ಪಂಜಾಬಿನಲ್ಲಿ ಮಹಿಳಾ ತಪಾಸಣಾಧಿಕಾರಿಯ ಬರ್ಬರ ಹತ್ಯೆ
ಚಂಡಿಗಢ, ಮಾರ್ಚ್ 30: ಪಂಜಾಬಿನ ಖಾರರ್ ಎಂಬಲ್ಲಿ ಡ್ರಗ್ ಇನ್ಸ್ ಪೆಕ್ಟರ್(ಔಷಧ ತಪಾಸಣಾಧಿಕಾರಿ) ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನೆಹಾ ಶೌರಿ ಎಂಬ ಮಹಿಳೆ ಖಾರರ್ ನ ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೋರೇಟರಿಯಲ್ಲಿ ಝೋನಲ್ ಲೈಸೆನ್ಸಿಂಗ್ ಆಫೀಸರ್ ಆಗಿದ್ದರು. ಆಕೆ ಶುಕ್ರವಾರ ತಮ್ಮ ಕಚೇರಿಯಲ್ಲಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಬಂದು ಆಕೆಯ ಮೇಲೆ ಎರಡು ಬಾರಿ ಗುಂಡುಹಾರಿಸಿದ್ದರು.
ಪರಿಣಾಮ ನೇಹಾ ಅವರು ಸ್ಥಳದಲ್ಲೇ ಮೃತರಾದರು. ನೇಹಾ ಅವರಿಗೆ ಗುಂಡಿಕ್ಕಿದ ಆರೋಪಿ, ನಂತರ ತಾವೂ ಗುಂಡಿಕ್ಕಿಕ್ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರಿಂದ ಅವರು ಬದುಕುಳಿದಿದ್ದಾರೆ.

ಆರೋಪಿಗೆ ಚಂಡಿಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಚ್ಚಿನ ತನಿಖೆ ನಡೆಯಬೇಕಿದೆ.
ವೃತ್ತಿಗೆ ಸಂಬಂಧಿಸಿದ ವೈಮನಸ್ಯದಿಂದ ಈ ಘಟನೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಅಭಿಪ್ರಾಯ ಪಡಲಾಗಿದ್ದು, ಕೂಲಂಕಷವಾಗಿ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ತಪಾಸಣಾಧಿಕಾರಿಯ ಕೊಲೆಗೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆ, ತನಿಖೆ ನಡೆಯಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶಿಸಿದ್ದು, ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತೆ ಹೇಳಿದ್ದಾರೆ.












Click it and Unblock the Notifications