ಅಣ್ಣಾ ಹೋರಾಟ ಬೆಂಬಲಿಸಿ ಬಾಗಲಕೋಟೆಯಲ್ಲಿ ಸತ್ಯಾಗ್ರಹ
ಬಾಗಲಕೋಟೆ, ಮಾರ್ಚ್ 23: ಈಗಾಗಲೇ ಅನುಮೋದನೆಗೊಂಡ ಲೋಕಪಾಲ,ಲೋಕಾಯುಕ್ತ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಅಣ್ಣಾ ಹಜಾರೆಯವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಅಣ್ಣಾ ಬೆಂಬಲಿಗರು ಬಾಗಲಕೋಟೆಯ ಜಿಲ್ಲಾ ಆಡಳಿತ ಭವನದ ಎದುರು ಸತ್ಯಾಗ್ರಹ ನಡೆಸುತ್ತಿದ್ದಾರೆ.
ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿರುವ ಅಣ್ಣಾ ಬೆಂಬಲಿಗರು ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕೃಷಿ ಇಳುವರಿಗೆ ಖರ್ಚುವೆಚ್ಚ ಮೌಲ್ಯ ಆಧರಿಸಿ ಶೇ.50 ರಷ್ಟು ಬೆಂಬಲ ಬೆಲೆ ದೊರಕುವಂತಾಗಬೇಕು. 60 ವಯಸ್ಸಿನ ರೈತರಿಗೆ ಹಾಗೂ ಬಲಹೀನರಿಗೆ ರೂ.500 ಮಾಸಾಶಾನ ಪಿಂಚಣಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿರುವ ಮನವಿಯನ್ನು ಜಿಲ್ಲಾ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಿಸಲಾಯಿತು.












Click it and Unblock the Notifications