ನಾಯ್ಡುಗೆ ಮತ್ತೊಂದು ಆಘಾತ, ಕುಟುಂಬಸ್ಥರಿಗೆ ನೀಡಿದ್ದ ಭದ್ರತೆ ವಾಪಸ್
ಅಮರಾವತಿ, ಜೂನ್ 25: ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಆಘಾತದ ಮೇಲೆ ಆಘಾತ ನೀಡುತ್ತಿರುವ ಜಗನ್ ಮೋಹನ್ ರೆಡ್ಡಿ ಸರ್ಕಾರ ಇದೀಗ ಮತ್ತೊಂದು ಆಘಾತ ನೀಡಿದೆ.
ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕುಟುಂಬದ ಸದಸ್ಯರಿಗೆ ನೀಡಿದ್ದ ಭದ್ರತೆಯನ್ನು ಜಗನ್ ಸರ್ಕಾರ ಹಿಂತೆಗೆದುಕೊಂಡಿದೆ. ನಾಯ್ಡು ಪುತ್ರ ನಾರಾ ಲೋಕೇಶ್ ಅವರಿಗೆ ನೀಡಿದ್ದ Z ಕ್ಯಾಟಗರಿ ಭದ್ರತೆಯನ್ನು ವಾಪಸ್ ಪಡೆದಿದ್ದು, ಅವರಿಗೆ 2+2 ಗನ್ ಮ್ಯಾನ್ ಭದ್ರತೆಯನ್ನು ನೀಡಿದೆ.
ಜೊತೆಗೆ ನಾಯ್ಡು ಅವರ ಕುಟುಂಬದ ಇತರ ಸದಸ್ಯರಿಗೆ ನೀಡಲಾಗಿದ್ದ ಭದ್ರತೆಯನ್ನು ಸಂಪೂರ್ಣ ವಾಪಸ್ ಪಡೆಯಲಾಗಿದೆ.

ಸೋಮವಾರವಷ್ಟೇ, ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರ ನಿವಾಸದ ಪಕ್ಕದಲ್ಲಿ ಕಟ್ಟಲಾದ ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮ ಮಾಡಲು ಆದೇಶಿಸಿದ್ದರು. ಈ ಕುರಿತು ಟಿಡಿಪಿ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅಕ್ರಮವಾಗಿ ಕಟ್ಟಡ ಕಟ್ತಲಾಗಿದೆ ಎಂದು ದೂರಿ ಇದನ್ನು ಕೆಡವಲು ಅನುಮತಿ ನೀಡಲಾಗಿತ್ತು. ಅದರ ಮರುದಿನವೇ ಭದ್ರತೆ ವಾಪಸ್ ಪಡೆಯಲು ಸರ್ಕಾರ ಆದೇಶಿಸಿದೆ.












Click it and Unblock the Notifications