Get Updates
Get notified of breaking news, exclusive insights, and must-see stories!

ಸುಶಾಂತ್ ಸಿಂಗ್ ಸಾವಿನ ದುಃಖದಲ್ಲಿ ಫ್ಯಾನ್ಸ್ ಸೂಸೈಡ್!

ವಿಶಾಖಪಟ್ಟಣಂ, ಜೂನ್ 21: ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಮೃತಪಡುತ್ತಿರುವ ಹುಚ್ಚು ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಉತ್ತರ ಪ್ರದೇಶದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡ ಪ್ರಕರಣದ ಬೆನ್ನಲ್ಲೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಈಗ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 21ವರ್ಷದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ವಿಶಾಖಪಟ್ಟಣಂನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ, ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಳಾಗಿರುವುದು ಕಂಡು ಬಂದಿದೆ.

34 ವರ್ಷ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಅವರು ಕಿರುತೆರೆಯಲ್ಲಿ ಮಿಂಚಿ ನಂತರ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿದವರು. ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಿಂಗ್ ಅವರು ಜೂನ್ 14ರಂದು ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಾವು ಅನೇಕ ಅಭಿಮಾನಿಗಳು, ಆಪ್ತರಿಗೆ ಆಘಾತ ತಂದಿದೆ.

 ಆಘಾತಕ್ಕೊಳಗಾಗಿ ಮಂಕಾದ ಯುವತಿ

ಆಘಾತಕ್ಕೊಳಗಾಗಿ ಮಂಕಾದ ಯುವತಿ

ಜೂನ್ 14ರಂದು ಬಾಂದ್ರಾದ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಟಿವಿಯನ್ನು ನೋಡಿದ ಕ್ಷಣದಿಂದ ಈ ಯುವತಿ ಆಘಾತಕ್ಕೊಳಗಾಗಿದ್ದಳು, ಶ್ರೀಹರಿಪುರಂನ ನಿವಾಸದಲ್ಲಿ ಸುಶಾಂತ್ ಸಾವಿಗೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದಳು ಎಂದು ತಿಳಿದು ಬಂದಿದೆ.

 ಈ ಘಟನೆ ನಂತರ ಶಾಲೆಗೆ ಹಾಜರಾಗಿರಲಿಲ್ಲ

ಈ ಘಟನೆ ನಂತರ ಶಾಲೆಗೆ ಹಾಜರಾಗಿರಲಿಲ್ಲ

ಈ ಘಟನೆ ನಂತರ ಶಾಲೆಗೆ ಹಾಜರಾಗಿರಲಿಲ್ಲ, ನಿತ್ಯ ಕೆಲಸಕ್ಕೆ ಹೋಗುವುದನ್ನು ಮರೆತು ಮನೆಯಲ್ಲೇ ಉಳಿದುಕೊಂಡಿದ್ದಳು. ಮನೆಯವರ ಜೊತೆ ಕೂಡಾ ಮಾತನಾಡುತ್ತಿರಲಿಲ್ಲ. ಸುಮ್ಮನೆ ತನ್ನ ರೂಮಿಯಲ್ಲಿ ಕುಳಿತು ಹೆಚ್ಚಿನ ಸಮಯ ವಿಡಿಯೋ ನೋಡುವುದರಲ್ಲಿ ಕಳೆಯುತ್ತಿದ್ದಳು ಎಂದು ಆಪ್ತರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಬಳಿಕ ಸುಶಾಂತ್ ಸಾವಿನಿಂದ ಖಿನ್ನತೆಗೆ ಒಳಗಾಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.

 ಪೊಲೀಸ್ ಇಲಾಖೆಯಿಂದ ಮನವಿ

ಪೊಲೀಸ್ ಇಲಾಖೆಯಿಂದ ಮನವಿ

'ನಿಮ್ಮ ಮಕ್ಕಳೊಂದಿಗೆ ಯಾವಾಗಲೂ ಮಾತನಾಡುತ್ತಾ ಇರಿ. ಅವರಲ್ಲಿ ಯಾವುದೇ ಮಾನಸಿಕ ಖಿನ್ನತೆಯ ಲಕ್ಷಣಗಳು ಕಂಡುಬಂದರೆ ಅದನ್ನು ಸರಿಪಡಿಸುವತ್ತ ಗಮನ ಕೊಡಿ. ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಎಲ್ಲ ಪೋಷಕರಿಗೂ ಪೊಲೀಸ್ ಇಲಾಖೆಯಿಂದ ಮನವಿ ಮಾಡಲಾಗಿದೆ.

 ಸಾಲು ಸಾಲು ಆತ್ಮಹತ್ಯೆ ಪ್ರಕರಣಗಳು

ಸಾಲು ಸಾಲು ಆತ್ಮಹತ್ಯೆ ಪ್ರಕರಣಗಳು

ಪಾಟ್ನಾದಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಸುಶಾಂತ್ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದಳು.

'ಬದುಕುವ ಬದಲು ಸಾಯುವ ನಿರ್ಧಾರವನ್ನು ಸುಶಾಂತ್ ತೆಗೆದುಕೊಳ್ಳುವುದಾದರೆ ನಾನೂ ಏಕೆ ಮಾಡಬಾರದು?' ಎಂದು ಸೂಸೈಡ್ ನೋಟ್ ಬರೆದು ಉತ್ತರಪ್ರದೇಶದ ಬರೇಲಿಯ 15 ವರ್ಷದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್‌ನಲ್ಲಿ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+