ಚಲಿಸುತ್ತಿದ್ದ ಬೆಂಗಳೂರು ರೈಲಿನಲ್ಲಿ ಬೆಂಕಿ, ಹಲವು ರೈಲುಗಳ ಸಂಚಾರ ತಡ
ಗೋದಾವರಿ, ಮಾರ್ಚ್ 5: ಬೆಂಗಳೂರಿನಿಂದ ಜಾರ್ಖಂಡ್‌ನಲ್ಲಿರುವ ಜಮ್‌ಶೆಡ್‌ಪುರ್ ತೆರಳುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆಂಧ್ರದಲ್ಲಿ ಎಲ್ಲಾ ರೈಲುಗಳು ತಡವಾಗಿ ಸಂಚರಿಸಿದವು.
ಬೆಂಗಳೂರಿನಿಂದ ರೈಲು ಸೋಮವಾರ ತಡರಾತ್ರಿ ಜೆಮ್‌ಶೆಡ್ ಪುರಕ್ಕೆ ಹೊರಟಿತ್ತು ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಗೆ ತಲುಪಿದಾಗ ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ.

ಯಶವಂತಪುರ-ಟಾಟಾನಗರ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೇರೆ ಬೋಗಿಗಳಿಗೆ ಹರಡದಂತೆ ರೈಲ್ವೆ ಸಿಬ್ಬಂದಿಗಳೂ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸಫಲರಾಗಲಿಲ್ಲ. ವಿಜಯವಾಡ-ವಿಝಾಗ್ ಮಾರ್ಗದ ಎಲ್ಲಾ ರೈಲುಗಳ ಸಂಚಾರ ತಡವಾಯಿತು.












Click it and Unblock the Notifications