ಜಗನ್ ಆದೇಶದಂತೆ ನಾಯ್ಡು ಅವರ ಪ್ರಜಾವೇದಿಕೆ ಕಟ್ಟಡ ನೆಲಸಮ

Recommended Video

      ಕೊನೆಗೂ ನಾಯ್ಡು ವಿರುದ್ಧ ತಿರುಗಿಬಿದ್ದ ಜಗನ್ ಮೋಹನ್ ರೆಡ್ಡಿ..? | Oneindia Kananda

      ಅಮರಾವತಿ, ಜೂನ್ 26: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆದೇಶದಂತೆ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ಮನೆಯ ಪಕ್ಕ ಕಟ್ಟಿಸಿಕೊಂಡಿದ್ದ ಪ್ರಜಾವೇದಿಕೆ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

      ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮ ಮಾಡಲು ಜಗನ್ ಆದೇಶಿಸಿದ್ದರು. ಟಿಡಿಪಿ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಆಕ್ರೋಶ ವ್ಯಕ್ತಪಡಿಸಿತ್ತು.

      AP: Demolition of Chandrababu Naidus Praja Vedike building underway in Amaravati

      ನದಿತಟದಲ್ಲಿರುವ ಸುಸಜ್ಜಿತ ಬಂಗಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಂದ್ರಬಾಬು ನಾಯ್ಡು ವಾಸವಿದ್ದಾರೆ. ಹೈದರಾಬಾದಿನಿಂದ ವಿಜಯವಾಡಕ್ಕೆ ರಾಜ್ಯ ಆಡಳಿತ ಕೇಂದ್ರ ಬದಲಾದ ಲಾಗಾಯ್ತೂ ಅವರು ಉಂಡವಳ್ಳಿ ಎಂಬಲ್ಲಿ ಸುಸಜ್ಜಿತ ಕಟ್ಟಡದಲ್ಲಿ ವಾಸವಿದ್ದಾರೆ. ಈ ಮನೆ ಓರ್ವ ಖಾಸಗಿ ವ್ಯಕ್ತಿಯದ್ದಾಗಿದ್ದು, ಹಿಂದಿನ ಸರ್ಕಾರ ಇದನ್ನು ಲೀಸಿಗೆ ತೆಗೆದುಕೊಂಡಿತ್ತು. ಇದನ್ನೇ ಚಂದ್ರಬಾಬು ನಾಯ್ಡು ಅವರ ಗೃಹಕಚೇರಿಯನ್ನಾಗಿ ಮಾಡಲಾಗಿತ್ತು. 'ಪ್ರಜಾ ವೇದಿಕಾ' ಎಂಬ ಅಭಾಂಗಣವನ್ನೂ ಚಂದ್ರಬಾಬು ನಾಯ್ಡು ಇಲ್ಲಿ ಕಟ್ಟಿಕೊಂಡಿದ್ದರು. ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿರುವ ಕಾರಣ ಚಂದ್ರಬಾಬು ನಾಯ್ಡು ವಾಸವಿದ್ದ ನಿವಾಸದ ಪ್ರಜಾ ವೇದಿಕೆ ಸಭಾಂಗಣದ ಭಾಗವನ್ನು ಮಾತ್ರ ನೆಲಸಮ ಮಾಡುವಂತೆ ಸರ್ಕಾರ ಆದೇಶಿಸಿತ್ತು.

      ಜಗನ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ನಿವಾಸವನ್ನು ಕೆಲ ದಿನಗಳ ಕಾಲ ಕಚೇರಿ ಕೆಲಸಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ನಾಯ್ಡು ಸರ್ಕಾರಕ್ಕೆ ಪತ್ರ ಸಹ ಬರೆದಿದ್ದರು.

      ಪ್ರಜಾವೇದಿಕೆ ನೆಲಸಮದೊಂದಿಗೆ, ನಾಯ್ಡು ಕುಟುಂಬಕ್ಕೆ ನೀಡಲಾಗಿದ್ದ ಭದ್ರತೆಯನ್ನೂ ಸರ್ಕಾರ ಹಿಂದಪಡೆಯುವ ಮೂಲಕ ಮಂಗಳವಾರವಷ್ಟೇ ಮತ್ತೊಂದು ಆಘಾತ ನೀಡಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+