ಕಾಲೇಜು ಪುನರ್ ಆರಂಭ ದಿನಾಂಕ ಘೋಷಿಸಿದ ಮುಖ್ಯಮಂತ್ರಿ

ಅಮರಾವತಿ, ಆ.7: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಲಾಗಿರುವ ಲಾಕ್ಡೌನ್ ಎಲ್ಲೆಡೆ ತೆರವುಗೊಂಡು ಅನ್ ಲಾಕ್ ಮಾರ್ಗ ಸೂಚಿಗಳು ಜಾರಿಯಲ್ಲಿವೆ. ಹೀಗಾಗಿ, ಸೂಕ್ತ ನಿರ್ದೇಶನದೊಂದಿಗೆ ಅಕ್ಟೋಬರ್ 15 ರಿಂದ ಶಾಲೆಗಳನ್ನು ಪುನರ್ ಆರಂಭಿಸಲು ಸಿದ್ಧರಾಗುವಂತೆ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

Recommended Video

      Karnataka Rain : ನದಿ ಮದ್ಯೆ ಸಿಲುಕಿದ್ದ ಕೋತಿಗಳನ್ನು ರಕ್ಷಿಸಿದ ರೋಚಕ ದೃಶ್ಯ | Oneindia Kannada

      ನಾಡು-ನೇಡು ಕಾರ್ಯಕ್ರಮದ ಅಡಿಯಲ್ಲಿ 456 ಕೋಟಿ ರು ವೆಚ್ಚದಲ್ಲಿ 15, 000 ಶಾಲೆ ರಿಪೇರಿ ಹಾಗೂ ಪುನರ್ ನಿರ್ಮಾಣ ಕಾರ್ಯದ ಮೊದಲ ಹಂತವನ್ನು ಪೂರೈಸಲಾಗಿದೆ. ಮಾರ್ಚ್ 23ರಿಂದ ಆಂಧ್ರಪ್ರದೇಶದ ಶಾಲೆ, ಕಾಲೇಜುಗಳು ಬಂದ್ ಆಗಿವೆ. ಆಗಸ್ಟ್ 03 ರಿಂದಲೇ ಶಾಲೆ ಆರಂಭಿಸಲು ಆಂಧ್ರ ಸರ್ಕಾರ ಮುಂದಾಗಿತ್ತು. ಆದರೆ, ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಕ್ಟೋಬರ್ 15ರಿಂದ ಕಾಲೇಜು, ವಿದ್ಯಾಸಂಸ್ಥೆಗಳನ್ನು ಮತ್ತೆ ಆರಂಭಿಸಲು ತೀರ್ಮಾನಿಸಲಾಯಿತು.

      ಶಾಲೆ, ಕಾಲೇಜು ಆರಂಭದ ಬಗ್ಗೆ ಅಧಿಕೃತ ಆದೇಶ ಹಾಗೂ ಮಾರ್ಗಸೂಚಿಗಳನ್ನು ಶೀಘ್ರದಲ್ಲೆ ಹೊರಡಿಸಲಾಗುತ್ತದೆ ಎಂದು ಜಗನ್ ಹೇಳಿದರು. ಇದೇ ವೇಳೆ ಪ್ರಕಾಶಂ ಹಾಗೂ ವಿಳಿಯನಗರಂ ಜಿಲ್ಲೆಗಳಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕರ್ನೂಲ್ ನಲ್ಲಿ ಕ್ಲಸ್ಟರ್ ವಿವಿ, ಕಡಪದಲ್ಲಿ ವಾಸ್ತುಶಿಲ್ಪ ವಿವಿ, ಕುರುಪ್ ನಲ್ಲಿ ಬುಡಕಟ್ಟು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಅದಿಮುಲಪು ಸುರೇಶ್ ಹೇಳಿದರು.

      Covid-19: Andhra Pradesh gears up to open colleges from October 15

      ಆಂಧ್ರಪ್ರದೇಶದಲ್ಲಿ 196789ಕ್ಕೂ ಅಧಿಕ ಕೊವಿಡ್ ಪ್ರಕರಣಗಳಿದ್ದು,ಇದುವರೆಗೂ 1,12,870 ಸೋಂಕಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯು 1,753ಕ್ಕೆ ಏರಿಕೆಯಾಗಿದೆ. 82,166 ಸೋಂಕಿತರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+