ವಿಡಿಯೋ:ಸೆಲ್ಫೀ ತೆಗೆದುಕೊಳ್ಳೋಕೆ ಬಂದ್ರೆ ಹರಿಯಾಣ ಸಿಎಂ ಹೀಗೆ ಮಾಡೋದಾ?

ಕರ್ನಲ್, ಜೂನ್ 6: ಕೋಪಕ್ಕೆ ಹೆಸರುವಾಸಿಯಾಗಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತನ್ನೊಟ್ಟಿಗೆ ಸೆಲ್ಫೀ ತೆಗೆಯಲು ಬಂದ ಯುವಕನನ್ನು ಕೋಪದಿಂದ ತಳ್ಳಿ ಮುಂದೆ ಹೋಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಇದು ಮೊದಲಲ್ಲ ಈಗಾಗಲೇ ಹಲವು ಬಾರಿ ತಮ್ಮ ಕೋಪವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ.

Who tries to take a selfie Haryana CM pushes aside

ಅಂತಹ ಹುದ್ದೆಯಲ್ಲಿದ್ದರೂ ಸಾರ್ವಜನಿಕರಿಂದಲೇ ಆಯ್ಕೆಯಾಗಿ ಆ ಸ್ಥಾನ ತಲುಪಿದ್ದರೂ ಕೂಡ ಒಂದು ಫೋಟೊಗಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿಬರುತ್ತಿವೆ.

ಫೆಬ್ರವರಿಯಲ್ಲಿ ಕೂಡ ಇಂಥದ್ದೇ ಒಂದು ವರ್ತನೆಯಿಂದ ಸಿಎಂ ಸುದ್ದಿ ಮಾಡಿದ್ದರು. ತಮ್ಮ ಕಷ್ಟ ಹೇಳಿಕೊಳ್ಳಲು ಆಗಮಿಸಿದ್ದ ವೃದ್ಧ ದಂಪತಿ ಮೇಲೆ ಕೂಗಾಡಿ ವಿವಾದ ಸೃಷ್ಟಿಸಿದ್ದರು.

ಕರ್ನಲ್​ಗೆ ಆಗಮಿಸಿದ ಮನೋಹರ್ ಲಾಲ್​ ಖತ್ತರ್​ ಅವರು ತಮ್ಮ ಬೆಂಬಲಿಗರೊಂದಿಗೆ ಬರುತ್ತಿರುವಾಗ ಎದುರಿಗೆ ಬಂದ ಯುವಕನೋರ್ವ ಮೊದಲು ಅವರ ಕಾಲು ಮುಟ್ಟಿ ನಮಸ್ಕರಿಸಿ, ನಂತರ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ಅದಕ್ಕೆ ಅವಕಾಶ ಕೊಡದ ಸಿಎಂ, ಆ ಯುವಕನ ಕೈಯನ್ನು ಬಲವಾಗಿ ತಳ್ಳಿದ್ದಲ್ಲದೆ, ಆ ಕಡೆ ಹೋಗು ಎಂದು ಗದರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+