ಇಸ್ರೋದಿಂದ GSAT-29 ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ
ಶ್ರೀಹರಿಕೋಟಾ, ನವೆಂಬರ್ 14 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬುಧವಾರದಂದು ಮತ್ತೊಂದು ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಯಶಸ್ವಿಯಾಗಿದೆ. GSAT-29 ಉಪಗ್ರಹವನ್ನು ಹೊತ್ತು GSLV-MK-III D2 ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದೆ.
3423 ಕೇಜಿ ತೂಕದ ಈ ಉಪಗ್ರಹವು ಭಾರತದಿಂದ ಉಡ್ಡಯನ ಆಗುತ್ತಿರುವ ಅತ್ಯಂತ ತೂಕದ ಉಪಗ್ರಹ ಆಗಿದೆ. GSLV-MK-III ಉಡ್ಡಯನ ವಾಹನವು ಐದನೇ ತಲೆಮಾರಿನ ತಂತ್ರಜ್ಞಾನ ಹೊಂದಿದ್ದು, ಇಸ್ರೋದಿಂದಲೇ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ನಾಲ್ಕು ಸಾವಿರ ಕೇಜಿ ತೂಕದವರೆಗಿನ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಸಾಧ್ಯವಿದೆ.

GSAT-29 ಮಲ್ಟಿಬೀಮ್ ಹಾಗೂ ಮಲ್ಟಿ ಬ್ಯಾಂಡ್ ಸಂವಹನ ಉಪಗ್ರಹವಾಗಿದೆ. ಈ ಉಪಗ್ರಹವನ್ನು 55 ಡಿಗ್ರಿ ಪೂರ್ವ ರೇಖಾಂಶಕ್ಕೆ ಅಂತಿಮವಾಗಿ ಸೇರಿಸಲಾಗುವುದು. ಹತ್ತು ವರ್ಷಗಳ ಕಾಲ ಈ ಉಪಗ್ರಹ ಕೆಲಸ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ನಿರ್ಮಿಸಲಾಗಿದೆ.
🔸#ISRO sucessfully launched #GSLVMkIIID2 carrying modern communication satellite #GSAT29 from Sriharikota.
— General Knowledge (@GuideforAll) 14 November 2018
- This is India's heaviest satellite.#ISROMissions
🔸MoS #Ayush laid foundation stone for All India Institute of #Ayurveda, #Yoga & #Naturopathy in #Goa.
Plz Retweet It pic.twitter.com/0R9hlXZz41
ಈ ಉಪಗ್ರಹ ಉಡ್ಡಯನದ ಯಶಸ್ಸು ಇನ್ನು ಮುಂದಿನ ನಾಲ್ಕು ವರ್ಷಕ್ಕೆ ಚಂದ್ರಯಾನ- 2 ಹಾಗೂ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಸಹಾಯ ಆಗಲಿದೆ ಎಂದು ಅಭಿಪ್ರಾಯ ಪಡಲಾಗಿದೆ.












Click it and Unblock the Notifications