ತಿರುಪತಿ ಬಂದ್ ಮಾಡಿ; ದರ್ಶನದ ವಿಚಾರ ಮತ್ತೆ ಆರಂಭ
ಅಮರಾವತಿ, ಜುಲೈ 20 : ಕೊರೊನಾ ವೈರಸ್ ಸೋಂಕು ತಗುಲಿದ್ದ ಟಿಟಿಡಿಯ ನಿವೃತ್ತ ಪ್ರಧಾನ ಅರ್ಚಕರೊಬ್ಬರು ಮೃತಪಟ್ಟಿದ್ದಾರೆ. ತಿರುಪತಿ ದೇವಾಲಯದಲ್ಲಿ ದರ್ಶನವನ್ನು ಸ್ಥಗಿತಗೊಳಿಸಬೇಕು ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
Recommended Video
73 ವರ್ಷದ ಶ್ರೀನಿವಾಸ ದೀಕ್ಷಿತುಲು ಎಸ್‌ವಿಐಎಂಎಸ್ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ತಿರುಪತಿ ದೇವಾಲಯದ ನಿವೃತ್ತ ಪ್ರಧಾನ ಅರ್ಚಕರಾಗಿದ್ದ ಅವರು ಗುರುವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಿರುಪತಿಯಲ್ಲಿ ದರ್ಶನವನ್ನು ನಿಲ್ಲಿಸಬೇಕು ಎಂಬ ಒತ್ತಾಯ ಮತ್ತೆ ಕೇಳಿ ಬಂದಿದೆ. ಟಿಟಿಡಿಯ 140 ಸಿಬ್ಬಂದಿಗೆ ಇದುವರವೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರ ಆರೋಗ್ಯದ ದೃಷ್ಟಿಯಿಂದ ದರ್ಶನ ನಿಲ್ಲಿಸಿ ಎಂದು ಒತ್ತಾಯಿಸಲಾಗುತ್ತಿದೆ.

ನಾಲ್ವರು ಸಹಾಯಕ ಅರ್ಚಕರು, 16 ಲಾಡು ಮಾಡುವ ಸಿಬ್ಬಂದಿ, 56 ಭದ್ರತಾ ಸಿಬ್ಬಂದಿ ಸೇರಿದಂತೆ ಟಿಟಿಡಿಯ 140 ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಟಿಟಿಡಿ ಮುಖ್ಯಸ್ಥ ವೈ. ವಿ. ಸುಬ್ಬಾರೆಡ್ಡಿ ದರ್ಶನ ನಿಲ್ಲಿಸಲು ನಿರಾಕರಿಸಿದ್ದಾರೆ.
ಪ್ರತಿದಿನ ಸುಮಾರು 12 ಸಾವಿರ ಭಕ್ತಾದಿಗಳು ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಕಂಟೈನ್ಮೆಂಟ್ ಝೋನ್‌ಗಳು, ಅತಿ ಹೆಚ್ಚು ಪ್ರಕರಣವಿರುವ ರಾಜ್ಯಗಳ ಭಕ್ತಾದಿಗಳು ಭೇಟಿ ನೀಡದಂತೆ ತಡೆಯಬಹುದು. ಆದರೆ, ದರ್ಶನ ನಿಲ್ಲಿಸುವುದಿಲ್ಲ ಎಂದು ಟಿಟಿಡಿ ಹೇಳಿದೆ.
ಆಂಧ್ರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟಿಟಿಡಿಗೆ ದರ್ಶನವನ್ನು ಭಕ್ತರ ಆರೋಗ್ಯದ ದೃಷ್ಟಿಯಿಂದ ನಿಲ್ಲಿಸಿ ಎಂದು ಪತ್ರ ಬರೆದಿದ್ದಾರೆ. ಆಂಧ್ರಪ್ರದೇಶ ಸರ್ಕಾರವೇ ಇನ್ನು ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ.












Click it and Unblock the Notifications