ಬಿಜೆಪಿ ಜೊತೆ ಟಿಡಿಪಿ ವಿಲೀನವಾಗಲಿದೆ: ಟಿಡಿಪಿ ಮುಖಂಡನ ಅಚ್ಚರಿಯ ಹೇಳಿಕೆ
ಅಮರಾವತಿ, ಜುಲೈ 11: "ಆಂಧ್ರಪ್ರದೇಶದಲ್ಲಿ ಬದ್ಧ ವೈರಿಗಳಾಗಿದ್ದ ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿ ವಿಲೀನಗೊಳ್ಳಲಿವೆ" ಎಂದು ಟಿಡಿಪಿ ಮಾಜಿ ಶಾಸಕ ಜೆಸಿ ಪ್ರಭಾಕರ ರೆಡ್ಡಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರಾಜಕೀಯದಲ್ಲಿ ಮಿತ್ರರು, ಶತ್ರುಗಳು ಎಂದಿರುವುದಿಲ್ಲ. ತೆಲುಗು ದೇಶಂ ಪಕ್ಷ ಬಿಜೆಪಿ ಜೊತೆ ವಿಲೀನಗೊಳ್ಳಲಿದೆ. ಬಿಜೆಪಿಗೂ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರಂಥವರ ಅನುಭವಿಗಳ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂದ್ರಬಾಬು ನಾಯ್ಡು ಅವರ ಮೇಲೆ ನಂಬಿಕೆ ಇದೆ. ಜೊತೆಗೆ ಆಂಧ್ರಪ್ರದೇಶದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿಗೆ ಟಿಡಿಪಿಯ ಅಗತ್ಯವಿದೆ ಎಂಬು ಸೂಚನೆಯನ್ನು ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ನಾಯಕ ಕಿಶನ್ ರೆಡ್ಡಿನೀಡಿದ್ದಾರೆ ಎಂದು ಅವರು ಹೇಳಿದರು.
ಆದರೆ ಕೆಲವು ಮೂಲಗಳ ಪ್ರಕಾರ ನಾಯ್ಡು ಆವರ ವಿರುದ್ಧ ಅಸಮಾಧಾನ ಹೊಂದಿರುವ ಪ್ರಭಾಕರ ರೆಡ್ಡಿ ಮತ್ತು ಅವರ ಸಹೋದರ ದಿವಾಕರ ರೆಡ್ಡಿ ಇಬ್ಬರೂ ಬಿಜೆಪಿ ಸೇರಲು ಉತ್ಸುಕರಾಗಿದ್ದು, ಅದಕ್ಕೆಂದೇ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಟಿಡಿಪಿ ಮುಖಂಡರಾದ ಲಂಕಾ ದಿನಕರ್, ವೈ ಎಸ್ ಚೌಧರಿ, ಸಿಎಂ ರಮೇಶ್, ಟಿಜಿ ವೆಂಕಟೇಶ್ ಮತ್ತು ತೆಲಂಗಾಣದ ಜಿ ಮೋಹನ್ ರೆಡ್ಡಿ ಅವರು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications