ಅಭಿನಂದನ್ ರನ್ನು ನೇರವಾಗಿ ಕರೆದೊಯ್ದದ್ದು ಆರೋಗ್ಯ ತಪಾಸಣೆಗೆ

ವಾಘಾ, ಮಾರ್ಚ್ 1: ನಾವು ಮಾಧ್ಯಮದ ಪ್ರಶ್ನೆಯನ್ನು ತೆಗೆದುಕೊಳ್ಳುವುದಿಲ್ಲ ಅಂತಲೇ ಸೇನಾಧಿಕಾರಿ ಉತ್ತರ ಆರಂಭಿಸಿದರು. ಹೌದು, ವಿಂಗ್ ಕಮ್ಯಾಂಡರ್ ಅಭಿನಂದನ್ ಅವರು ಐದು ಗಂಟೆ ತಡವಾಗಿ ಪಾಕಿಸ್ತಾನದಿಂದ ಭಾರತ ತಲುಪಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಲು ಶುಕ್ರವಾರ ರಾತ್ರಿ ಸೇನಾಧಿಕಾರಿ ನಿರಾಕರಿಸಿದರು.

ಪಾಕಿಸ್ತಾನ ಅಧಿಕಾರಿಗಳಿಂದ ಹಸ್ತಾಂತರವಾದ ಅಭಿನಂದನ್ ಅವರನ್ನು ವಾಹನದಲ್ಲಿ ಕರೆದೊಯ್ಯಲಾಯಿತು. ಭಾರತಕ್ಕೆ ಹಸ್ತಾಂತರ ಆದ ತಕ್ಷಣ ಅಭಿನಂದನ್ ಅವರು ಮಾಧ್ಯಮಗಳ ಜತೆ ಒಂದೆರಡು ಮಾತುಗಳನ್ನಾದರೂ ಆಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ. ವಿಂಗ್ ಕಮ್ಯಾಂಡರ್ ನ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿದೆ.

Abhinandan taken for a detailed medical checkup

ಏರ್ ವೈಸ್ ಮಾರ್ಷಲ್ ಆರ್ ಜಿಕೆ ಕಪೂರ್ ಮಾತನಾಡಿ, ಅಭಿನಂದನ್ ರನ್ನು ನಮಗೆ ಹಸ್ತಾಂತರ ಮಾಡಿದ್ದಾರೆ. ಅವರನ್ನು ಈಗ ಸಂಪೂರ್ಣ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗುವುದು. ಏಕೆಂದರೆ ಅವರು ಯುದ್ಧ ವಿಮಾನದಿಂದ ಕೆಳಗೆ ಬಿದ್ದಿದ್ದರು. ಅವರನ್ನು ವಾಪಸ್ ಪಡೆದಿರುವುದರಿಂದ ಭಾರತೀಯ ವಾಯು ಸೇನೆಗೆ ಸಂತೋಷವಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+