Get Updates
Get notified of breaking news, exclusive insights, and must-see stories!

ಅನೈತಿಕ ಸಂಬಂಧ ಹೊಂದಿದ್ದ ಶಂಕೆ, ನಟಿಯನ್ನು ಕೊಂದ ಪತಿ

ಅಮೃತ್ ಸರ್, ಫೆಬ್ರವರಿ 15: ಪಂಜಾಬಿ ನಟಿಯೊಬ್ಬರ ಬರ್ಬರ ಹತ್ಯೆಯಾಗಿದೆ. ಆಕೆಯ ಪತಿಯ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ. ಅನೈತಿಕ ಸಂಬಂಧ ಹೊಂದಿರಬಹುದು ಎಂಬ ಶಂಕೆಯಿಂದ ಪತ್ನಿಯನ್ನು ಕೊಲ್ಲಲು ಉತ್ತರಾಖಂಡ್ ನ ನೈನಿತಾಲ್ ಜಿಲ್ಲೆಯ ಹಳೆ ಗೆಳೆಯನ ನೆರವನ್ನು ಪಡೆದಿದ್ದ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತ ಮಹಿಳೆಯನ್ನು 29 ವರ್ಷ ವಯಸ್ಸಿನ ಅನಿತಾ ಸಿಂಗ್ ಎಂದು ಗುರುತಿಸಲಾಗಿದೆ. ಆಕೆಯನ್ನು ಆಕೆಯ ಪತಿ ರವೀಂದ್ರ ಪಾಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನೈನಿತಾಲ್ ಹಿರಿಯ ಎಸ್ಪಿ ಎಸ್ಕೆ ಮೀನಾ ಹೇಳಿದ್ದಾರೆ.

ಪಂಜಾಬ್ ನ ಫಿರೋಜೆಪುರ್ ನ ನಿವಾಸಿಯಾಗಿರುವ ರವೀಂದ್ರ ಪಾಲ್ ಅವರು ತಮ್ಮ ಪತ್ನಿ ಅನಿತಾರನ್ನು ಕಾಲಧುಂಗಿಗೆ ಕರೆದುಕೊಂಡು ಬಂದಿದ್ದಾನೆ. ನನ್ನ ಗೆಳೆಯ ಕುಲದೀಪ್ ಗೆ ಬಾಲಿವುಡ್ ನಲ್ಲಿ ಒಳ್ಳೆ ಸಂಪರ್ಕವಿದೆ, ನಿನ್ನ ವೃತ್ತಿ ಬದುಕಿಗೆ ನೆರವಾಗುತ್ತಾನೆ ಎಂದಿದ್ದಾನೆ.

Punjab TV Actress Killed By Husband Over Alleged Affair: Police

ದೆಹಲಿ ಮೂಲದ ಕುಲದೀಪ್ ಹಾಗೂ ರವೀಂದ್ರ ಪಾಲ್ ಜೊತೆಗೂಡಿ ಅನಿತಾ ರೆಸ್ಟೊರೆಂಟ್ ಗೆ ತೆರಳಿದ್ದಾರೆ. ತಂಪು ಪಾನೀಯದಲ್ಲಿ ನಶೆ ಏರುವ ಪುಡಿ ಹಾಕಿ, ಪ್ರಜ್ಞೆ ತಪ್ಪುವಂತೆ ಮಾಡಲಾಗಿದೆ. ನಂತರ ಅನಿತಾಳ ಕತ್ತು ಸೀಳಲಾಗಿದೆ. ಮೃತದೇಹವನ್ನು ಸುಟ್ಟು ಹಾಕಲಾಗಿದ್ದು, ಯಾವುದೆ ಸಾಕ್ಷ್ಯ ಸಿಗದಂತೆ ಎಚ್ಚರವಹಿಸಿದ್ದಾರೆ.

ಆದರೆ, ರೆಸ್ಟೋರೆಂಟ್ ಗೆ ಹೋಗಿ ಬಂದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ನೆರವಿನಿಂದ ಪೊಲೀಸರು ಕಾಲಧುಂಗಿ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಹೆಣ ಸುಟ್ಟಿರುವ ಕುರುಹುಗಳು ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೆ ಕಳಿಸಲಾಗಿದೆ.

"ಅನಿತಾ ಮೇಲೆ ಸಂಶಯ ಮೂಡಿದ್ದರಿಂದ ರವೀಂದ್ರ ಕೊಲೆ ಸಂಚು ರೂಪಿಸಿದ್ದ, ನಾನು ಅವನಿಗೆ ನೆರವಾದೆ" ಎಂದು ವಿಚಾರಣೆ ವೇಳೆ ಕುಲದೀಪ್ ತಪ್ಪೊಪ್ಪಿಕೊಂಡಿದ್ದಾನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+