ಬಾಗಲಕೋಟೆ: ಗರ್ಭಿಣಿ ಚೈತ್ರಾ ಪಾಲಿಗೆ ದೇವರಾದ ಡಾ. ಮನೋಹರ್

Posted By: ನಮ್ಮ ಪ್ರತಿನಿಧಿ
Subscribe to Oneindia Kannada
   ದೇವರಂತೆ ಬಂದು ಗರ್ಭಿಣಿಯ ಜೀವ ಉಳಿಸಿದ ಬಾಗಲಕೋಟೆಯ ಖಾಸಗಿ ವೈದ್ಯ | Oneindia Kannada

   ಬಾಗಲಕೋಟೆ, ನವೆಂಬರ್ 03:ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಬಿಸಿ ಬಾಗಲಕೋಟೆಗೆ ಬಲವಾಗಿ ತಟ್ಟಿದೆ. ಇಂಥ ಸಂದರ್ಭದಲ್ಲಿ ನೆರವಿಗೆ ಬರ ಬೇಕಿದ್ದ ಸರ್ಕಾರಿ ವೈದ್ಯರು ಕೈ ಚೆಲ್ಲಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಪಾಲಿಗೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಮನೋಹರ್ ಅವರು ದೇವರಂತೆ ಬಂದು ರಕ್ಷಿಸಿದ್ದಾರೆ.

   In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ

   ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದ ಗರ್ಭಿಣಿ ಚೈತ್ರಾ ಪವಾರ ಅವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆ ವೈದ್ಯರು ನಿರಾಕರಿಸಿದ್ದಾರೆ. ಗರ್ಭಿಣಿ ಪರಿಸ್ಥಿತಿ ವಿಷಮವಾಗಿದ್ದು, ಉತ್ತಮ ಸೌಲಭ್ಯವುಳ್ಳ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. 108 ಆಂಬುಲೆನ್ಸ್ ನಲ್ಲಿ ಚೈತ್ರಾರನ್ನು ಕೊನೆಗೆಇಳಕಲ್ ನಗರದಲ್ಲಿ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತು.

   ಬೈಕ್ ಸ್ಕಿಡ್ ಆಗಿ ಬಿದ್ದವನಿಗೆ ಕ್ಯಾರೆ ಅನ್ನದ ವೈದ್ಯರು

   ಗರ್ಭದಲ್ಲಿದ್ದ ಮಗುವಿನ ಕಾಲು ಮುಂದೆಬಂದ ಸ್ಥಿತಿಯಲ್ಲಿ ನರಳಾಡುತ್ತಿದ್ದ ಗರ್ಭಿಣಿ ಚೈತ್ರಾರ ಚಿಕಿತ್ಸೆಗೆ ತಕ್ಷಣವೇ ಸಂಶೋಧನಾ ವಿದ್ಯಾರ್ಥಿಗಳು, ನರ್ಸ್ ಗಳು ಮುಂದಾಗಿದ್ದಾರೆ. ವಿಷಯ ತಿಳಿದ ಡಾ. ಮನೋಹರ್ ಅವರು ತಕ್ಷಣವೇ ಆಪರೇಷನ್ ಥೇಟರ್ ಗೆ ಧಾವಿಸಿ ಬಂದಿದ್ದಾರೆ. ನಾರ್ಮಲ್ ಹೆರಿಗೆಯಾಗಿದ್ದು, ಗಂಡು ಮಗು ಜನನವಾಗಿದೆ.

   Bagalkot: Private Hospital Doctors Strike, Dr Manohar saves Pregnant

   ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಚಿಕ್ಕಕೊಡಗಲಿ ತಾಂಡಾ ನಿವಾಸಿ ಚೈತ್ರಾ ಅವರು ಬೆಳಗ್ಗೆ 10.30ಕ್ಕೆ ಆಸ್ಪತ್ರೆಗೆ ಬಂದರು, ಸ್ವಲ್ಪ ಕಷ್ಟದ ಕೇಸ್ ಇದಾಗಿದ್ದು, ನಾರ್ಮಲ್ ಡಿಲೆವರಿಯಾಗಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಡಾ. ಮನೋಹರ್ ಅವರು ಪ್ರತಿಕ್ರಿಯಿಸಿದ್ದಾರೆ.

   LIVE: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕು

   ವಿಷಮ ಪರಿಸ್ಥಿತಿಯಲ್ಲಿದ್ದ ತಾಯಿ ಮಗುವನ್ನು ರಕ್ಷಿಸಿ, ನಾರ್ಮಲ್ ಹೆರಿಗೆಯಾಗಲು ನೆರವಾದ ಡಾ. ಮನೋಹರ್ ಹಾಗೂ ತಂಡಕ್ಕೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು, ಮೊದಲ ಎರಡು ಮಗು ಕಳೆದುಕೊಂಡಿದ್ದ ಚೈತ್ರಾಳನ್ನು ನೋಡಿಕೊಳ್ಳಲು ಯಾರು ಇಲ್ಲ, ಮೂರನೇ ಮಗು ಕೂಡಾ ಹೆರಿಗೆ ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ, ದೇವರಂತೆ ಬಂದು ಡಾಕ್ಟರ್ ಕಾಪಾಡಿದರು, ಮಗುವಿಗೆ ಡಾಕ್ಟರ್ ಹೆಸರು ಇಡುತ್ತೇವೆ ಎಂದು ಚೈತ್ರಾ ಅವರ ಸಂಬಂಧಿ ಸುರೇಶ್ ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Bagalkot: Private Hospital Doctor Strike, Dr Manohar of Kumareshwar private hospital saves a Pregnant, helps her give birth to a baby boy.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ