ಲುಧಿಯಾನ ಜೈಲಿನಲ್ಲಿ ಭಾರೀ ಹೊಡೆದಾಟ; ಕೈದಿ ಸಾವು, 35 ಮಂದಿಗೆ ಗಾಯ

ಲುಧಿಯಾನ (ಪಂಜಾಬ್), ಜೂನ್ 27: ಲುಧಿಯಾನದ ಸೆಂಟ್ರಲ್ ಜೈಲಿನಲ್ಲಿ ಗುರುವಾರ ಗ್ಯಾಂಗ್ ಸ್ಟರ್ ಗಳ ಎರಡು ಗುಂಪಿನ ಮಧ್ಯೆ ಹೊಡೆದಾಟ ನಡೆದು, ಒಬ್ಬ ಮೃತಪಟ್ಟು, ಮೂವತ್ತೈದು ಮಂದಿ ಗಾಯಗೊಂಡಿದ್ದಾರೆ. ಸನ್ನಿವೇಶವನ್ನು ಹತೋಟಿಗೆ ತರುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಈ ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಿ, ವರದಿ ನೀಡುವಂತೆ ಲುಧಿಯಾನದ ಡೆಪ್ಯೂಟಿ ಕಮಿಷನರ್ ಗೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅದೇಶ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡ್ರಗ್ ಕೇಸಿನ ಕೈದಿಯೊಬ್ಬ ಗುರುವಾರ ಪಟಿಯಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಸಮಸ್ಯೆ ಆರಂಭವಾಯಿತು. ಡಿಸಿಪಿ ಅಶ್ವನಿ ಕಪೂರ್ ಮಾತನಾಡಿ, ಸನ್ನಿ ಸೂದ್ ಅಸ್ವಸ್ಥನಾಗಿದ್ದ ಎಂದು ಬುಧವಾರ ಪಟಿಯಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಗುರುವಾರ ಮೃತಪಟ್ಟಿದ್ದ.

 Clashes in Ludhiana central jail; 1 died, 35 injured

ಸನ್ನಿ ಸೂದ್ ಸಾವನ್ನಪ್ಪಿದ ಸುದ್ದಿ ಗೊತ್ತಾಗುತ್ತಿದ್ದಂತೆ ಆತನ ಸಹಚರ ಗ್ಯಾಂಗ್ ಸ್ಟರ್ ಗಳು ಇತರ ಕೈದಿಗಳೊಂದಿಗೆ ರೊಳ್ಳೆ ತೆಗೆದಿದ್ದಾರೆ. ಸೂದ್ ನನ್ನು ಪೊಲೀಸರು 'ಕೊಲೆ ಮಾಡಿದ್ದಾರೆ' ಎಂದು ಆರೋಪ ಮಾಡಿದ್ದಾರೆ.

ಕಪೂರ್ ಹೇಳುವ ಪ್ರಕಾರ, ಸನ್ನಿವೇಶವನ್ನು ಹತೋಟಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಬಡಿದಾಟದ ವೇಳೆ ಒಬ್ಬ ಮೃತಪಟ್ಟು, ಎಸಿಪಿಯೊಬ್ಬರು ಸೇರಿದಂತೆ ಮೂವತ್ತೈದು ಮಂದಿ ಗಾಯಗೊಂಡಿದ್ದಾರೆ ಎಂದು ಅಶ್ವನಿ ಕಪೂರ್ ತಿಳಿಸಿದ್ದಾರೆ.

ಕಲ್ಲು ತೂರಾಟ ನಡೆಸುವ ಜತೆಗೆ, ಜೈಲು ಸೂಪರಿಂಟೆಂಡೆಂಟ್ ರ ಅಧಿಕೃತ ವಾಹನ ಹಾಗೂ ಜೈಲು ಅಡುಗೆ ಮನೆಯ ಒಂದು ಭಾಗಕ್ಕೆ ಬೆಂಕಿ ಹೊತ್ತಿಸಲಾಗಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು, ಜೈಲು ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಗಲಭೆಕೋರರ ಸಂಖ್ಯೆ ಮುನ್ನೂರರಷ್ಟಿದ್ದರು. ಜೈಲಿನ ಮುಖ್ಯ ದ್ವಾರವನ್ನು ಮುರಿಯಲು ಕೂಡ ಯತ್ನಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕೈದಿಯನ್ನು ಅಜಿತ್ ಬಾಬಾ ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+