Arkalgud Elections:ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಯಾರತ್ತ ಮತದಾರರ ಒಲವು?
ಹಾಸನ, ಮಾರ್ಚ್ 25: ಹಾಸನ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು ಅರಕಲಗೂಡು. ಅರೆಕಲ್ಲುಗಳಿಂದ ಕೂಡಿರುವುದರಿಂದ ಈ ಊರಿಗೆ ಅರಕಲಗೂಡು ಎನ್ನುವ ಹೆಸರು ಬಂದಿದೆ. ಈ ಹಿಂದೆ ಅರ್ಕಾಪುರಿ ಎಂಬ ಹೆಸರು ಕಾಲ ಕಳೆದಂತೆ ಅರ್ಕಾಪುರಿ ಅರೆಕಲ್ಲು ಆಗಿ ನಂತರ ಅರಕಲಗೂಡು ಆಗಿ ಬದಲಾಗಿದೆ ಎನ್ನುವ ಪ್ರತೀತಿ ಇದೆ.
ಅರೆಮಲೆನಾಡು ಪ್ರದೇಶವಾದ ಅರಕಲಗೂಡು ಕನ್ನಡದ ಅಧ್ವರ್ಯು ಅ.ನ. ಕೃಷ್ಣರಾಯರ ಹುಟ್ಟೂರು.ಅರಕಲಗೂಡಿನಿಂದ 20 ಕಿಲೋ ಮೀಟರ್ ದೂರದಲ್ಲಿ ಇರುವ ರಾಮನಾಥಪುರ ದೇವಸ್ಥಾನವನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತದೆ. 11ನೇ ಶತಮಾನದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳು ಅರಕಲಗೂಡಿನಲ್ಲಿದೆ.

ಅರಕಲಗೂಡು ಕ್ಷೇತ್ರದಲ್ಲಿ ಕಾವೇರಿ ಹಾಗೂ ಹೇಮಾವತಿ ಕಾವೇರಿ ಹಾಗೂ ಹೇಮಾವತಿ. ಜೊತೆಗೆ ಹಾರಂಗಿ ಜಲಾಶಯದಿಂದ ಕೃಷಿ ಕ್ಷೇತ್ರದ ರೈತರ ಜೀವನಕ್ಕೆ ಆಸರೆಯಾಗಿದೆ. ಅರಕಲುಗೂಡು, ಮಲೆನಾಡು, ಅರೆ ಮಲೆನಾಡು, ಬಯಲುಸೀಮೆಯ ಪ್ರದೇಶಗಳನ್ನು ಹೊಂದಿದ್ದು, ಬೆಳೆ ಅಡಿಕೆ, ತೆಂಗು, ತಂಬಾಕು ಹಾಗೂ ಭತ್ತ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.
ಅರಕಲಗೂಡು ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಹೈವೊಲ್ಟೇಜ್ ಕ್ಷೇತ್ರವಾಗುದರಲ್ಲಿ ಎರಡು ಮಾತಿಲ್ಲ. ವ್ಯಕ್ತಿಗತ ರಾಜಕೀಯಕ್ಕೆ ಮನ್ನಣೆ ಸಿಗುತ್ತಿರುವ ಅರಕಲಗೂಡು ವಿಧಾನಸಭಾ ಚುನಾವಣೆಯ ರಾಜಕೀಯ ಪರಿಚಯ ಇಲ್ಲಿದೆ.

ಅರಕಲಗೂಡು ರಾಜಕೀಯ ಇತಿಹಾಸ
ಅರಕಲಗೂಡು ಕ್ಷೇತ್ರ ಮೊಟ್ಟ ಮೊದಲ ಶಾಸಕ ಪುಟ್ಟಸ್ವಾಮಿ ಗೌಡ, ಮೊಟ್ಟ ಮೊದಲ ಅಧಿಕಾರ ಹಿಡಿದ ಹಿಡಿದ ಪಕ್ಷ ಕಾಂಗ್ರೆಸ್. ಜಿ.ಎ. ತಿಮ್ಮಪ್ಪಗೌಡ ಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾಗಿದ್ದರೆ, ಎಚ್.ಎನ್. ನಂಜೇಗೌಡ ಎರಡು ಬಾರಿ ಶಾಸಕರಾಗಿದ್ದರು. ಕೆ.ಬಿ. ಮಲ್ಲಪ್ಪ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದರು.
1989ರಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದ ಎ.ಟಿ. ರಾಮಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. 1994ರ ಚುನಾವಣೆಯಲ್ಲೂ ಎರಡನೇ ಬಾರಿ ಶಾಸರಾಗಿ ಆಯ್ಕೆಯಾಗುತ್ತಾರೆ. ಆದರೆ 1999ರ ಚುನಾವಣೆಯಲ್ಲಿ ಎ.ಮಂಜು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಕ್ಷೇತ್ರದ ಅಧಿಕಾರವನ್ನು ಪಡೆಯುತ್ತಾರೆ.

ಸೋಲಿನ ಬಳಿಕ ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು, 2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇತ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಎ.ಮಂಜು 2008 ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸತತ ಎರಡು ಬಾರಿ ಶಾಸಕರಾಗುತ್ತಾರೆ. ಈ ಹಾವು ಏಣಿ ಆಟ ಮುಂದುವರಿದು 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಫರ್ಧಿಸಿ ಎ.ಟಿ.ರಾಮಸ್ವಾಮಿ ಶಾಸಕರಾಗುತ್ತಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪಕ್ಷಾಂತರ ಸರ್ವೇ ಸಾಮಾನ್ಯವಾಗಿದ್ದು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದ ಚಿಹ್ನೆಯಲ್ಲಿ ಶಾಸಕರಾಗಿದ್ದ ಎ.ಮಂಜು ಸದ್ಯ ಜೆಡಿಎಸ್ ಸೇರಿದ್ದಾರೆ. ಇನ್ನು ಜೆಡಿಎಸ್‌ನಿಂದ ಹೊರಗುಳಿದ ಎ.ಟಿ. ರಾಮಸ್ವಾಮಿ ಇನ್ನೂ ಯಾವ ಪಕ್ಷದತ್ತ ಒಲವು ತೋರದೆ ಅತಂತ್ರರಾಗಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಕೃಷ್ಣೇಗೌಡರು ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಪ್ರಚಾರ ಆರಂಭಿಸಿದ್ದಾರೆ.
ಅರಕಲಗೂಡು ಕ್ಷೇತ್ರದ ಮತದಾರರ ವಿವರ
ಅರಕಲಗೂಡು ಕ್ಷೇತ್ರದಲ್ಲಿ ಜಾತಿ ಧರ್ಮದ ಆಧಾರದಲ್ಲಿ ಚುನಾವಣೆಯ ಗೆಲುವು ನಿರ್ಧರಿಸಲು ಸಾಧ್ಯವಿಲ್ಲ. ವ್ಯಕ್ತಿಗತ ಚುನಾವಣೆಯೇ ನಡೆಯುವ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ 65 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತಗಳು, 45 ಸಾವಿರದಷ್ಟು ದಲಿತ ಸಮಾಜದ ಮತಗಳು, 35 ಸಾವಿರ ಕುರುಬರ ಮತಗಳು ಹಾಗೂ 20 ಸಾವಿರ ಲಿಂಗಾಯುತ ಮತಗಳು ಗೆಲುವಿನ ನಿರ್ಣಾಯಕ ಮತಗಳಾಗಿವೆ.
Arkalgud Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಟಿ ರಾಮಸ್ವಾಮಿ ಜೆಡಿಎಸ್ | 85,064 | ಎ ಮಂಜು ಕಾಂಗ್ರೆಸ್ | 74,411 |
| 2013 | ಎ ಮಂಜು ಕಾಂಗ್ರೆಸ್ | 61,369 | ಎಟಿ ರಾಮಸ್ವಾಮಿ ಜೆಡಿಎಸ್ | 52,575 |
| 2008 | ಎ ಮಂಜು ಕಾಂಗ್ರೆಸ್ | 68,257 | ಎಟಿ ರಾಮಸ್ವಾಮಿ ಜೆಡಿಎಸ್ | 59,217 |
2018 ಅರಕಲಗೂಡು ವಿಧಾನಸಭಾ ಚುನಾವಣಾ ಫಲಿತಾಂಶ
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಟಿ ರಾಮಸ್ವಾಮಿ 85,064 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಎ.ಮಂಜು 74,411 ಮತಗಳನ್ನು ಪಡೆದು 10,653 ಅಂತರದಲ್ಲಿ ಸೋಲು ಕಂಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಯೋಗ ರಮೇಶ್ 22,679 ಮತಗಳನ್ನು ಪಡೆದಿದ್ದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications