ಸೈಕಲ್ ಕೊಳ್ಳಲು ಇಟ್ಟಿದ್ದ ಹಣ ಸಿಎಂ ಪರಿಹಾರ ನಿಧಿಗೆ ಕೊಟ್ಟ ಪೋರ!

ವಿಜಯವಾಡ, ಏಪ್ರಿಲ್ 07 : ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾದ ಭಯ ಆವರಿಸಿದೆ. ಭಾರತದಲ್ಲಿ ಸೋಂಕು ಹರಡದಂತೆ ತಡೆಯಲು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ರಾಜ್ಯಗಳ ಖಜಾನೆಗೆ ಅಪಾರವಾದ ನಷ್ಟವಾಗುತ್ತಿದೆ.

Recommended Video

      ನಡೆದೇ ಬಿಡ್ತು ಬೆಂಗಳೂರು ಕರಗ ಮಹೋತ್ಸವ | Bengaluru Karaga | Karnataka | Oneindia kannada

      ವಿವಿಧ ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಜನರಿಂದಲೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಾಗುತ್ತಿದೆ. ಈ ಮೂಲಕ ಸಂಕಷ್ಟದ ಸಮಯದಲ್ಲಿ ಜನರು ಸರ್ಕಾರದ ಜೊತೆ ನಿಂತಿದ್ದಾರೆ.

      ಆಂಧ್ರ ಪ್ರದೇಶದಲ್ಲಿ 4 ವರ್ಷದ ಬಾಲಕ ಹೇಮಂತ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 971 ರೂ.ಗಳ ದೇಣಿಗೆ ನೀಡಿದ್ದಾನೆ. ಸೈಕಲ್ ತೆಗೆದುಕೊಳ್ಳಬೇಕು ಎಂಬುದು ಬಾಲಕನ ಕನಸಾಗಿತ್ತು. ಅದಕ್ಕಾಗಿ ಒದೊಂದು ರೂಪಾಯಿ ಕೂಡಿಸಿ ಹಣ ಸಂಗ್ರಹ ಮಾಡಿದ್ದ.

      4 Year Old Boy Donates 971 Rs For Andhra Pradesh CM Relief Fund

      ಆದರೆ, ಈಗ ಕೊರೊನಾ ಸಮಯದಲ್ಲಿ ಸೈಕಲ್ ತೆಗೆದುಕೊಳ್ಳುವುದಕ್ಕಿಂತ ಅದೇ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾನೆ. ಆ ಮೂಲಕ ದೇಣಿಗೆ ನೀಡುವ ಮೊತ್ತ ಮುಖ್ಯವಲ್ಲ, ಕೊಡುವ ಮನಸ್ಸು ದೊಡ್ಡದ್ದು ಎಂಬ ಸಂದೇಶವನ್ನು ರವಾನಿಸಿದ್ದಾನೆ.

      ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂಪುಟದಲ್ಲಿ ಸಚಿವರಾಗಿರುವ ಪೇರ್ನಿ ವೆಂಕಟರಮಣಯ್ಯ ವಿಜಯವಾಡದಲ್ಲಿರುವ ವೈಎಸ್ಆರ್‌ಪಿ ಪಕ್ಷದ ಕಚೇರಿಯಲ್ಲಿ ಬಾಲಕನಿಂದ ದೇಣಿಗೆಯನ್ನು ಮಂಗಳವಾರ ಪಡೆದರು. ಹಾಗೂ ಬಾಲಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

      4 Year Old Boy Donates 971 Rs For Andhra Pradesh CM Relief Fund

      ಆಂಧ್ರಪ್ರದೇಶದಲ್ಲಿ ಇದುವರೆಗೂ 304 ಕೊರೊನಾ ಸೋಂಕಿನ ಪ್ರಕರಣಗಳು ದಾಖಲವಾಗಿವೆ. ಮೂವರು ಇದುವರೆಗೂ ಮೃತಪಟ್ಟಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಜನರು ದೇಣಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+