Aurad Elections: ಔರಾದ್ ಬಿಜೆಪಿ ಕೋಟೆಯನ್ನ ಭೇದಿಸಲು ಕಾಂಗ್ರೆಸ್ ತಯಾರಿ! ಹ್ಯಾಟ್ರಿಕ್ ಗೆಲುವು ಯಾರಿಗೆ?
ಬೀದರ್ ಜಿಲ್ಲೆಯ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರ ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯದ್ದೇ ಪ್ರಾಬಲ್ಯ ಬಿಜೆಪಿಯ ಈ ಭದ್ರಕೋಟೆ ಭೇದಿಸಲು ಕಾಂಗ್ರೆಸ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈಗಾಗಲೇ ಕಳೆದ 15 ವರ್ಷಗಳಿಂದ ಪಕ್ಷದಲ್ಲಿ ಹಿಡಿತ ಸಾಧಿಸಿ, ಬಿಜೆಪಿ ಪಕ್ಷವನ್ನ ಔರಾದ್ ನಲ್ಲಿ ನಲೆಗೊಳಿಸಿರುವ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಾಲಿ ಶಾಸಕ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಔರಾದ್ ಕ್ಷೇತ್ರದಲ್ಲಿ ಪ್ರಭು ಚವ್ಹಾಣ್ ಹೊರತು ಪಡಿಸಿದರೇ ಟಿಕೆಟ್ ಗಾಗಿ ಪೈಪೋಟಿ ಕೊಡುವ ನಾಯಕರು ಯಾರು ಇಲ್ಲದ ಕಾರಣ ಈ ಬಾರಿಯೂ ಪ್ರಭು ಚವ್ಹಾಣ್ ಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಇನ್ನೂ ಬಿಜೆಪಿ ಸಂಕಲ್ಪ ಯಾತ್ರೆಯಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಭು ಚವ್ಹಾಣ್ ಅವರಿಗೆ ಮತ್ತೆ ಆಶೀರ್ವಾದ ಮಾಡುವಂತೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ಅವರೇ ಅಭ್ಯರ್ಥಿ ಎನ್ನುವುದನ್ನು ಪರೋಕ್ಷವಾಗಿ ಘೋಷಿಸಿದ್ದಾರೆ.
ಇತ್ತ ಬಿಜೆಪಿ ಕೋಟೆಯನ್ನ ಭೇದಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದ್ದೆ, ಈ ಬಾರಿ ಪ್ರಭು ಚವ್ಹಾಣ್ ಅವರನ್ನ ಸೋಲಿಸಿ ಕ್ಷೇತ್ರವನ್ನ ತನ್ನ ಧಕ್ಕೆಗೆ ವಶಪಡಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ತಯಾರಿ ನಡೆಸಿದೆ. ಅದರೆ, ಇದುವರೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಮಾತ್ರ ಘೋಷಣೆಯಾಗಿಲ್ಲ.
ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಹೆಚ್ಚು ಪೈಪೋಟಿ ಇದೆ. ಟಿಕೆಟ್ ಬಯಸಿ 27 ನಾಯಕರು ಅರ್ಜಿ ಸಲ್ಲಿಸಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ 64,152 ಮತ ಪಡೆದ ವಿಜಯಕುಮಾರ ಗೌಡಾಳೆ ಅವರು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು. ಆದರೆ, ಅವರ ಆರೋಗ್ಯ ಸರಿ ಇಲ್ಲದ ಕಾರಣ ಇನ್ನಷ್ಟು ಜನ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಔರಾದ್ ಮೀಸಲು ಕ್ಷೇತ್ರ ಇರುವುದರಿಂದ ಇಲ್ಲಿ ಪರಿಶಿಷ್ಟ ಜಾತಿ ಎಡ ಬಲ ನಡುವೆಯೇ ಟಿಕೆಟ್ ಪೈಪೋಟಿ ಹೆಚ್ಚಿದೆ.

ಪರಿಶಿಷ್ಟ ಜಾತಿ (ಬಲ)ದಿಂದ ಶಂಕರರಾವ್ ದೊಡ್ಡಿ, ಡಾ.ಭೀಮಸೇನರಾವ್ ಸಿಂಧೆ, ಕೆ.ಪುಂಡಲಿಕರಾವ್, ಲಕ್ಷ್ಮಣರಾವ್ ಬುಳ್ಳಾ, ಶಿವಮೂರ್ತಿ ಸುಬಾನೆ ಸೇರಿದಂತೆ ಅನೇಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪರಿಶಿಷ್ಟ ಜಾತಿಯ (ಎಡ) ಬ. ಲಕ್ಷ್ಮಣರಾವ್ ನೋ ರಳ್ಳಿಕರ್, ವಿಜಯ ಕುಮಾರ ಗೌಡಾಳೆ, ಒಂಟಿ ದರಬಾರೆ, ಗೋಪಿಕೃಷ್ಣ ಸುಧಾಕರ ಕೊಳ್ಳೂರ್ ಟಿಕೆಟ್ ಗಿಟ್ಟಿಸಿಕೊಳ್ಳಲು ಲಾಬಿ ನಡೆಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮೂಲಕ ಟಿಕೆಟ್ ಗಾಗಿ ಸಾಕಷ್ಟು ಜನರು ಲಾಭಿ ನಡೆಸಿದ್ದು, ವಡೆಯರ್ ಸಮಾಜದ ರಾಮಣ್ಣ ವಡೆಯ, ಬಂಜಾರಾ ಸಮಾಜದ ಜೈಸಿಂಗ್ ರಾಠೋಡ್, ಸಿದ್ಧಾರ್ಥ ರಾಠೋಡ್ ಅವರು ಟಿಕೆಟ್ ಕೇಳುತ್ತಿದ್ದಾರೆ. ಈ ಬಾರಿ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಒತ್ತಡ ಹೆಚ್ಚಿದ್ದು, ವರಿಷ್ಠರಿಗೆ ಟಿಕೆಟ್ ಹಂಚಿಕೆ ತಲೆನೋವಾಗಿ ಪರಿಣಮಿಸಿದೆ ಇಲ್ಲಿ ಎಲ್ಲರಿಗೂ ಟಿಕೆಟ್ ಕೊಡಲಾಗದು. ಒಬ್ಬರಿಗೆ ಕೊಡುತ್ತೇವೆ. ಎಲ್ಲರೂ ಸೇರಿ ಚುನಾವಣೆ ಎದುರಿಸಿ ಈ ಬಾರಿ ಪ್ರಭು ಚವ್ಹಾಣ್ ಅವರನ್ನು ಸೋಲಿಸಬೇಕು ಎಂದು ಪ್ರಜಾ ಧ್ವನಿ ಕಾರ್ಯ ಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕಾಂಕ್ಷಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಕಾಂಗ್ರೆಸ್ ನಾ ಹಿರಿಯ ನಾಯಕರು ಏನು ಎಚ್ಚರಿಕೆ ನೀಡಿದರು ಸಹ ಔರಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ 27 ಜನರು ಸಹ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದ್ದು, ಸ್ಥಳೀಯರಿಗೆ ಟಿಕೆಟ್ ನೀಡಿ ಎಂದು ಪಟ್ಟುಹಿಡಿದಿದ್ದಾರೆ.

ಇನ್ನೂ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪಣತೊಟ್ಟಿರುವ ಬಿಜೆಪಿ ಈ ಬಾರೀ ಹಾಲಿ ಶಾಸಕರಿರುವ ಕ್ಷೇತ್ರವನ್ನ ಗೆಲ್ಲುವ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಈ ಬಾರಿಯೂ ಗೆಲ್ಲಬೇಕು ಎನ್ನುವ ಛಲ ಹೊಂದಿರುವ ಸಚಿವ ಪ್ರಭು ಚವ್ಹಾಣ್ ಪ್ರತಿ ಹಳ್ಳಿ ಹಳ್ಳಿಯಲ್ಲೂ ಚುನಾವಣಾ ಪ್ರಚಾರವನ್ನ ಕೈಗೊಂಡಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಹಿಡಿದುಕೊಂಡು ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಇತ್ತ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠಾ ಮತ್ತು ಲಿಂಗಾಯತ ಮತ ಸೆಳೆಯುವ ನಿಟ್ಟಿನಲ್ಲೂ ಕಸರತ್ತು ನಡೆಸಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಪ್ರಭು ಚವಾಣ್ ಅವರು ಈ ಚುನಾವಣೆಯಲ್ಲಿ ಅಡಳಿತ ವಿರೋಧಿ ಅಲೆ, ಕೇಂದ್ರ ಸಚಿವ ಭಗವಂತ ಖೂಬಾ ಅವರ ನಡುವಿನ ವೈಮನಸ್ಸು, ಸ್ವಜಾತಿ ಪ್ರೇಮದ ಆರೋಪದಂತಹ ಅನೇಕ ಸಮಸ್ಯೆ ಸವಾಲು ಎದುರಿಸಬೇಕಾಗಿದೆ.
Aurad Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಪ್ರಭು ಚೌಹಾಣ್- (ಬಿಜೆಪಿ) | 75,061 | ವಿಜಯ್ ಕುಮಾರ್ (ಕಾಂಗ್ರೆಸ್) | 64,469 |
| 2013 | ಪ್ರಭು ಚೌಹಾಣ್- (ಬಿಜೆಪಿ) | 61,826 | ಧನಜಿ ಭೀಮ ಜಾಧವ್ (ಕೆಜೆಪಿ ) | 38,635 |
| 2008 | ಪ್ರಭು ಚೌಹಾಣ್ (ಬಿಜೆಪಿ) | 56,964 | ನರಸಿಂಗರಾವ್ ಸೂರ್ಯವಂಶಿ (ಕಾಂಗ್ರೆಸ್) | 29,186 |
ಸಚಿವ ಪ್ರಭು ಚವಾಣ ಮತ್ತು ಜೈ ಸಿಂಗ್ ರಾಥೋಡ್ ಒಂದೇ ಸಮುದಾಯಕ್ಕೆ ಸೇರಿದವರಲ್ಲಿ ಈ ಭಾರಿ ಪೈಪೋಟಿ ನಡೆಯಲಿದೆ. ಚವ್ಹಾಣ್ ಅವರ ವೋಟ್ ಬ್ಯಾಂಕ್ ಆಗಿದ್ದ ಲಿಂಗಾಯತ, ಮರಾಠಿ ಲಂಬಾಣಿಗೆ ಮತಗಳನ್ನು ಪಡೆಯಲು ರವಿ ಸ್ವಾಮಿ ಮತ್ತು ಜೈ ಸಿಂಗ್ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್ ಅಹಿಂದ ಮತಗಳ ಮೇಲೆ ಭರವಸೆ ಇಟ್ಟಿದೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ ಜೈಸಿಂಗ್ ಇವಾಗ ಜೆಡಿಎಸ್ ಪಕ್ಷವನ್ನು ಸೇರಿದ್ದು, ಜೆಡಿಎಸ್ ಪಕ್ಷದಿಂದ ಈ ಸಲ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಇತ್ತ ರಾಜ್ಯದಲ್ಲಿ ಈ ಬಾರಿ ಚುನಾವಣೆಗೆ ಆಮ್ ಆದ್ಮಿ ಪಕ್ಷವೂ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ದು, ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ ಔರಾದ್ ಕ್ಷೇತ್ರದಿಂದ ಬಾಬುರಾವ ಅಡ್ಕೆ ಅವರನ್ನ ಕಣಕ್ಕಿಳಿಸಿದೆ.
ಒಟ್ನಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರು ಹಾಲಿ ಶಾಸಕ ಹಾಗೂ ಸಚಿವ ಪ್ರಭು ಚವ್ಹಾನ್ ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಭರ್ಜರಿ ತಯಾರಿ ನಡೆಸಿದ್ದು, ಈ ಬಾರೀ ಔರಾದ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಹ್ಯಾಟ್ರಿಕ್ ಗೆಲುವು ಯಾರಿಗೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications