ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ : ಗ್ರೆನೇಡ್ ದಾಳಿಕೋರರ ಸುಳಿವು ನೀಡಿದರೆ 50 ಲಕ್ಷ ರು!

|
Google Oneindia Kannada News

ಅಮೃತ್ ಸರ್, ನವೆಂಬರ್ 19: ಅಮೃತ್ ಸರದ ರಾಜಸಾನ್ಸಿಯ ನಿರಂಕಾರಿ ಭವನ್ ಪ್ರಾರ್ಥನಾ ಮಂದಿರದ ಮೇಲೆ ಇಬ್ಬರು ಆಗಂತುಕರು ಗ್ರೆನೇಡ್ ದಾಳಿ ನಡೆಸಿದ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ತನಿಖೆ ಆರಂಭಿಸಿದೆ.

ಭಾನುವಾರದಂದು ನಡೆದ ಈ ದಾಳಿಯಲ್ಲಿ ಮೂವರು ಮೃತಪಟ್ಟು, 20ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರು ಪರಿಹಾರ ಧನ ಘೋಷಿಸಿದ್ದಾರೆ.

ಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವುಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವು

ದಾಳಿಕೋರರ ಮಾಹಿತಿ ಕೋರಿಗೆ: ಇಬ್ಬರು ದಾಳಿಕೋರರ ಮಾಹಿತಿ ಕಲೆ ಹಾಕುತ್ತಿರುವ ಸ್ಥಳೀಯ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ. ಆದರೆ, ದೃಶ್ಯಗಳು ಸ್ಪಷ್ಟವಾಗಿಲ್ಲ. ಅವರು ಬಂದಿದ್ದ ಬೈಕಿಗೆ ನಂಬರ್ ಪ್ಲೇಟ್ ಕೂಡಾ ಇರಲಿಲ್ಲ. ದುಷ್ಕರ್ಮಿಗಳ ನೀಡಿದರೆ 50 ಲಕ್ಷರು ಬಹುಮಾನ ನೀಡುವುದಾಗಿ ಸಿಎಂ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.

Bomb Attack: Punjab CM announces a reward of Rs 50 lakh for Informers

ಕಾಬೂಲ್ ನ ಹೈಸ್ಕೂಲ್ ಎದುರು ಆತ್ಮಹತ್ಯಾ ದಾಳಿ, ಎಂಟು ಮಂದಿ ಸಾವುಕಾಬೂಲ್ ನ ಹೈಸ್ಕೂಲ್ ಎದುರು ಆತ್ಮಹತ್ಯಾ ದಾಳಿ, ಎಂಟು ಮಂದಿ ಸಾವು

ಶಂಕಿತರ ಮಾಹಿತಿ ನೀಡಿ, ತನಿಖೆಗೆ ಸಹಕರಿಸಿದಲ್ಲಿ ಸರ್ಕಾರ ವಿಶೇಷ ಬಹುಮಾನ ನೀಡಲಿದ್ದು, ಮಾಹಿತಿಯನ್ನು ಪಂಜಾಬ್ ಪೊಲೀಸರ ಸಹಾಯವಾಣಿ 181ಕ್ಕೆ ಕರೆ ಮಾಡಿ ನೀಡಬಹುದು

ಘಟನೆಯನ್ನು ಮೇಲ್ನೋಟಕ್ಕೆ ಗಮನಿಸಿದಲ್ಲಿ ಇದೊಂದು ಉಗ್ರ ಕೃತ್ಯ, ಖಾಲಿಸ್ತಾನ್ ಬೆಂಬಲಿಗರು ಮಾಡಿರಬಹುದು ಎಂದು ಅನುಮಾನ ಮೂಡಿದೆ. ಘಟನೆ ನಡೆದಾಗ 200ಕ್ಕೂ ಅಧಿಕ ಮಂದಿ ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂದು ಅಮೃತ್ ಸರ್ ಗಡಿ ಭಾಗದ ಐಜಿಪಿ ಎಸ್ ಪಿಎಸ್ ಪಾರ್ಮಾರ್ ಅವರು ಹೇಳಿದ್ದಾರೆ.

English summary
CM Capt Amarinder Singh announces a reward of Rs 50 lakh for information leading to the arrest of the suspects involved in the #AmritsarBlast. Information can be provided at Police helpline - 181. The identity of the informers will be kept secret: Media Advisor to Punjab CM
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X