ಆಂಧ್ರದಲ್ಲಿ ರಾಜಕೀಯ ಹೈಡ್ರಾಮಾ: ಚಂದ್ರಬಾಬು ನಾಯ್ಡು ಗೃಹಬಂಧನ
Recommended Video
ನವದೆಹಲಿ, ಸೆಪ್ಟೆಂಬರ್ 11: ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿದ್ದಂತೆಯೇ ರಾಜಕೀಯ ಹೈಡ್ರಾಮಾ ಆರಂಭವಾಗಿದೆ.
ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖಂಡರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ದೂರಿ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್ ಸೇರಿದಂತೆ ಹಲವು ಮುಖಂಡರನ್ನು ಗೃಹಬಂಧನದಲ್ಲಿರಿಸಲಾಗಿದೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೆಲವು ಮುಖಂಡರು 12 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದರು. ಆದರೆ ಅದಕ್ಕೂ ಮೊದಲೇ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.

ಟಿಡಿಪಿ ಪ್ರತಿಭಟನೆಗೆ ಪ್ರತಿಯಾಗಿ, ನಾಯ್ಡು ಆಡಳಿತಾವಧಿಯಲ್ಲಿ ಆಂಧ್ರದ ಕೆಲವು ಪ್ರದೇಶಗಳಲ್ಲಿ ಸರ್ಕಾರವೇ ನಡೆಸಿದ್ದ ಹಿಂಸಾಚಾರಗಳ ಬಗ್ಗೆ ಮಾತಣಾಡಿರುವ ವೈಎಸ್ ಆರ್ ಕಾಂಗ್ರೆಸ್, ಅಂಥ ಯಾವುದೇ ಹಿಂಸೆ ನಡೆದಿದ್ದರೂ ಜನರು ಮುಂದೆ ಬಂದು ದೂರು ನೀಡಿ, ನಾವು ಪರಿಹಾರ ದೊರಕಿಸಿಕೊಡುತ್ತೇವೆ ಎಂದಿದೆ. ಈ ಮೂಲಕ ಟಿಡಿಪಿ ನಾಯಕರಿಗೆ ಮತ್ತಷ್ಟು ಸಂಕಷ್ಟವನ್ನು ಉಂಟು ಮಾಡಲು ಮುಂದಾಗಿದೆ.












Click it and Unblock the Notifications