ನಮ್ಮನ್ನು ಕೆಣಕಿದರೆ ಹುಷಾರ್! ಶಾ ಗೆ ನಾಯ್ಡು ವಾರ್ನಿಂಗ್
Recommended Video

ವಿಜಯವಾಡ, ಫೆಬ್ರವರಿ 12: "ಆಂಧ್ರ ಪ್ರದೇಶದ ಜನರನ್ನು ಕೆಣಕಿದರೆ ಅಷ್ಟೇ, ನಾವು ಸುಮ್ಮನಿರೋಲ್ಲ" ಎಂದು ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಾಯ್ಡು ಅವರನ್ನು ಟೀಕಿಸಿ ಆಂಧ್ರದ ಜನತೆಗೆ ಅಮಿತ್ ಶಾ ಬಹಿರಂಗ ಪತ್ರವೊಂದನ್ನು ಬರೆದ ಕ್ರಮವನ್ನು ಟೀಕಿಸಿದ ನಾಯ್ಡು, ಇದು ಆಂಧ್ರದ ಜನತೆಗೆ ಮಾಡುವ ಅವಾನ. ನನ್ನನ್ನು ಯೂ ಟರ್ನ್ ಸಿಎಂ ಎಂದು ಕರೆಯುತ್ತೀರಿ. ನೀವು ವೃತ್ತಿಪರ ಸುಳ್ಳುಗಾರ ಎಂಬುದು ಜನರಿಗೂ ಗೊತ್ತು. ಆದರೆ ಟೀಕಿಸುವ ಭರದಲ್ಲಿ ಆಂಧ್ರದ ಜನತೆಗೆ ಅವಮಾನ ಮಾಡಿದರೆ, ಅಥವಾ ಪ್ರಚೋದನಾಕಾರಿಯಾಗಿ ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ನಾಯ್ಡು ಹೇಳಿದ್ದಾರೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಸೋಮವಾರ ನವದೆಹಲಿಯ ಆಂಧ್ರ ಪ್ರದೇಶ ಭವನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದ ನಾಯ್ಡು ಅವರನ್ನು ಮಹಾಘಟಬಂಧನದ ನಾಯಕರೂ ಭೇಟಿಯಾಗಿದ್ದರು.

'ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ಬಂದರೆ ನಾನೂ ಹಾಗೆಯೇ ಪ್ರತಿಕ್ರಿಯೆ ನೀಡಬೇಕಾಗುತ್ತದೆ' ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಯ್ಡು ಟಾಂಗ್ ನೀಡಿದ್ದರು.












Click it and Unblock the Notifications