ಅಮೃತಸರದಲ್ಲಿ ಆಮ್‌ಆದ್ಮಿ ಪಕ್ಷದ ಹಿರಿಯ ಮುಖಂಡನ ಮೇಲೆ ಗುಂಡಿನ ದಾಳಿ
ಚಂಡೀಗಢ, ನವೆಂಬರ್ 21: ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅಮೃತಸರದಲ್ಲಿ ನಡೆದಿದೆ.
ಮಂಗಳವಾರವಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿ ದಾಳಿ ನಡೆಸಿದ್ದ, ಇದೀಗ ಎಎಪಿ ಹಿರಿಯ ನಾಯಕ ಸುರೇಶ್ ಶರ್ಮಾ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.
ಮಂಗಳವಾರ ಸಂಜೆ ಸುಮಾರು 6.30ರ ಸುಮಾರಿಗೆ ಅಪರಚಿತ ವ್ಯಕ್ತೊಯೊಬ್ಬ ಶರ್ಮಾ ಅವರ ಫರ್ನಿಚರ್ ಅಂಗಡಿ ಬಳಿಗೆ ಬಂದು ಹತ್ತಿರದಿಂದಲೇ ಮೂರ್ನಾಲ್ಕು ಬಾರಿ ಶೂಟ್ ಮಾಡಿದ್ದಾನೆ.ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಗಾಯಗೊಂಡಿದ್ದ ಶರ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಕುರಿತಂತೆ ಎಎಪಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ವಿಪಕ್ಷ ನಾಯಕ ಹರ್ಪಾಲ್ ಸಿಂಗ್ ಚೀಮಾ ಮಾತನಾಡಿ, ಪಂಜಾಬ್ ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಹಗಲು ಹೊತ್ತೇ ಇಂತಹ ಘಟನೆಗಳು ನಡೆಯುತ್ತಿರುವುದು ನಿಜವಾಗಿಯೂ ಭಯ ಹುಟ್ಟಿಸುವಂಥದ್ದು ಎಂದು ತಿಳಿಸಿದ್ದಾರೆ. ಪೊಈಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications