ಮೋದಿ-ಕೆಸಿಆರ್ ಮಾತುಕತೆ: ನಾಯ್ಡು ಮನಸಲ್ಲಿ ಕಸಿವಿಸಿ!

ಅಮರಾವತಿ, ಡಿಸೆಂಬರ್ 27: ಸಂಯುಕ್ತ ಕೂಟದ ರಚನೆಯ ಸುದ್ದಿ ಹಬ್ಬುತ್ತಿರುವ ಹೊತ್ತಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಾಕಷ್ಟು ಕಸಿವಿಸಿಯನ್ನುಂಟು ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ನಾಯ್ಡು, "ಸಂಯುಕ್ತ ಕೂಟದ ರಚನೆಯ ಬಗ್ಗೆ ವರದಿ ಒಪ್ಪಿಸಲು ಮೋದಿಯವರನ್ನು ಕೆ ಸಿ ಆರ್ ಭೇಟಿಯಾಗಿದ್ದರೆ?" ಎಂದು ಪ್ರಶ್ನಿಸಿ ಲೇವಡಿ ಮಾಡಿದ್ದಾರೆ.

"ಸಂಯುಕ್ತ ಕೂಟದ ನೇತೃತ್ವ ಹೊತ್ತು, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚಿಸಲು ಹೊರಟ ಕೆಸಿಆರ್ ಮೋದಿಯವರನ್ನು ಭೇಟಿಯಾಗುವ ಅಗತ್ಯವೇನಿತ್ತು?" ಎಂದು ಅವರು ಪ್ರಶ್ನಿಸಿದ್ದಾರೆ.

Chandrababu Naidu criticises KCR and PM Modi meet

"ಕೆ ಚಂದ್ರಶೇಖರ ರಾವ್ ಅವರು ಮೋದಿಯವರನ್ನು ಭೇಟಿಯಾಗಿದ್ದು ತೆಲಂಗಾಣದ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆಯುವುದಕ್ಕಲ್ಲ. ಬದಲಾಗಿ ಸಂಯುಕ್ತ ಕೂಟದ ವರದಿ ಒಪ್ಪಿಸುವುದಕ್ಕೆ" ಎಂದು ಅವರು ದೂರಿದ್ದಾರೆ.

ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆಸಿಆರ್, ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಕೆಸಿಆರ್ ಪರೋಕ್ಷವಾಗಿ ಮೋದಿ ಬೆಂಬಲಕ್ಕೆ ನಿಂತಿದ್ದಾರೆ ಎಂಬ ವದಂತಿ ಹಬ್ಬಿದೆ.

ಭೇಟಿಯ ಸಂದರ್ಭದಲ್ಲಿ ತೆಲಂಗಾಣಕ್ಕೆ ಸಂಬಂಧಿಸಿದ ಕೆಲ ಬೇಡಿಕೆಗಳನ್ನೂ ಕೆಸಿಆರ್ ಮೋದಿಯವರ ಮುಂದಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+