ಮರುಮತದಾನವಾಗಲೇ ಬೇಕು: ಚಂದ್ರಬಾಬು ನಾಯ್ಡು ಆಗ್ರಹ
ಅಮರಾವತಿ, ಏಪ್ರಿಲ್ 11: ಇವಿಎಂ ದೋಷದ ಕಾರಣ ಮತದಾನದ ಪ್ರಮಾಣ ಕಡಿಮೆಯಾಗುತ್ತಿದ್ದು, ಮರುಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಚುನಾವಣಾ ಆಯೋಗಕ್ಕೆ ಪತ್ರಬರೆದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇವಿಎಂ ದೋಷದಿಂದ ಹಲವು ಮತಗಟ್ಟೆಗಳಲ್ಲಿ 9:30 ರವರೆಗೂ ಮತದಾನವೇ ಆರಂಭವಾಗಿರಲಿಲ್ಲ. ಮತದಾನಕ್ಕೆಂದು ಬೆಳಗ್ಗೆಯೇ ಬಂದು ಕುಳಿತಿದ್ದ ಜನರು ಇವಿಎಂ ದೋಷದಿಂದಾಗಿ ವಾಪಸ್ ತೆರಳಿದರು. ಆದರೆ ನಂತರ ಅವರ್ಯಾರೂ ಹಿಂದಿರುಗಿ ಬಂದಿದ್ದು ಕಾಣಲಿಲ್ಲ. ಆದ್ದರಿಂದ ಈ ಎಲ್ಲಾ ಬೂತ್ ಗಳಲ್ಲಿ ಮರುಮತದಾನ ನಡೆಯಬೇಕು ಎಂದು ನಾಯ್ಡು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳೆರಡೂ ಒಂದೇ ಹಂತದಲ್ಲಿ ಜೊತೆ ಜೊತೆಗೇ ನಡೆಯುತ್ತಿದ್ದು, ಇಂದು ಮತದಾನ ಆರಂಭವಾಗಿದೆ.

ಆಂಧ್ರ ಪ್ರದೇಶದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿದ್ದರೆ, 25 ಲೋಕಸಭಾ ಕ್ಷೇತ್ರಗಳಿವೆ.












Click it and Unblock the Notifications