾಗಲ್ಲ" ಎಂದು ವಿಜೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

English summary
Yediyurappa has already made it clear that he is staying out of electoral politics. That's why He mentioned my name on the insistence of the people of the constituency, Karnataka BJP Vice President B. Y. Vijayendra said. He visited Ilakal Nagar in the Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X