• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಮ್ಮ 'ನಾಯಿ'ಯನ್ನು ಹದ್ದುಬಸ್ತಿನಲ್ಲಿಡಿ: ನಾಯ್ಡುಗೆ ಟಿಡಿಪಿ ಸಂಸದನ ವಾರ್ನಿಂಗ್

|

ಅಮರಾವತಿ, ಜುಲೈ 15: "ನಿಮ್ಮ ಸಾಕು ನಾಯಿಯನ್ನು ಮೊದಲು ಹದ್ದುಬಸ್ತಿನಲ್ಲಿಡಿ, ಇಲ್ಲವೆಂದರೆ ನಾನು ಪಕ್ಷ ಬಿಟ್ಟು ಹೋಗುತ್ತೇನೆ" ಎಂದು ತೆಲುಗು ದೇಶಂ ಪಕ್ಷದ ಮುಖಂಡ, ಸಂಸದ ಕೇಸಿನೇನಿ ಶ್ರೀನಿವಾಸ್ ನಾನಿ ಎಂಬುವವರು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಎಚ್ಚರಿಕೆ ನೀಡಿದ್ದಾರೆ.

"ನಿಮಗೆ ನನ್ನಂಥವರು ಪಕ್ಷದಲ್ಲಿರುವುದು ಇಷ್ಟವಿಲ್ಲ ಎಂದಾದರೆ ಹೇಳಿಬಿಡಿ, ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಪಕ್ಷದಲ್ಲೇ ಮುಂದುವರಿಯಬೇಕು ಎಂದಾದರೆ ನಿಮ್ಮ ಸಾಕು ನಾಯಿಯನ್ನು ಹದ್ದುಬಸ್ತಿನಲ್ಲಿಡಿ" ಎಂದು ಶ್ರೀನಿವಾಸ್ ಖಡಕ್ಕಾಗಿ ಹೇಳಿದ್ದಾರೆ.

ಬಿಜೆಪಿ ಜೊತೆ ಟಿಡಿಪಿ ವಿಲೀನವಾಗಲಿದೆ: ಟಿಡಿಪಿ ಮುಖಂಡನ ಅಚ್ಚರಿಯ ಹೇಳಿಕೆ

ಟಿಡಿಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಬುದ್ಧ ಪ್ರಸಾದ್ ವೆಂಕಣ್ಣ ಮತ್ತು ಶ್ರೀನಿವಾಸ್ ಅವರ ನಡುವೆ ಪರಸ್ಪರ ವೈನಸ್ಯವಿದೆ. ವೆಂಕಣ್ಣ ಅವರು ನಾಯ್ಡು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಇದನ್ನು ಸಹಿಸದ ಶ್ರೀನಿವಾಸ್ ಪಕ್ಷ ತೊರೆಯುವ ಮಾತನ್ನಾಡಿದ್ದಾರೆ. ವೆಂಕಣ್ಣ ಅವರನ್ನೇ ಪರೋಕ್ಷವಾಗಿ 'ನಾಯಿ' ಎಂದು ಸಂಬೋಧಿಸಿದ್ದಾರೆ.

ಆದರೆ ಕೆಲವು ಮೂಲಗಳ ಪ್ರಕಾರ ಈಗಾಗಲೇ ಶ್ರೀನಿವಾಸ್ ಅವರು ಈಗಾಗಲೇ ಬಿಜೆಪಿ ಮಉಖಂಡ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅವರು ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗಿದೆ.

ನಾಯ್ಡುಗೆ ಆಘಾತ, ಪೆದ್ದಿರೆಡ್ಡಿ ಸೇರಿ ಹಿರಿಯ ಮುಖಂಡರು ಬಿಜೆಪಿಗೆ

ಇತ್ತೀಚೆಗಷ್ಟೇ ಟಿಡಿಪಿ ಮುಖಂಡರಾದ ಲಂಕಾ ದಿನಕರ್, ವೈ ಎಸ್ ಚೌಧರಿ, ಸಿಎಂ ರಮೇಶ್, ಟಿಜಿ ವೆಂಕಟೇಶ್ ಮತ್ತು ತೆಲಂಗಾಣದ ಜಿ ಮೋಹನ್ ರೆಡ್ಡಿ ಅವರು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Kesineni Srinivas Nani, the lawmaker from Vijayawada, Andhra Pradesh warns TDP leader and Ex C Chandrababu Naidu Control his close aid. He termed Chandrababu Naidu's close aid Buddha Prasad Venkanna as dog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X