ಅಮಿತ್ ಶಾ ವ್ಯಂಗ್ಯಕ್ಕೆ ಚಂದ್ರಬಾಬು ನಾಯ್ಡು ಖಡಕ್ ಉತ್ತರ
ಅಮರಾವತಿ, ಫೆಬ್ರವರಿ 05: "ಎನ್ ಡಿಎ ಬಾಗಿಲು ಟಿಡಿಪಿ ಪಾಲಿಗೆ ಮುಚ್ಚಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಅವರ ಬಳಿ ಬಾಗಿಲು ತೆರೆಯುವುದಕ್ಕೆ ಹೇಳಿದವರ್ಯಾರು?" ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಸೋಮವಾರ ಸಮಾವೇಶವೊದರಲ್ಲಿ ಮಾತನಾಡುತ್ತಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, "ಚಂದ್ರಬಾಬು ನಾಯ್ಡು ಒಬ್ಬ ಯೂ ಟರ್ನ್ ಮುಖ್ಯಮಂತ್ರಿ" ಎಂದಿದ್ದರು. ಟಿಡಿಪಿ ಮತ್ತೆ ಎನ್ ಡಿಎ ಮೈತ್ರಿಕೂಟಕ್ಕೆ ಸೇರುವುದಾದರೆ ಅದಕ್ಕೆ ಅವಕಾಶವಿಲ್ಲ. ಎನ್ ಡಿಎ ಬಾಗಿಲು ಟಿಡಿಪಿ ಪಾಲಿಗೆ ಮುಚ್ಚಿದೆ ಎಂದು ಅಮಿತ್ ಶಾ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ತೆಲುಗು ದೇಶಂ ಪಕ್ಷದ ಮುಖಂಡ ನಾಯ್ಡು, ನೀವು ನಮಗೆ ಬಾಗಿಲು ತೆರೆಯುವುದು ಬೇಡ. ಲೋಕಸಭಾ ಚುನಾವಣೆಯ ನಂತರ ನಿಮ್ಮ ಬಾಗಿಲನ್ನೇ ಜನರು ಮುಚ್ಚುತ್ತಾರೆ. ನೋಡುತ್ತಿರಿ ಎಂದು ನಾಯ್ಡು ಹೇಳಿದ್ದಾರೆ.

"ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೆ, ಈ ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ಕೇಂದ್ರ ಸರ್ಕಾರವೇ ಕಾರಣವಾಗಿದೆ" ಎಂದು ನಾಯ್ಡು ದೂರಿದರು.












Click it and Unblock the Notifications