ವಿಧಾನಸಭೆ ಫಲಿತಾಂಶ: ತೆಲುಗು ನಟ ಪವನ್ ಕಲ್ಯಾಣ್ ಗೆ ಭಾರಿ ಹಿನ್ನಡೆ
ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಎಲೆಕ್ಷನ್ ಏಕಕಾಲಕ್ಕೆ ನಡೆದಿತ್ತು. ಇಂದು ಎರಡು ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ವಿಧಾನಸಭೆ ಎಲೆಕ್ಷನ್ ನಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಗೆ ಹಿನ್ನಡೆಯಾಗಿದೆ.
ಗಾಜುವಾಕ ಮತ್ತು ಭೀಮವರಂ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಪವನ್ ಕಲ್ಯಾಣ್ ಗೆ ಎರಡು ಕ್ಷೇತ್ರದಲ್ಲೂ ಆರಂಭಿಕ ಹಿನ್ನಡೆಯಾಗಿದೆ. 9.39ರ ಸಮಯಕ್ಕೆ ಹೊರಬಿದ್ದ ಎಣಿಕೆಯಲ್ಲಿ ಪವನ್ ಕಲ್ಯಾಣ್ ಗೆ ಅಲ್ಪ ಹಿನ್ನಡೆಯಲ್ಲಿದ್ದಾರಂತೆ.
175 ವಿಧಾನಸಭೆ ಕ್ಷೇತ್ರಕ್ಕೆ ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆದಿದ್ದು, ಈ ಬಾರಿ ಪವನ್ ಕಲ್ಯಾಣ್ ನೇತೃತ್ವದ ಜನಾಸೇನಾ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಇದುವರೆಗೂ ಜನಸೇನಾ ಪಕ್ಷದ ಯಾವ ಅಭ್ಯರ್ಥಿಯೂ ಮುನ್ನಡೆ ಕಾಯ್ಡುಕೊಂಡಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಸದ್ಯದ ಜಗನ್ ಮೋಹನ್ ರೆಡ್ಡಿ ಸಾರಥ್ಯದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ಆಂಧ್ರ ಪ್ರದೇಶದ ಚುಕ್ಕಾಣಿ ಹಿಡಿಯುತ್ತಾ ಹೆಜ್ಜೆ ಹಾಕಿದೆ. ಸಿಎಂ ಚಂದ್ರಬಾಬು ನಾಯ್ದು ಅವರ ಟಿಡಿಪಿ ಪಕ್ಷಕ್ಕೂ ತೀವ್ರ ಹಿನ್ನಡೆಯಾಗಿದೆ.












Click it and Unblock the Notifications